ಸೂಪರ್‌ಸ್ಟಾರ್ ಪವನ್ ಕಲ್ಯಾಣ್ ಅವರ ಹೊಸ ಚಿತ್ರ ‘ದೆಕಾಲ್ ಹಿಮ್ ಒಜಿ’ ಬಾಕ್ಸ್ ಆಫೀಸ್‌ನಲ್ಲಿ ದಾಖಲೆ ನಿರ್ಮಿಸಿದೆ.
‘ದೆ ಕಾಲ್ ಹಿಮ್ ಒಜಿ’ ಮೊದಲ ದಿನದಂದು 70 ಕೋಟಿ ರೂ. ಗಳಿಸಿದೆ. ಬಿಡುಗಡೆಗೂ ಮುನ್ನ ಪೇಯ್ಡ್ ಪ್ರೀಮಿಯರ್ ಸೇರಿದಂತೆ ಈ ಚಿತ್ರ ತೆಲುಗಿನಲ್ಲಿ 20.25 ಕೋಟಿ ರೂ. ಗಳಿಸಿದೆ. ಒಟ್ಟು ಗಳಿಕೆ 90.25 ಕೋಟಿ ರೂ. ಆಗಿದೆ.
ಪವನ್ ಕಲ್ಯಾಣ್ ಅವರ ಹಿಂದಿನ ಚಿತ್ರ ‘ಹರಿ ಹರ ವೀರ ಮಲ್ಲು’ ಗಿಂತ ‘ದೆಕಾಲ್ ಹಿಮ್ ಒಜಿ’ ಉತ್ತಮ ಆರಂಭ ಕಂಡಿದೆ. ಈ ಚಿತ್ರ ಮೊದಲ ದಿನ 34 ಕೋಟಿ ರೂ. ಗಳಿಸಿತ್ತು.
‘ದೆಕಾಲ್ ಹಿಮ್ ಒಜಿ’, 90 ಕೋಟಿ ರೂ. ಗಳಿಸುವ ಮೂಲಕ ರಜನಿಕಾಂತ್ ಅವರ ‘ಕೂಲಿ’ (65 ಕೋಟಿ ರೂ.), ವಿಕ್ಕಿ ಕೌಶಲ್ ಅವರ ‘ಛಾವಾ’ (31 ಕೋಟಿ ರೂ.) ಮತ್ತು ಅಹಾನ್ ಪಾಂಡೆ ಮತ್ತು ಅನೀತ್ ಪಡ್ಡಾ ಅವರ ‘ಸೈಯಾರಾ’ (21.5 ಕೋಟಿ ರೂ.) ಚಿತ್ರಗಳ ಗಳಿಕೆಯನ್ನು ಹಿಂದಿಕ್ಕಿದೆ.
ಸುಜೀತ್ ನಿರ್ದೇಶನ, ಡಿವಿವಿ ದಾನಯ್ಯ ನಿರ್ಮಾಣದ ‘ದೆಕಾಲ್ ಹಿಮ್ ಒಜಿ’ ಚಿತ್ರದಲ್ಲಿ ಪವನ್ ಕಲ್ಯಾಣ್ ನಿವೃತ್ತ ದರೋಡೆಕೋರ OG ಪಾತ್ರದಲ್ಲಿ ನಟಿಸಿದ್ದಾರೆ. ಪಾತ್ರವರ್ಗದಲ್ಲಿ ಇಮ್ರಾನ್ ಹಶ್ಮಿ, ಪ್ರಿಯಾಂಕಾ ಮೋಹನ್, ಅರ್ಜುನ್ ದಾಸ್, ಶ್ರೀಯಾ ರೆಡ್ಡಿ ಮತ್ತು ಪ್ರಕಾಶ್ ರಾಜ್ ಇದ್ದಾರೆ. ಈ ಚಿತ್ರ ಇಮ್ರಾನ್ ಹಶ್ಮಿ ಅವರ ಚೊಚ್ಚಲ ತೆಲುಗು ಚಿತ್ರವಾಗಿದೆ.
—–





Be the first to comment