ಮಗಳಿಗಾಗಿ ಕಿರುತೆರೆ ನಟಿ ಪತ್ನಿಯನ್ನು ಆಕೆಯ ಪತಿ ಹಾಗೂ ನಿರ್ಮಾಪಕ ಹರ್ಷವರ್ಧನ್ ಅಪಹರಣ ಮಾಡಿರುವ ಸಂಬಂಧ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ನಟಿ ಪತ್ನಿ ಚೈತ್ರಾಳನ್ನು ಹರ್ಷವರ್ಧನ್ ಅಪಹರಿಸಿದ್ದಾರೆ. 2023ರಲ್ಲಿ ಕಿರುತೆರೆ ನಟಿ ಚೈತ್ರಾರನ್ನು ನಿರ್ಮಾಪಕ ಹರ್ಷವರ್ಧನ್ ಪ್ರೀತಿಸಿ ಮದುವೆಯಾಗಿದ್ದರು. ದಂಪತಿಗೆ ಒಂದು ವರ್ಷದ ಮಗುವಿದೆ. ಇದೀಗ ಮಗಳಿಗಾಗಿ ಪತ್ನಿಯನ್ನು ಅಪಹರಣ ಮಾಡಿರುವ ಆರೋಪ ಹರ್ಷವರ್ಧನ್ ವಿರುದ್ಧ ಕೇಳಿ ಬಂದಿದೆ.
ಮಗುವಾದ ಬಳಿಕ ಕೌಟುಂಬಿಕ ಕಲಹ ಹಿನ್ನೆಲೆ ಹರ್ಷವರ್ಧನ್ ಮತ್ತು ಚೈತ್ರಾ ಪ್ರತ್ಯೇಕವಾಗಿ ವಾಸ ಮಾಡಲು ಆರಂಭಿಸಿದ್ದರು. ಮಗಳನ್ನು ಬಿಟ್ಟಿರಲು ಆಗದೇ ಹರ್ಷವರ್ಧನ್ ಪತ್ನಿಯನ್ನು ಅಪಹರಿಸಿದ್ದಾರೆ ಎನ್ನಲಾಗಿದೆ. ಹರ್ಷವರ್ಧನ್ ತಮ್ಮ ಸ್ನೇಹಿತ ಕೌಶಿಕ್ ಎಂಬಾತನ ಮೂಲಕ ಚೈತ್ರಾಗೆ ಕರೆ ಮಾಡಿಸಿ, ಸೀರಿಯಲ್ ಚಿತ್ರೀಕರಣಕ್ಕಾಗಿ ಮೈಸೂರಿಗೆ ಬರುವಂತೆ ಹೇಳಿಸಲಾಗಿದೆ. 20 ಸಾವಿರ ರೂಪಾಯಿ ಅಡ್ವಾನ್ಸ್ ನೀಡಲಾಗಿತ್ತು. ಮೈಸೂರಿಗೆ ಬಂದ ಸಂದರ್ಭದಲ್ಲಿ ಪತ್ನಿಯನ್ನು ಅಪಹರಿಸಿ ಮಗಳನ್ನು ಕಳುಹಿಸುವಂತೆ ಅತ್ತೆಗೆ ಡಿಮ್ಯಾಂಡ್ ಮಾಡಲಾಗಿದೆ.
ಅಪಹರಣದ ವಿಷಯ ತಿಳಿಯುತ್ತಿದ್ದಂತೆ ಚೈತ್ರಾ ಸೋದರಿ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ಲಾನ್ ಮಾಡಿ ಮೈಸೂರಿನ ರಸ್ತೆ ಬಳಿ ಪತ್ನಿಯನ್ನು ಅಪಹರಿಸಿ ಅತ್ತೆಗೆ ಫೋನ್ ಮಾಡಿ ಬೆದರಿಕೆ ಹಾಕಿದ್ದಾರೆ ಎಂದು ದೂರಿದ್ದಾರೆ.
ಎಫ್ಐಆರ್ ದಾಖಲಿಸಿಕೊಂಡಿರುವ ಬ್ಯಾಟರಾಯನಪುರ ಠಾಣೆಯ ಪೊಲೀಸರು ಸಂಪರ್ಕ ಮಾಡ್ತಿದ್ದಂತೆ ಹರ್ಷವರ್ಧನ್ , ಪತ್ನಿಯನ್ನು ಬಿಟ್ಟು ಕಳುಹಿಸಿದ್ದಾರೆ. ಎಲ್ಲರನ್ನು ಠಾಣೆಗೆ ಕರೆಸಿಕೊಂಡು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ವರ್ಧನ್ ಸಿನಿಮಾಸ್ ಕಂಪನಿಯ ನಿರ್ಮಾಪಕರಾಗಿರುವ ಹರ್ಷವರ್ಧನ್, ‘ನಿನ್ನಲೇನೋ ಹೇಳಬೇಕು’ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಈ ಸಿನಿಮಾದಲ್ಲಿ ಹರ್ಷವರ್ಧನ್ ಮತ್ತು ಚೈತ್ರಾ ಜೊತೆಯಾಗಿ ನಟಿಸಿದ್ದಾರೆ.
—-





Be the first to comment