ಫೆ. 26ರಂದು ರಶ್ಮಿಕಾ ಮದುವೆ?

ಸ್ಟಾರ್ ಜೋಡಿ  ರಶ್ಮಿಕಾ ಮಂದಣ್ಣ – ವಿಜಯ್ ದೇವರಕೊಂಡ  ಫೆಬ್ರವರಿ 26ರಂದು ರಾಜಸ್ಥಾನದ ಉದಯಪುರದಲ್ಲಿ ವಿವಾಹವಾಗಲಿದೆ ಎನ್ನಲಾಗಿದೆ.

ಮೂಲಗಳ  ಪ್ರಕಾರ ಮದುವೆ ತಯಾರಿಗಳು ಈಗಾಗಲೇ ಆರಂಭಗೊಂಡಿವೆ. ಉದಯಪುರದಲ್ಲಿ ನಡೆಯುವ ಮದುವೆಗೆ ಕುಟುಂಬಸ್ಥರು ಹಾಗೂ ಆಪ್ತರಿಗೆ ಮಾತ್ರ ಆಹ್ವಾನ ನೀಡಲಾಗುತ್ತಿದ್ದು, ಅದ್ಧೂರಿಯಾಗಿ ಕಾರ್ಯಕ್ರಮ ಆಯೋಜಿಸಲು ಪ್ಲಾನ್ ಮಾಡಲಾಗಿದೆ.

ಮದುವೆ ನಂತರ ಹೈದರಾಬಾದ್‌ನಲ್ಲಿ ಗ್ರ್ಯಾಂಡ್ ರಿಸೆಪ್ಶನ್ ಆಯೋಜಿಸಲು ನಿರ್ಧರಿಸಲಾಗಿದೆ. ಈ ಕಾರ್ಯಕ್ರಮಕ್ಕೆ  ವಿವಿಧ ಚಿತ್ರರಂಗದ ದಿಗ್ಗಜರಿಗೆ ಆಹ್ವಾನ ನೀಡಲು ತಯಾರಿ ನಡೆಯುತ್ತಿದೆ. ರಶ್ಮಿಕಾ ಮಂದಣ್ಣ  ಶೂಟಿಂಗ್‌ಗಳಲ್ಲಿ ಬ್ಯೂಸಿಯಾಗಿದ್ದರೂ, ಮದುವೆ  ತಯಾರಿಗಳಿಗೆ ಸಮಯ ಮೀಸಲಿಟ್ಟಿದ್ದಾರೆ ಎಂದು ವರದಿಯಾಗಿದೆ.

ಕೊಡಗಿನ  ರಶ್ಮಿಕಾ ಮಂದಣ್ಣ ಅವರು ಕೊಡವ ಸಂಪ್ರದಾಯದ ಪ್ರಕಾರ ಕೊಡಗಿನ ಮನೆಯಲ್ಲೂ ಕೆಲವು ಸಂಪ್ರದಾಯ ಕಾರ್ಯಕ್ರಮಗಳನ್ನು ನಡೆಸಲಿದ್ದಾರೆ. ಆದರೆ ಬೆಂಗಳೂರಿನಲ್ಲಿ ಯಾವುದೇ ಕಾರ್ಯಕ್ರಮ ಆಯೋಜಿಸುವ ಯೋಜನೆ ಇಲ್ಲ ಎನ್ನಲಾಗಿದೆ.

ರಶ್ಮಿಕಾ ಮಂದಣ್ಣ – ವಿಜಯ್ ದೇವರಕೊಂಡ ಅಕ್ಟೋಬರ್ 3ರಂದು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂಬ ಸುದ್ದಿ  ಹರಿದಾಡುತ್ತಿದೆ. ಆದರೆ ಈ ಕುರಿತು ಇದುವರೆಗೆ ರಶ್ಮಿಕಾ ಅಥವಾ ದೇವರಕೊಂಡ ಅಧಿಕೃತವಾಗಿ ಯಾವುದೇ ಮಾಹಿತಿ ನೀಡಿಲ್ಲ.

—–

 

 

Be the first to comment

Leave a Reply

Your email address will not be published. Required fields are marked *

Translate »
error: Content is protected !!