ಹಾಸ್ಯ ನಟ ಶಿವರಾಜ್ ಕೆ ಆರ್ ಪೇಟೆ ನಾಯಕ ನಟನಾಗಿ ನಟಿಸಿರುವ ಚಿತ್ರದ ಶೂಟಿಂಗ್ ಮುಕ್ತಾಯ ಆಗಿದೆ.
ಶ್ರೀಮತಿ ಲಲಿತಾ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ಶಿವರಾಜ್ ಕೆ ಆರ್ ಪೇಟೆ ನಟಿಸಿರುವ ನಂಬರ್ ಟು ಸಿನಿಮಾದ ಚಿತ್ರೀಕರಣ ಮುಕ್ತಾಯ ಆಗಿದ್ದು ಚಿತ್ರದ ತಂಡ ಕುಂಬಳಕಾಯಿ ಒಡೆದಿದೆ.
ಈ ಚಿತ್ರವನ್ನು ಶರತ್ ಚಕ್ರವರ್ತಿ ಅವರು ಕಥೆ, ಚಿತ್ರಕಥೆ ಬರೆಯುವ ಜೊತೆಗೆ ನಿರ್ದೇಶನ ಮಾಡಿದ್ದಾರೆ. ನಿರೀಕ್ಷಾ ರಾವ್ ಅವರು ನಾಯಕಿಯಾಗಿ ನಟಿಸಿದ್ದಾರೆ. ಚಿತ್ರದಲ್ಲಿ ಜಹಾಂಗೀರ್, ಬಲ ರಾಜವಾಡಿ ಸೇರಿದಂತೆ ಪ್ರತಿಭಾವಂತ ನಟರು ನಟಿಸಿದ್ದಾರೆ.

ಚಿತ್ರವನ್ನು ಮೂರು ಹಂತಗಳಲ್ಲಿ ಬೆಂಗಳೂರು, ಹಾಸನದ ಸುತ್ತಮುತ್ತಲ ಪ್ರದೇಶಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಹಳ್ಳಿ ಸೊಗಡಿನ ಈ ಚಿತ್ರದ ತಾಂತ್ರಿಕ ವರ್ಗ ಹಾಗೂ ಟೈಟಲ್ ಮುಂದಿನ ದಿನಗಳಲ್ಲಿ ಅನಾವರಣ ಆಗಲಿದೆ.
ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ತೊಡಗಿಸಿಕೊಂಡಿದೆ. ಶೀಘ್ರದಲ್ಲಿ ಸಿನಿಮಾವನ್ನು ಬಿಡುಗಡೆ ಮಾಡಲಾಗುವುದು ಎಂದು ನಿರ್ಮಾಣ ಸಂಸ್ಥೆ ತಿಳಿಸಿದೆ.






Be the first to comment