I am God

Movie Review: ಹೆಣ್ಣೇ… ಹೆಣ್ಣಾಗಿರು ಎನ್ನುವ I am God

ಚಿತ್ರ: ಐ ಯಾಮ್ ಗಾಡ್ (I am God)
ನಿರ್ದೇಶನ, ನಿರ್ಮಾಣ: ರವಿ ಗೌಡ
ತಾರಾಬಳಗ: ರವಿ ಗೌಡ, ವಿಬೇತಾ, ರವಿಶಂಕರ್, ನಿರಂಜನ್, ಚೇತನ್ ದುರ್ಗ, ಅವಿನಾಶ್, ಅರುಣಾ ಬಾಲರಾಜ್
ರೇಟಿಂಗ್: 3.5

ಇಂದಿನ ಸಮಾಜದಲ್ಲಿ ಹೆಣ್ಣು ಮಕ್ಕಳಿಂದ ಆಗುತ್ತಿರುವ ಶೋಷಣೆಯನ್ನು ಅನಾವರಣ ಮಾಡುವ ಜೊತೆಗೆ ಹೆಣ್ಣು ಮಕ್ಕಳು, ಹೆಣ್ಣು ಮಕ್ಕಳಾಗಿ ವರ್ತನೆ ತೋರಲಿ ಎಂದು ಸಂದೇಶವನ್ನು ಸಾರುವ ಚಿತ್ರ ಈ ವಾರ ತೆರೆಗೆ ಬಂದಿರುವ I am God.

ಉಪೇಂದ್ರ ಅವರ ಶಿಷ್ಯ ಆಗಿರುವ ರವಿಗೌಡ ಅವರು ತಮ್ಮ ನಿರ್ದೇಶನದ ಚಿತ್ರದಲ್ಲಿ ಉಪೇಂದ್ರ ಅವರ ಪ್ರಭಾವವನ್ನು ತೋರಿಸಿದ್ದಾರೆ. ಮದುವೆಯ ಹೆಸರಿನಲ್ಲಿ ಕನಸು ಹೊತ್ತ ಗಂಡು ಮಕ್ಕಳ ಬದುಕು ಯಾವ ರೀತಿ ಹೆಣ್ಣು ಮಕ್ಕಳ ದುರಾಸೆ, ಕೆಟ್ಟ ವರ್ತನೆಗಳಿಂದ ಹಾಳಾಗುತ್ತದೆ ಎನ್ನುವುದನ್ನು ಚಿತ್ರದಲ್ಲಿ ತೋರಿಸಿದ್ದಾರೆ. ವಾಸ್ತವಕ್ಕೆ ಹತ್ತಿರವಾಗುವಂತೆ ಚಿತ್ರವನ್ನು ಕಟ್ಟಿಕೊಡುವಲ್ಲಿ ನಿರ್ದೇಶಕರು ಯಶಸ್ವಿಯಾಗಿದ್ದಾರೆ.

ನಾಯಕ ನಟನೂ ಆಗಿರುವ ರವಿಗೌಡ ಅವರು ನಟನೆ ಹಾಗೂ ನಿರ್ದೇಶನದಲ್ಲಿ ಗೆದ್ದಿದ್ದಾರೆ. ಇವತ್ತಿನ ಸಮಾಜಕ್ಕೆ ಏನು ಬೇಕಿದೆಯೋ ಅದನ್ನು ಸಿನಿಮಾದ ಮೂಲಕ ಕಟ್ಟಿಕೊಟ್ಟಿದ್ದಾರೆ. ಅವರ ನಟನೆ, ಡೈಲಾಗ್ ಡೆಲಿವರಿ ಹೊಸ ಭರವಸೆ ಹುಟ್ಟಿಸಿದೆ.

ಪೊಲೀಸ್ ಪಾತ್ರದಲ್ಲಿ ರವಿಶಂಕರ್ ಮಿಂಚಿದ್ದಾರೆ. ಗಂಭೀರ ಪಾತ್ರದ ಮೂಲಕ ನಗಿಸಿ ಅವರು ಗಮನ ಸೆಳೆದಿದ್ದಾರೆ. ನಾಯಕಿ ವಿಜೇತಾ ನಟನೆ ಸೂಪರ್ಬ್ ಆಗಿದೆ. ಅವಿನಾಶ್, ಅರುಣಾ ಬಾಲರಾಜ್ ತಮ್ಮ ಪಾತ್ರದ ಮೂಲಕ ಕಾಡುತ್ತಾರೆ.

ಚಿತ್ರದ ಹಿನ್ನೆಲೆ ಸಂಗೀತ ಗಮನ ಸೆಳೆಯುತ್ತದೆ. ಜಿತಿನ್ ದಾಸ್ ಕ್ಯಾಮೆರಾ, ಆನಂದ್ ಕಲಾ ನಿರ್ದೇಶನ, ಸುರೇಶ್ ಸಂಕಲನ ಚಿತ್ರಕ್ಕೆ ಜೀವ ತುಂಬಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!