ಚಿತ್ರ: ದಿ ಡೆವಿಲ್
ನಿರ್ದೇಶನ: ಪ್ರಕಾಶ್ ವೀರ್
ನಿರ್ಮಾಣ: ಜೈ ಮಾತಾ ಕಂಬೈನ್ಸ್
ತಾರಾ ಬಳಗ: ದರ್ಶನ್, ರಚನಾ ರೈ, ಗಿಲ್ಲಿ ನಟ ಇತರರು
ರೇಟಿಂಗ್: 4
ಕೊಲೆ ಪ್ರಕರಣದ ಆರೋಪದಲ್ಲಿ ಜೈಲಿಗೆ ಸೇರಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅನುಪಸ್ಥಿತಿಯಲ್ಲಿ ಈ ವಾರ ಬಿಡುಗಡೆ ಆಗಿರುವ ದಿ ಡೆವಿಲ್ ಚಿತ್ರ ಕಥಾ ನಾಯಕನ ರಾಜಕೀಯ ಎಂಟ್ರಿ ಬಗ್ಗೆ ಸುಳಿವು ನೀಡುತ್ತದೆ.
ಚಿತ್ರದಲ್ಲಿ ಹಲವು ಗೆಟಪ್ ಗಳಲ್ಲಿ ದರ್ಶನ್ ಕಾಣಿಸಿಕೊಂಡಿದ್ದಾರೆ. ದರ್ಶನ್ ಸಿಎಂ ಆಗುವ ಮೂಲಕ ಅಭಿಮಾನಿಗಳಿಗೆ ಖುಷಿ ನೀಡಿದ್ದಾರೆ.
ಚಿತ್ರದಲ್ಲಿ ದರ್ಶನ್ ಅವರ ಎಂಟ್ರಿ ಜೋರಾಗಿದೆ. ಯಾವುದೇ ಸಿದ್ಧಸೂತ್ರ ಇಲ್ಲದೆ ಚಿತ್ರವನ್ನು ನಿರ್ಮಾಣ ಮಾಡುವ ಯತ್ನವನ್ನು ಮಾಡಲಾಗಿದೆ. ಮಾಸ್ ಡೈಲಾಗ್ ಗಳ ಜೊತೆಗೆ ಚಿತ್ರದಲ್ಲಿ ಸಾಕಷ್ಟು ಟ್ವಿಸ್ಟ್ ಗಳಿವೆ.
ದರ್ಶನ್ ಅವರು ನಟನೆಯಲ್ಲಿ ಗಮನ ಸೆಳೆಯುತ್ತಾರೆ. ನಾಯಕ ನಟಿ ರಚನಾ ರೈ ಅವರ ಚೆನ್ನಾಗಿದೆ. ಕಾಮಿಡಿ ಕಿಲಾಡಿ ಖ್ಯಾತಿಯ ಗಿಲ್ಲಿ ನಟ ತಮ್ಮ ನಟನೆಯಲ್ಲಿ ಸೈ ಎನಿಸಿಕೊಂಡಿದ್ದಾರೆ.
ಬಹು ನಿರೀಕ್ಷೆಯಲ್ಲಿದ್ದ ಅಭಿಮಾನಿಗಳಿಗೆ ಡೆವಿಲ್ ಚಿತ್ರ ಪೈಸಾ ವಸೂಲ್ ಸಿನಿಮಾ ಆಗಿದೆ. ಒಂದು ಬಾರಿ ಡೆವಿಲ್ ಚಿತ್ರವನ್ನು ನೋಡಲು ಅಡ್ಡಿಯಿಲ್ಲ ಅನಿಸುತ್ತದೆ.





Be the first to comment