ಕೊತ್ತಲವಾಡಿ ಸಿನಿಮಾ ರಿಲೀಸ್ ಆಗಿ ತಿಂಗಳು ಕಳೆದರೂ ಸಂಭಾವನೆ ಬಂದಿಲ್ಲ ಎಂದು ನಟ ಪೃಥ್ವಿ ಅಂಬಾರ್ ಜೊತೆ ಅಭಿನಯಿಸಿದ್ದ ಮಹೇಶ್ ಗುರು ಆರೋಪ ಮಾಡಿದ್ದಾರೆ.
ಈ ಸಂಬಂಧ ಮಹೇಶ್ ಗುರು ಮಾತನಾಡಿರುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿ ವೈರಲ್ ಆದ ನಂತರ ಮಾಧ್ಯಮಗಳು ಸುದ್ದಿ ಮಾಡಿದ್ದವು. ನಂತರ ಅವರು ತಮ್ಮ ಫೇಸ್ ಬುಕ್ ಖಾತೆಯಿಂದ ವಿಡಿಯೋ ತೆಗೆದು ಹಾಕಿದ್ದಾರೆ.
ನಿರ್ದೇಶಕರ ಕಡೆಯಿಂದ ಈ ಸಿನಿಮಾಗೆ ಸೆಲೆಕ್ಟ್ ಆಗಿದ್ದೆ. ನಮಗೆ ಒಂದು ಪ್ಯಾಕೇಜ್ ನ್ನು ನಿರ್ದೇಶಕರು ಮಾತನಾಡಿದ್ದರು. ನಾವು ಕೂಡಾ ಖುಷಿಯಾಗಿ ಒಪ್ಪಿಕೊಂಡಿದ್ದೆವು. ಸಿನಿಮಾ ಶುರು ಆಗೋದಕ್ಕೆ ಮುನ್ನ ಒಂದು ಅಡ್ವಾನ್ಸ್ ಮಾಡಿಸುತ್ತೇನೆ ಅಂತ ಹೇಳಿದ್ದರು. ಸಿನಿಮಾ ಮುಹೂರ್ತದಲ್ಲಿ ಕೇಳಿದ್ದಕ್ಕೆ ಪ್ರೊಡಕ್ಷನ್ ನಿಂದ ಇನ್ನೂ ಅಮೌಂಟ್ ಬಂದಿಲ್ಲ, ಬಂದ ತಕ್ಷಣ ಮಾಡಿ ಕೊಡುತ್ತೇನೆ ಅಂತ ಹೇಳಿದ್ದರು. ಎಷ್ಟು ಬಾರಿ ಕೇಳಿದ್ದರು ಪ್ರೊಡಕ್ಷನ್ ನಿಂದ ಇನ್ನೂ ಅಮೌಂಟ್ ಬಂದಿಲ್ಲ ಅಂತ ಹೇಳುತ್ತಲೇ ಬಂದರು. ಕೊನೆಗೆ ಡಬ್ಬಿಂಗ್ ಮುಗಿಸಿದ ನಂತರವೂ ಪೇಮೆಂಟ್ ಕ್ಲಿಯರ್ ಮಾಡಿಲ್ಲ.
ಟೀಸರ್, ಟ್ರೈಲರ್, ಪ್ರೇಸ್ ಮೀಟ್ ಗಳಿಗೆ ನಮ್ಮನ್ನು ಕರೆಯುತ್ತಿರಲಿಲ್ಲ. ಸಿನಿಮಾ ಬಿಡುಗಡೆ ಆಗಿ ಒಟಿಟಿಗೆ ಬಂದಿದೆ. ಈಗಲೂ ಕೂಡಾ ನಮಗೆ ಸಂಭಾವನೆ ನೀಡಿಲ್ಲ. ಪುಷ್ಪ ಮೇಡಂ ಅವರಿಗೆ ತಲುಪಲಿ ಅನ್ನುವ ಉದ್ದೇಶದಿಂದ ಈ ವಿಡಿಯೋ ಮಾಡಿರುವುದಾಗಿ ಮಹೇಶ್ ಗುರು ಹೇಳಿದ್ದಾರೆ.
ಪುಷ್ಪ ಅವರು ನಿರ್ಮಿಸಿರುವ ‘ಕೊತ್ತಲವಾಡಿ’ ಸಿನಿಮಾದಲ್ಲಿ ನಟ ಪೃಥ್ವಿ ಅಂಬಾರ್ ಅವರೊಂದಿಗೆಸಹ ನಟನಾಗಿ ಮೂರು ತಿಂಗಳಿಗೂ ಹೆಚ್ಚುಕಾಲ ಸಿನಿಮಾದಲ್ಲಿ ಕೆಲಸ ಮಾಡಿರುವುದಾಗಿ ಅವರು ತಿಳಿಸಿದ್ದಾರೆ.
—-





Be the first to comment