ಬಿಗ್ ಬಾಸ್ ಕನ್ನಡ ಸೆ.29 ರಿಂದ ಶುರು

ಬಿಗ್ ಬಾಸ್ ಕನ್ನಡ ಸೀಸನ್ 12, ಸೆಪ್ಟೆಂಬರ್ 29 ರಿಂದ ಆರಂಭ ಆಗಲಿದೆ.

‘ಕಲರ್ಸ್ ಕನ್ನಡ’ ವಾಹಿನಿಯಲ್ಲಿ ಬಿಗ್ ಬಾಸ್ ಪ್ರಸಾರ ಆಗಲಿದ್ದು, ಈಗ ಪ್ರೋಮೋ ಬಿಡುಗಡೆ ಮಾಡಲಾಗಿದೆ. ಕಿಚ್ಚ ಸುದೀಪ್ ಅವರು ನಿರೂಪಣೆ ಮಾಡಲಿದ್ದಾರೆ.

ಸುದೀಪ್ ಅವರು ‘ಮಾರ್ಕ್’ ಸಿನಿಮಾಗಾಗಿ ಉದ್ದ ಕೂದಲು ಬಿಟ್ಟಿದ್ದಾರೆ.  ಅದೇ ಗೆಟಪ್​​ನಲ್ಲಿ ಅವರು ಬಿಗ್ ಬಾಸ್ ಪ್ರೋಮೋದಲ್ಲಿ ಕಾಣಿಸಿಕೊಂಡಿದ್ದಾರೆ.  ‘ರಿಯಾಲಿಟಿ ಶೋಗಳ ಬಾಸ್, ರಿಯಲ್ ಎಂಟರ್‌ಟೈನ್‌ಮೆಂಟ್‌ಗೆ ಒಂದೇ ಅಡ್ರೆಸ್. ಬಿಗ್ ಬಾಸ್ ಕನ್ನಡ ಸೀಸನ್ 12 ಗ್ರ್ಯಾಂಡ್ ಓಪನಿಂಗ್ ಸೆಪ್ಟೆಂಬರ್ 28ಕ್ಕೆ’ ಎಂದು ಸೋಶಿಯಲ್ ಮೀಡಿಯಾದಲ್ಲಿ ಪ್ರೋಮೋ ಹಂಚಿಕೊಳ್ಳಲಾಗಿದೆ.

‘ನನ್ನ ಪ್ರೀತಿಯ ಸಮಸ್ತ ಕನ್ನಡಿಗರ ಕುಟುಂಬಕ್ಕೆ ಸ್ವಾಗತ’ ಎಂಬ ಧ್ವನಿಯೊಂದಿಗೆ ಕಿಚ್ಚ ಸುದೀಪ್ ಅವರು ಎಂಟ್ರಿ ನೀಡಿದ್ದಾರೆ. ಅವರನ್ನು ಪ್ರೋಮೋದಲ್ಲಿ ನೋಡಿ ಅಭಿಮಾನಿಗಳಿಗೆ ಬಹಳ ಖುಷಿ ಆಗಿದೆ.

‘ಹೊಸ ಸೆಟ್ ರೆಡಿ ಆಗಿದೆ, ಹೊಸ ಸ್ಪರ್ಧಿಗಳು ಕೂಡ ರೆಡಿ. 7 ಕೋಟಿ ಕನ್ನಡಿಗರೂ ರೆಡಿ. ಸರ್ ನೀವು ರೆಡಿನಾ’ ಎಂದು ಸುದೀಪ್ ಅವರಿಗೆ ಕೇಳಲಾಗಿದೆ. ಎಂದಿನ ಗತ್ತಿನಲ್ಲಿ ಸುದೀಪ್ ಕೂಡ ‘ರೆಡಿ..’ ಎಂದು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

——

Be the first to comment

Leave a Reply

Your email address will not be published. Required fields are marked *

Translate »
error: Content is protected !!