ನಿರ್ಮಾಪಕ ಸತ್ಯ ಮತ್ತು ಅವರ ಪತ್ನಿ ನಿರ್ಮಲಾ 1 ಕೋಟಿ ರೂಪಾಯಿ ಸಾಲ ಪಡೆದು, ಹಿಂತಿರುಗಿಸದೆ ವಂಚಿಸಿದ್ದಾರೆ ಎನ್ನಲಾಗಿದ್ದು, ಸೃಜನ್ ಲೋಕೇಶ್ ಮ್ಯಾನೇಜರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ʻಲಕ್ಷ್ಮೀ ನಿವಾಸʼ ಧಾರಾವಾಹಿಯ ನಿರ್ಮಾಣಕ್ಕಾಗಿ ನಿರ್ಮಾಪಕ ಸತ್ಯ ಮತ್ತು ಅವರ ಪತ್ನಿ ನಿರ್ಮಾಲಾ 1 ಕೋಟಿ ರೂಪಾಯಿ ಹಣವನ್ನು ಸೃಜನ್ ಲೋಕೇಶ್ ಅವರ ಲೋಕೇಶ್ ಪ್ರೊಡಕ್ಷನ್ಸ್ ಸಂಸ್ಥೆಯಿಂದ ಸಾಲವಾಗಿ ಪಡೆದಿದ್ದರು.
ಆರೋಪಿಗಳು 2024ರ ಏಪ್ರಿಲ್ 1ರಿಂದ ಪ್ರತಿ ತಿಂಗಳು 5 ಲಕ್ಷ ರೂ. ಕಂತುಗಳಲ್ಲಿ ಹಣ ವಾಪಾಸ್ ಕೊಡುವುದಾಗಿ ಒಪ್ಪಂದ ಮಾಡಿಕೊಂಡಿದ್ದರು. ಆದರೆ ಇದುವರೆಗೂ ಯಾವುದೇ ಹಣ ಪಾವತಿಸದ ಹಿನ್ನೆಲೆ ಷರತ್ತು ಉಲ್ಲಂಘಿಸಿದ್ದಕ್ಕಾಗಿ ದೂರು ದಾಖಲಾಗಿದೆ. ಸೃಜನ್ ಲೋಕೇಶ್ ಅವರ ಲೋಕೇಶ್ ಸಂಸ್ಥೆಯ ಜಿಪಿಎ ಹೋಲ್ಡರ್ ಅಗ್ನಿ ಯು ಸಾಗರ್ ಎಂಬುವವರು ಬೆಂಗಳೂರಿನ ಸಿ.ಕೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಸತ್ಯ ಮತ್ತು ಅವರ ಪತ್ನಿ ನಿರ್ಮಲಾ ವಿರುದ್ಧ ಎಫ್ಐಆರ್ ದಾಖಲಾಗಿದೆ. ಸಾಯಿ ನಿರ್ಮಲಾ ಪ್ರೊಡಕ್ಷನ್ಸ್ ಕಂಪನಿಯ ಹಣಕಾಸಿನ ವಹಿವಾಟುಗಳು ತನಿಖೆಗೆ ಒಳಪಟ್ಟಿವೆ ಎಂದು ಹೇಳಲಾಗುತ್ತಿದೆ.
—-





Be the first to comment