ಯಾರಿಗೂ ಹೇಳ್ಬೇಡಿ

Movie Review: ಮದುವೆಯಾಗಲು ಸುಳ್ಳು ‘ಯಾರಿಗೂ ಹೇಳ್ಬೇಡಿ’

ಚಿತ್ರ: ಯಾರಿಗೂ ಹೇಳ್ಬೇಡಿ
ನಿರ್ದೇಶನ: ಶಿವ ಗಣೇಶ್
ನಿರ್ಮಾಣ: ಹರೀಶ್ ಅಮ್ಮಿನೇಲಿ, ಸುನಿಲ್
ತಾರಾ ಬಳಗ: ಚೇತನ್ ವಿಕ್ಕಿ, ಚೈತ್ರಾ ಆಚಾರ್, ಅಪ್ಪಣ್ಣ, ಅಶ್ವಿನಿ, ಶರತ್ ಲೋಹಿತಾಶ್ವ, ಇತರರು
ರೇಟಿಂಗ್: 3.5

ಮದುವೆಯಾಗಲು ಸುಳ್ಳು ಹೇಳಿದಾಗ ಯಾವ ರೀತಿಯ ಕಗ್ಗಂಟಿಗೆ ಸಿಲುಕಿಕೊಳ್ಳಬೇಕಾಗುತ್ತದೆ ಎನ್ನುವುದನ್ನು ಹೇಳುವ ಚಿತ್ರ ಈ ವಾರ ಬಿಡುಗಡೆ ಆಗಿರುವ ಯಾರಿಗೂ ಹೇಳ್ಬೇಡಿ!

ಇದೊಂದು ಸಂಪೂರ್ಣ ಮನೋರಂಜನಾ ಚಿತ್ರ. ಯುವಕನೊಬ್ಬನ ಜೀವನದಲ್ಲಿ ಎದುರಾಗುವ ಸಮಸ್ಯೆಗಳನ್ನು ಹಾಸ್ಯ ಮಿಶ್ರಣದೊಂದಿಗೆ ನಿರ್ದೇಶಕರು ಪ್ರೇಕ್ಷಕರ ಮುಂದೆ ಇಟ್ಟಿದ್ದಾರೆ.

ವಾಹಿನಿಯೊಂದರಲ್ಲಿ ನಿರೂಪಕಾಗಿ ಕೆಲಸ ಮಾಡುವ ಯುವಕನಿಗೆ ಡಾಕ್ಟರ್ ಒಬ್ಬಳ ಪರಿಚಯವಾಗುತ್ತದೆ. ನಿರೂಪಕ ಯುವಕ ದುಶ್ಚಟಗಳ ರಾಜ ಆದರೆ ಡಾಕ್ಟರ್ ತನ್ನನ್ನು ಮದುವೆ ಆಗುವವರು ಯಾವುದೇ ದುಶ್ಚಟ ಹೊಂದಿರಬಾರದು ಎನ್ನುವ ಮನೋಭಾವದವಳು. ನಿರೂಪಕ ನನಗೆ ದುಶ್ಚಟ ಇಲ್ಲ ಎಂದು ಡಾಕ್ಟರ್ ಗೆ ಸುಳ್ಳು ಹೇಳುತ್ತಾ ಹೋಗುತ್ತಾನೆ. ಮುಂದೆ ಅವನು ಸುಳ್ಳುಗಳನ್ನು ಹೇಳುತ್ತಾ ಹೇಗೆ ಮದುವೆಯ ಪ್ರಯಾಣದಲ್ಲಿ ಸಾಗುತ್ತಾನೆ ಎನ್ನುವುದಕ್ಕೆ ಚಿತ್ರವನ್ನು ನೋಡಬೇಕಿದೆ.

ಚೇತನ್ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಕಾಮಿಡಿ ಕಿಲಾಡಿಗಳು ಖ್ಯಾತಿಯ ಅಪ್ಪಣ್ಣನ ಪಾತ್ರ ನೆನಪಿನಲ್ಲಿ ಉಳಿಯುತ್ತದೆ. ಚೈತ್ರಾ ಆಚಾರ್, ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಇನ್ನೊಬ್ಬ ನಟಿ ಅಶ್ವಿನಿ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಶರತ್ ಲೋಹಿತಾಶ್ವ ಚಿತ್ರದ ಓಟಕ್ಕೆ ಪೂರಕವಾಗಿ ಕಾಣಿಸಿಕೊಂಡಿದ್ದಾರೆ.

ನಗುವಿನ ರಸದೌತಣ ಗುಣಪಡಿಸುವ ಈ ಚಿತ್ರ ಪ್ರೇಕ್ಷಕರಿಗೆ ಇಷ್ಟವಾಗುವುದರಲ್ಲಿ ಸಂದೇಹ ಇಲ್ಲ.

Be the first to comment

Leave a Reply

Your email address will not be published. Required fields are marked *

Translate »
error: Content is protected !!