ಜೈಲಿನಲ್ಲಿ ದರ್ಶನ್ ದಾದಾಗಿರಿ?

ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲಿನಲ್ಲಿ ಸಹಕೈದಿಗಳಿಗೆ  ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿದ್ದಾರೆ ಎಂಬ ಗಂಭೀರ ಮಾಹಿತಿ ಹೊರಬಿದ್ದಿದೆ.

ದರ್ಶನ್ ಜೊತೆಗೆ ಇದ್ದ  ಸಹಕೈದಿಗಳು ಅವರ ಕಿರುಕುಳ ತಾಳಲಾರದೇ, “ ಬೇರೆ ಜೈಲಿಗೆ ಸ್ಥಳಾಂತರಿಸಿ, ಇಲ್ಲದಿದ್ದರೆ ನಾವು ಸತ್ತು ಬಿಡುತ್ತೇವೆ” ಎಂದು ಜೈಲು ಅಧಿಕಾರಿಗಳ ಬಳಿ ಮನವಿ ಮಾಡಿದ್ದಾರೆ.

ದರ್ಶನ್ ಜೊತೆಗೆ  ಕೇಸಿನಲ್ಲಿ ಬಂಧಿತವಾಗಿರುವ ಅನುಕುಮಾರ್, ಜಗ್ಗ ಅಲಿಯಾಸ್ ಜಗದೀಶ್, ನಾಗರಾಜ್, ಪ್ರದೋಶ್ ಮತ್ತು ಲಕ್ಷ್ಮಣ  ಇವರಲ್ಲಿ ನಾಗರಾಜ್ ಅವರನ್ನು ಹೊರತುಪಡಿಸಿ ಉಳಿದ ಸಹಕೈದಿಗಳಿಗೆ ದರ್ಶನ್ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿದ್ದಾರಂತೆ.  ಅನುಕುಮಾರ್ ಮತ್ತು ಜಗ್ಗ ಅವರು ಜೈಲು ಅಧಿಕಾರಿಗಳ ಬಳಿ ಚಿತ್ರದುರ್ಗ ಜೈಲಿಗೆ ಶಿಫ್ಟ್ ಮಾಡಿರಿ ಎಂದು ಅಳುತ್ತಾ ಕೇಳಿಕೊಂಡಿದ್ದಾರೆ.

 ಜೈಲಿನಲ್ಲಿ ನಡೆದ ಗಲಾಟೆ ವಿಚಾರ ಸುಪ್ರೀಂ ಕೋರ್ಟ್ ತನಕ ಹೋದ ನಂತರ ಅಧಿಕಾರಿಗಳು ಇತ್ತೀಚೆಗೆ ನಿಯಮಾವಳಿ   ಕಠಿಣಗೊಳಿಸಿದ್ದಾರೆ. ಹೊಸದಾಗಿ ಜೈಲಿನ ಮುಖ್ಯ ಸೂಪರಿಂಟೆಂಡೆಂಟ್ ಆಗಿ ಅಧಿಕಾರ ವಹಿಸಿಕೊಂಡಿರುವ  ಅಂಶು ಕುಮಾರ್  ಜೈಲಿನಲ್ಲಿ ವಿಶೇಷ ನಿಗಾ ವ್ಯವಸ್ಥೆ ಜಾರಿಗೆ ತಂದಿದ್ದಾರೆ.  ದರ್ಶನ್   ಸೆಲ್ ಬಳಿ ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಆಗಿದ್ದು, ಅವರ ಚಲನವಲನಗಳ ಮೇಲೆ 24 ಗಂಟೆಗಳ ನಿಗಾವಿದೆ.

ಇತ್ತೀಚೆಗೆ ದರ್ಶನ್ ಅವರ ಸೆಲ್‌ನಲ್ಲಿ ದೊಡ್ಡ ಜಗಳ ಸಂಭವಿಸಿದೆ ಎನ್ನಲಾಗುತ್ತಿದೆ. ಜಗ್ಗ ಜೊತೆ ನಡೆದ ಈ ಗಲಾಟೆಯ ವೇಳೆ   ದರ್ಶನ್ ಮಲಗಿದ್ದ ಕೈದಿಗಳನ್ನು ಕಾಲಿನಿಂದ ಒದ್ದು ಎಬ್ಬಿಸಿ, ಅವಾಚ್ಯ ಪದಗಳಲ್ಲಿ ಬೈದಿದ್ದಾರೆಂಬ ದೂರು ಬಂದಿದೆ.

ದರ್ಶನ್ ಮೇಲೆ ಕಟ್ಟುನಿಟ್ಟಿನ ನಿಗಾವನ್ನು ಹೆಚ್ಚಿಸಿರುವ ಜೈಲು ಅಧಿಕಾರಿಗಳು, ಅವರ ನಡೆನುಡಿ  ದಾಖಲೆ ಮಾಡಲು ಸಿಸಿಟಿವಿ ವ್ಯವಸ್ಥೆ ಬಲಪಡಿಸಿದ್ದಾರೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!