ಬಿಗ್​​ಬಾಸ್ ಕನ್ನಡ ಸೀಸನ್ 12 ಶುರು

ರಿಯಾಲಿಟಿ ಶೋ ಬಿಗ್​​ಬಾಸ್ ಕನ್ನಡ ಸೀಸನ್ 12 ಅದ್ದೂರಿಯಾಗಿ ಶುರುವಾಗಿದ್ದು, 19 ಸ್ಪರ್ಧಿಗಳು  ಬಿಗ್​​ಬಾಸ್ ಮನೆ ಸೇರಿದ್ದಾರೆ.

ಮೊದಲ ಸ್ಪರ್ಧಿಯಾಗಿ ಕಾಕ್ರೂಚ್ ಸುಧಿ ಅವರು ದೊಡ್ಮನೆ ಸೇರಿದ್ದಾರೆ. ಎರಡನೇ ಸ್ಪರ್ಧಿಯಾಗಿ ‘ಕೊತ್ತಲವಾಡಿ’ ಸಿನಿಮಾದ ನಾಯಕಿ ಕಾವ್ಯಾ ಅವರ ಎಂಟ್ರಿ ಆಗಿದೆ. ಸಾಮಾಜಿಕ ಮಾಧ್ಯಮದಲ್ಲಿ ಜನಪ್ರಿಯತೆ ಪಡೆದುಕೊಂಡಿರುವ ಮಲ್ಲಮ್ಮ ಮೂರನೇ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆಗೆ ಪ್ರವೇಶಿಸಿದ್ದಾರೆ. ಇವರು ಉತ್ತರ ಕರ್ನಾಟಕ ಭಾಷೆಯಲ್ಲಿ ಮಾತನಾಡುವ ಮೂಲಕ ಗಮನ ಸೆಳೆದಿದ್ದಾರೆ.

ನಾಲ್ಕನೇ ಸ್ಪರ್ಧಿಯಾಗಿ ಕಾಮಿಡಿ ಕಲಾವಿದ ಗಿಲ್ಲಿ, ಐದನೇ ಸ್ಪರ್ಧಿಯಾಗಿ ನಿರೂಪಕಿ, ನಟಿ ಜಾನ್ಹವಿ ಎಂಟ್ರಿ ಕೊಟ್ಟಿದ್ದಾರೆ. ಆರನೇ ಸ್ಪರ್ಧಿಯಾಗಿ ಕಿರುತೆರೆ, ಹಿರಿತೆರೆ ಎರಡರಲ್ಲೂ ನಟಿಸಿರುವ ನಟ ಧನುಶ್, ಏಳನೇ ಸ್ಪರ್ಧಿಯಾಗಿ ಗಿಚ್ಚಿ-ಗಿಲಿಗಿಲಿ ಗೆದ್ದಿರುವ ಚಂದ್ರಪ್ರಭಾ  ಎಂಟ್ರಿ ಕೊಟ್ಟಿದ್ದಾರೆ.

‘ಸಿಲ್ಲಿ ಲಲ್ಲಿ’ ಧಾರವಾಹಿಯಲ್ಲಿ ಅಭಿನಯಿಸಿದ್ದ ಮಂಜು ಭಾಷಿಣಿ ಬಿಗ್​​ಬಾಸ್ ಕನ್ನಡ ಸೀಸನ್ 12ಕ್ಕೆ ಖ್ಯಾತ ನಟಿ ಮಂಜು ಭಾಷಿಣಿ ಅವರು ಎಂಟ್ರಿ ಕೊಟ್ಟಿದ್ದಾರೆ. ಮನದ ಕಡಲು’ ಸಿನಿಮಾದ ನಾಯಕಿ ರಾಶಿಕಾ ಶೆಟ್ಟಿ, ಕಿರುತೆರೆ ನಟ ಅಭಿಷೇಕ್ ಹತ್ತನೇ ಸ್ಪರ್ಧಿಯಾಗಿ ಬಿಗ್​​ಬಾಸ್ ಮನೆ ಪ್ರವೇಶಿಸಿದ್ದಾರೆ.

ಡಾಗ್ ಸತೀಶ್,  ‘ಮುದ್ದುಲಕ್ಷ್ಮೀ’ ಸೀರಿಯಲ್ ಖ್ಯಾತಿಯ ಅಶ್ವಿನಿ, ಹಲವು ಸೀರಿಯಲ್‌ಗಳಲ್ಲಿ ನಟಿಸಿರುವ ಧ್ರುವಂತ್, ವ್ಲಾಗ್ಸ್ ಮೂಲಕ ಫೇಮಸ್ ಮತ್ತು ಟ್ರೋಲ್ ಆಗಿರುವ ರಕ್ಷಿತಾ ಶೆಟ್ಟಿ, ದೇಹದಾರ್ಥ್ಯ ಸ್ಪರ್ಧೆಯಲ್ಲಿ ಭಾರತ ಪ್ರತಿನಿಧಿಸಿದ  ಕರಿಬಸಪ್ಪ, ಜನಪದ ಹಾಡುಗಳ ಮೂಲಕ ಖ್ಯಾತಿ ಪಡೆದಿರುವ ಉತ್ತರ ಕರ್ನಾಟಕದ ಗಾಯಕ ಮಾಳು ನಿಪನಾಳ, ಕರಿಮಣಿ’ ಧಾರಾವಾಹಿ ಖ್ಯಾತಿಯ ಸ್ಪಂದನಾ ಸೋಮಣ್ಣ , ಆರ್‌ಜೆ ಅಮಿತ್ ಪವಾರ್ ಬಿಗ್​​ಬಾಸ್ ಮನೆ ಸೇರಿದ್ದಾರೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!