OLC

Movie Review: ನಕ್ಸಲ್ ಹೋರಾಟದ ಕಥೆ ‘OLC’

ಚಿತ್ರ: ಆಫ್ಟರ್ ಆಪರೇಷನ್ ಲಂಡನ್ ಕೆಫೆ(OLC)
ನಿರ್ದೇಶನ: ಸಡಗರ ರಾಘವೇಂದ್ರ
ತಾರಾ ಬಳಗ: ಕವೀಶ್ ಶೆಟ್ಟಿ, ಮೇಘಾ ಶೆಟ್ಟಿ, ಬಿ ಸುರೇಶ್, ಶಿವಾನಿ ಸುರ್ವೆ, ಅರ್ಜುನ್ ಕಾಪಿಕಾಡ್, ಇತರರು
ರೇಟಿಂಗ್: 3.5

ನಕ್ಸಲರ ಬದುಕಿನ ಕಥೆಯನ್ನು ಭಾವನಾತ್ಮಕವಾಗಿ ಹೇಳುವ ಚಿತ್ರ ಈ ವಾರ ತೆರೆಗೆ ಬಂದಿರುವ ಆಫ್ಟರ್ ಆಪರೇಷನ್ ಲಂಡನ್ ಕೆಫೆ ಚಿತ್ರ.

ಚಿತ್ರದಲ್ಲಿ ನಕ್ಸಲರ ಹೋರಾಟದ ಕಿಚ್ಚಿನ ಜೊತೆಗೆ ಮನುಷ್ಯ ಸಹಜವಾದ ಪ್ರೀತಿ ಪ್ರೇಮದ ಕಥೆ ಇದೆ. ನಕ್ಸಲ್ ಸಿದ್ಧಾಂತವನ್ನು ಮೀರಿ ಪ್ರೀತಿಯ ಪಾಶಕ್ಕೆ ಬೀಳುವ ನಾಯಕನ ಪ್ರೀತಿ ಮುಂದೆ ಏನಾಗುತ್ತದೆ ಎನ್ನುವುದಕ್ಕೆ ಈ ಚಿತ್ರವನ್ನು ಮಾಡಬೇಕಿದೆ.

ಕಾಡಂಚಿನ 30 ಗ್ರಾಮಗಳನ್ನು ಸರ್ಕಾರ ತನ್ನ ತೆಕ್ಕೆಗೆ ತೆಗೆದುಕೊಳ್ಳಲು ನಿರ್ಧರಿಸಿದಾಗ ಕ್ರಾಂತಿಕಾರಿ ನಕ್ಸಲ್ ಗುಂಪಿನ ಆಗಮನ ಆಗುತ್ತದೆ. ಈ ಗುಂಪು ಊರಿನ ಸಮಸ್ಯೆಗಳ ವಿರುದ್ಧ ಹೋರಾಡಲು ಮುಂದಾಗುತ್ತದೆ. ಈ ನಡುವೆ ಗುಂಪಿನ ಮುಖಂಡನಿಗೆ ಗ್ರಾಮದ ಯುವತಿಯ ಜೊತೆಗೆ ಪ್ರೇಮಾಂಕುರ ಆಗುತ್ತದೆ. ಈ ಪ್ರೀತಿಯನ್ನು ಒಪ್ಪದ ನಕ್ಸಲರ ಗುಂಪು ಮುಖಂಡನ ವಿರುದ್ಧ ತಿರುಗಿ ಬೀಳುತ್ತದೆ. ಮುಂದೆ ಇವರಿಬ್ಬರ ಪ್ರೀತಿಯ ಕಥೆ ಏನಾಗುತ್ತದೆ? ಊರಿನ ಹೋರಾಟದ ಕಥೆ ಎಲ್ಲಿಗೆ ಬರುತ್ತದೆ ಎನ್ನುವುದನ್ನು ತಿಳಿಯಲು ಚಿತ್ರವನ್ನು ನೋಡಬೇಕಿದೆ.

ಚಿತ್ರವನ್ನು ಆರಂಭದಿಂದ ಅಂತ್ಯದವರೆಗೆ ಕುತೂಹಲದಿಂದ ನಿರ್ದೇಶಕರು ಕಟ್ಟಿಕೊಟ್ಟಿದ್ದಾರೆ. ನಾಯಕ ನಟ ಕವೀಶ್ ಶೆಟ್ಟಿ ಉತ್ತಮವಾಗಿ ನಟಿಸಿದ್ದಾರೆ. ಮೇಘಾ ಶೆಟ್ಟಿ ತಮ್ಮ ಅಭಿನಯದ ಮೂಲಕ ಗಮನ ಸೆಳೆಯುತ್ತಾರೆ. ಶಿವಾನಿ ಸುರ್ವೆ ಸೇರಿದಂತೆ ಇತರ ಕಲಾವಿದರು ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.

ಆರ್ ಡಿ ನಾಗಾರ್ಜುನ ಅವರ ಕ್ಯಾಮರಾ ಕೆಲಸ ಗಮನ ಸೆಳೆಯುತ್ತದೆ. ಚಿತ್ರದ ಹಾಡುಗಳು ಕೇಳುವಂತಿವೆ.

ಕ್ರಾಂತಿಕಾರಿ ಹೋರಾಟದ ಚಿತ್ರವಾಗಿ ಓ ಎಲ್ ಸಿ ಗಮನ ಸೆಳೆಯುತ್ತದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!