ಜನಪ್ರಿಯ ರಿಯಾಲಿಟಿ ಶೋ ‘ಸರಿಗಮಪ ಸೀಸನ್ 13’ ರ ಮೂಲಕ ಕರ್ನಾಟಕದ ಮನೆ ಮಾತಾಗಿದ್ದ ಗಾಯಕಿ ಸುಹಾನಾ ಸೈಯದ್ ಅವರು ದಾಂಪತ್ಯ ಜೀವನಕ್ಕೆ ಕಾಳಿಟ್ಟಿದ್ದಾರೆ.
ಶಿವಮೊಗ್ಗದ ಸಾಗರದ ಗಾಯಕಿ ಸುಹಾನಾ ಸೈಯ್ಯದ್ , ರಂಗಭೂಮಿ ಕಲಾವಿದ ನಿತಿನ್ ಶಿವಾಂಶ್ ಅವರನ್ನು ವರಿಸಿದ್ದಾರೆ. ಬೆಂಗಳೂರಿನ ಕನಕಪುರ ರಸ್ತೆಯ ಖಾಸಗಿ ರೆಸಾರ್ಟ್ ನಲ್ಲಿ ಗುರು ಹಿರಿಯರ ಹಾಗೂ ಆಪ್ತರ ಸಮ್ಮುಖದಲ್ಲಿ ಕುವೆಂಪು ಅವರ ಮಂತ್ರ ಮಾಂಗಲ್ಯದ ಆಶಯದಂತೆ ಸರಳವಾಗಿ ಸುಹಾನಾ ಸೈಯ್ಯದ್ ಮತ್ತು ನಿತಿನ್ ಪರಸ್ಪರ ಹಾರ ಬದಲಿಸಿಕೊಂಡು ಅಂತರ್ ಧರ್ಮೀಯ ವಿವಾಹವಾದರು.
ಮದುವೆಯಾದರೆ, ಮಂತ್ರ ಮಾಂಗಲ್ಯವೇ ಆಗಬೇಕು ಎಂಬ ಕನಸು ಬಹಳ ವರ್ಷಗಳಿಂದ ಇತ್ತು. ಅದು ಈಗ ನೆರೆವೇರಿದೆ. ಹಾಗಾಗಿ ಬಹಳ ಖುಷಿಯಿದೆ. ತುಂಬಾ ಕಡಿಮೆ ಸಮಯದಲ್ಲಿ ಇದೆಲ್ಲ ನೆರವೇರಿದೆ. ಇಬ್ಬರ ಗುರುಗಳು ಬಂದಿದ್ದಾರೆ ಎಂದು ಸುಹಾನಾ ಸೈಯ್ಯದ್ ಹರ್ಷ ವ್ಯಕ್ತಪಡಿಸಿದ್ದಾರೆ.
ಸುಹಾನಾ ಅವರು ‘ಸರಿಗಮಪ’ ಶೋಗೆ ತೆರಳಿ ಮಿಂಚಿದರು. ಆ ಬಳಿಕ ‘ಶ್ರೀಕೃಷ್ಣನೇ ಶ್ರೀನಿವಾಸನೇ’ ಭಜನೆ ಹೇಳಿದ್ದರಿಂದ ಅವರು ಸಾಕಷ್ಟು ಟೀಕೆಗಳನ್ನು ಎದುರಿಸಿದರು. ಮುಸ್ಲಿಂ ಧರ್ಮದ ಅನೇಕರು ಈ ಕೆಲಸವನ್ನು ಖಂಡಿಸಿದರು.
ನಿತಿನ್ ಶಿವಾಂಶ್ ಅವರು ವೃತ್ತಿಯಲ್ಲಿ ರಂಗಭೂಮಿ ಕಲಾವಿದರು. ಅವರು ಪ್ರಸಿದ್ಧ ರಂಗ ತರಬೇತಿ ಕೇಂದ್ರವಾದ ನೀನಾಸಂನಲ್ಲಿ ತರಬೇತಿ ಪಡೆದಿದ್ದಾರೆ. ಇಬ್ಬರ ನಡುವಿನ 16 ವರ್ಷಗಳ ಸುದೀರ್ಘ ಗೆಳೆತನ ಈಗ ಪ್ರೇಮ ವಿವಾಹಕ್ಕೆ ಕಾರಣವಾಗಿದೆ.
—–





Be the first to comment