ದುಬೈಯಲ್ಲಿ ನೆರವೇರಿದ ದಕ್ಷಿಣ ಭಾರತ ಅಂತಾರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ 2025 (SIIMA 2025) ರಲ್ಲಿ ಕಿಚ್ಚ ಸುದೀಪ್ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ದೊರೆತಿದೆ.
‘ಮ್ಯಾಕ್ಸ್’ ನಟನೆಗೆ ಕಿಚ್ಚ ಸುದೀಪ್ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ದೊರೆತಿದೆ. ‘02’ ನಟನೆಗೆ ಆಶಿಕಾ ರಂಗನಾಥ್ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ಸಿಕ್ಕಿದೆ. ‘ಭೀಮ’ ಸಿನಿಮಾ ನಟನೆಗೆ ದುನಿಯಾ ವಿಜಯ್ಗೆ ಅತ್ಯುತ್ತಮ ನಟ (ಕ್ರಿಟಿಕ್ಸ್) ಅವಾರ್ಡ್ ದೊರೆತಿದೆ.
‘ಯುಐ’ ನಿರ್ದೇಶನಕ್ಕೆ ಉಪೇಂದ್ರ ಅವರು ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಪಡೆದಿದ್ದಾರೆ. ‘ಕೃಷ್ಣಂ ಪ್ರಣಯ ಸಖಿ’ ಅತ್ಯುತ್ತಮ ಸಿನಿಮಾ ಪ್ರಶಸ್ತಿ ಗಳಿಸಿದೆ.
ಸೈಮಾ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಕನ್ನಡಿಗರಿಗೆ ಅವಮಾನ ಮಾಡಲಾಗಿದೆ ಎಂದು ದುನಿಯಾ ವಿಜಯ್ ಆಕ್ರೋಶ ಹೊರ ಹಾಕಿದ್ದಾರೆ. ದುಬೈನಲ್ಲಿ ನಡೆದ ಸಮಾರಂಭದಲ್ಲಿ ಬೇಕು ಅಂತಲೇ ಕನ್ನಡಿಗರಿಗೆ ಕೊನೆಯಲ್ಲಿ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ ಎಂದು ವಿಜಿ ಕೋಪಗೊಂಡಿದ್ದಾರೆ.
ಕನ್ನಡಕ್ಕೆ ಬಂದ ಪ್ರಶಸ್ತಿಗಳು:
ಅತ್ಯುತ್ತಮ ಚೊಚ್ಚಲ ನಟ- ಸಮರ್ಜಿತ್ ಲಂಕೇಶ್ (ಗೌರಿ)
ಅತ್ಯುತ್ತಮ ಚೊಚ್ಚಲ ನಟಿ – ಅಂಕಿತಾ ಅಮರ್ (ಇಬ್ಬನಿ ತಬ್ಬಿದಾ ಇಳೆಯಲಿ)
ಭರವಸೆ ಮೂಡಿಸಿದ ಹೊಸ ಪ್ರತಿಭೆ- ಸನ್ಯಾ ಅಯ್ಯರ್ (ಗೌರಿ)
ಅತ್ಯುತ್ತಮ ಚೊಚ್ಚಲ ನಿರ್ದೇಶಕ ಪ್ರಶಸ್ತಿ: ಸಂದೀಪ್ ಸುಂಕದ್ (ಶಾಖಾಹಾರಿ)
ಅತ್ಯುತ್ತಮ ಸಂಗೀತ ಸಂಯೋಜನೆ: ಬಿ. ಅಜನೀಶ್ ಲೋಕನಾಥ್ (ಮ್ಯಾಕ್ಸ್)
ಅತ್ಯುತ್ತಮ ಹಾಸ್ಯನಟ: ಜಾಕ್ ಸಿಂಗಂ (ಭೀಮ)
ಅತ್ಯುತ್ತಮ ಸಾಂಗ್ ಡಿಸೈನ್- ಇಮ್ರಾನ್ ಎಸ್ ಸರ್ಧಾರಿಯಾ
ಅತ್ಯುತ್ತಮ ಛಾಯಾಗ್ರಹಣ: ಶ್ರೀವತ್ಸನ್ ಸೆಲ್ವರಾಜನ್ (ಇಬ್ಬನಿ ತಬ್ಬಿದ ಇಳೆಯಲಿ)
ಅತ್ಯುತ್ತಮ ಹಿನ್ನೆಲೆ ಗಾಯಕಿ – ಐಶ್ವರ್ಯ ರಂಗರಾಜನ್
ಅತ್ಯುತ್ತಮ ಗಾಯಕ – ಜಸ್ಕರನ್
ಅತ್ಯುತ್ತಮ ಚಿತ್ರ ಸಾಹಿತಿ – ಡಾ. ವಿ. ನಾಗೇಂದ್ರ ಪ್ರಸಾದ್
——





Be the first to comment