ಶಿವರಾಜ್ ಕುಮಾರ್, ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಅವರು ನಟಿಸಿರುವ ಬಹುನಿರೀಕ್ಷಿತ ಚಿತ್ರ 45ರ ಟ್ರೈಲರ್ ಡಿಸೆಂಬರ್ 15ರಂದು ಒಟ್ಟು 7 ಜಿಲ್ಲೆಗಳಲ್ಲಿ ಬಿಡುಗಡೆಯಾಗಲಿದೆ.
ಮೈಸೂರು, ಮಂಗಳೂರು, ಶಿವಮೊಗ್ಗ, ಹೊಸಪೇಟೆ, ಹುಬ್ಬಳ್ಳಿ, ತುಮಕೂರು, ದಾವಣಗೆರೆಯಲ್ಲಿ ಪ್ರಮುಖ ಚಿತ್ರಮಂದಿರಗಳಲ್ಲಿ ಅಭಿಮಾನಿಗಳ ಸಮ್ಮುಖದಲ್ಲಿ ಟ್ರೈಲರ್ ಬಿಡುಗಡೆ ಆಗಲಿದೆ ಎಂದು ಚಿತ್ರದ ನಿರ್ದೇಶಕ ಅರ್ಜುನ್ ಜನ್ಯ ಅವರು ಹೇಳಿದ್ದಾರೆ.
ನಾನು 20 ವರ್ಷಗಳ ಸಿನಿಮಾ ಪ್ರಯಾಣದಲ್ಲಿ 150ಕ್ಕೂ ಹೆಚ್ಚು ಚಿತ್ರಗಳಿಗೆ ಸಂಗೀತ ನೀಡಿದ್ದೇನೆ. ಎಲ್ಲಾ ಚಿತ್ರಗಳ ಪರಿಶ್ರಮಗಿಂತ ಹೆಚ್ಚು ಶ್ರಮವನ್ನು ಈ ಚಿತ್ರಕ್ಕೆ ಹಾಕಿದ್ದೇನೆ. ಚಿತ್ರದ ಕಲಾವಿದರು ಡಿಸೆಂಬರ್ 15ರಿಂದ ಜನವರಿ 5 ರವರೆಗೆ ನಮ್ಮ ಜೊತೆ ಇದ್ದು ಚಿತ್ರದ ಪ್ರಮೋಷನ್ ನಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಟೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಮೂವರು ಸ್ಟಾರ್ ನಟರೊಂದಿಗೆ ಅಭಿಮಾನಿಗಳು ಮಾತನಾಡಬಹುದು. ಬೆಂಗಳೂರಿನಲ್ಲಿ ದೊಡ್ಡಮಟ್ಟದ ಕಾರ್ಯಕ್ರಮ ನಡೆಯಲಿದೆ ಎಂದು ನಿರ್ಮಾಪಕ ರಮೇಶ್ ರೆಡ್ಡಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಪ್ರಯತ್ನವನ್ನು ನಾವು ಮಾಡಿದ್ದೇವೆ. ಸೆನ್ಸಾರ್ ನವರು ಸಿನಿಮಾ ನೋಡಿ ನಮ್ಮ ಜೊತೆ ಖುಷಿಯಿಂದ ಮಾತನಾಡಿದ್ದಾರೆ. ಕಥೆಗೆ ಸಾಂಗ್ ಬೇಕಾಗಿರಲಿಲ್ಲ. ಈ ಕಾರಣದಿಂದ ಒಂದೇ ಸಾಂಗ್ ಇದೆ ಎಂದು ಹೇಳಿದ್ದಾರೆ.
45 ಚಿತ್ರ ಡಿಸೆಂಬರ್ 25ರಂದು ವಿಶ್ವದಾದ್ಯಂತ ಬಿಡುಗಡೆ ಆಗಲಿದೆ.





Be the first to comment