ಶೀಘ್ರವೇ ದೇಶದಾದ್ಯಂತ ಸಿನಿಮಾ ಟಿಕೆಟ್ ದರಗಳು ಕಡಿಮೆ ಆಗುವ ಸಾಧ್ಯತೆ ಇದೆ.
ದೇಶದಲ್ಲಿ ಪ್ರಸ್ತುತ ಮನೊರಂಜನಾ ತೆರಿಗೆ 18% ಇದೆ. ಇದು ಒಟ್ಟಾರೆ ಟಿಕೆಟ್ ದರ ಹೆಚ್ಚಳಕ್ಕೆ ಕಾರಣವಾಗಿದೆ. 2018 ರಿಂದಲೂ ಮನೊರಂಜನಾ ತೆರಿಗೆ ಇಳಿಕೆ ಮಾಡುವಂತೆ ಚಿತ್ರಮಂದಿರಗಳ ಮಾಲೀಕರು, ಮಲ್ಟಿಪ್ಲೆಕ್ಸ್ಗಳವರು ಸರ್ಕಾರಕ್ಕೆ ಮನವಿ ಸಲ್ಲಿಸುತ್ತಲೇ ಬರುತ್ತಿವೆ.ಇದೀಗ ಸರ್ಕಾರ ಜಿಎಸ್ಟಿ ಸಭೆಯಲ್ಲಿ ಮನೊರಂಜನಾ ತೆರಿಗೆಯನ್ನು ಇಳಿಸುವ ನಿರ್ಣಯ ಕೈಗೊಳ್ಳುವ ಸಾಧ್ಯತೆ ದಟ್ಟವಾಗಿದೆ.
300 ರೂಪಾಯಿಗಳ ವರೆಗಿನ ಟಿಕೆಟ್ ದರಕ್ಕೆ 5%, ಅದಕ್ಕೂ ಹೆಚ್ಚಿನ ಟಿಕೆಟ್ ದರಕ್ಕೆ 12% ತೆರಿಗೆ ವಿಧಿಸುವಂತೆ ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ಗಳವರು ಸರ್ಕಾರದ ಬಳಿ ಮನವಿ ಮಾಡಿದ್ದರು. ಪ್ರಸ್ತುತ 100 ರೂಪಾಯಿಗಳಿಗೂ ಕಡಿಮೆ ಟಿಕೆಟ್ ದರಕ್ಕೆ 12% ಮತ್ತು ಅದಕ್ಕಿಂತಲೂ ಹೆಚ್ಚಿನ ಟಿಕೆಟ್ ದರಕ್ಕೆ 18% ಟಿಕೆಟ್ ದರವನ್ನು ವಿಧಿಸಲಾಗಿದೆ. ಇದರಿಂದಾಗಿ ದೇಶದಾದ್ಯಂತ ಟಿಕೆಟ್ ದರ ಹೆಚ್ಚಿದೆ.
ಕೆಲ ತಿಂಗಳ ಹಿಂದಷ್ಟೆ ಸಿಎಂ ಸಿದ್ದರಾಮಯ್ಯ ಅವರು ಕರ್ನಾಟಕದಲ್ಲಿ ಏಕರೂಪ ಟಿಕೆಟ್ ದರದ ಭರವಸೆ ನೀಡಿದ್ದರು. ಆದರೆ ಅದಿನ್ನೂ ಜಾರಿ ಆಗಿಲ್ಲ. ಫಿಲಂ ಚೇಂಬರ್ ಸಿದ್ದರಾಮಯ್ಯ ಅವರ ನಿರ್ಧಾರವನ್ನು ಸ್ವಾಗತ ಮಾಡಿತ್ತು.





Be the first to comment