ಮಲಯಾಳಂ ಚಿತ್ರದಲ್ಲಿ ಮೊನಾಲಿಸಾ

ಮಹಾಕುಂಭದ  ಬೆಡಗಿ ಮೊನಾಲಿಸಾ  ‘ನಾಗಮ್ಮ’ ಹೆಸರಿನ  ಮಲಯಾಳಂ  ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ಪಿ. ಬಿನು ಅವರು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಕೈಲಾಶ್ ಈ ಚಿತ್ರದ ಹೀರೋ. ಈ ಸಿನಿಮಾಗೆ ಸೆಪ್ಟೆಂಬರ್ ಅಂತ್ಯದ ವೇಳೆಗೆ ಶೂಟಿಂಗ್ ಆರಂಭ ಆಗುವ ನಿರೀಕ್ಷೆ ಇದೆ. ‘ನಾಗಮ್ಮ’ ಸಿನಿಮಾದ ಪೂಜಾ ಕಾರ್ಯ ಕೊಚ್ಚಿಯಲ್ಲಿ ಇತ್ತೀಚೆಗೆ ನಡೆಯಿತು. ಈ ಸಿನಿಮಾದ ಮುಹೂರ್ತದಲ್ಲಿ ನಿರ್ದೇಶಕ ಸಿಬಿ ಮಲಾಯಿಲ್ ಭಾಗಿ ಆಗಿದ್ದರು.

ಮೋನಾಲಿಸಾ ಅವರು ಕೋಳಿಕೋಡ್​ನಲ್ಲಿ ಜ್ಯುವೆಲರಿ ಶಾಪ್ ಉದ್ಘಾಟನೆ ಮಾಡಿದ್ದರು. ಈ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿದ್ದರು. ಕೇರಳದಲ್ಲೂ ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ ಎಂಬುದನ್ನು ಇದು ಸಾಬೀತು ಮಾಡಿತ್ತು.

ಮೋನಾಲಿಸಾ  ಅವರು ಮಹಾಕುಂಭದಲ್ಲಿ ಹೂಮಾಲೆ ಮಾರುತ್ತಿದ್ದರು. ಅವರ ಕಣ್ಣುಗಳು ಗಮನ ಸೆಳೆಯುವ ರೀತಿಯಲ್ಲಿ ಇದ್ದವು. ಅವರಿಗೆ ಈಗಿನ್ನು 16 ವರ್ಷ. ಸೋಶಿಯಲ್ ಮೀಡಿಯಾದಲ್ಲಿ   ಫೋಟೋ ಸಾಕಷ್ಟು ವೈರಲ್ ಆಯಿತು.

‘ಡೈರಿ ಆಫ್ ಮಣಿಪುರ’ ಬಾಲಿವುಡ್ ಸಿನಿಮಾದಲ್ಲಿ ಮೊನಾಲಿಸಾ ಅವಕಾಶ ಗಿಟ್ಟಿಸಿಕೊಂಡು ಭಾರಿ ಸದ್ದು ಮಾಡಿದ್ದರು. ಈಗ ಇವರು ತಿಂಗಳಿಗೆ ಲಕ್ಷಾಂತರ ರೂಪಾಯಿ ಹಣ ಮಾಡುತ್ತಿದ್ದಾರೆ.  ಇತ್ತೀಚೆಗೆ ವಿಡಿಯೋ ಸಾಂಗ್ ಒಂದರಲ್ಲಿ ಕಾಣಿಸಿಕೊಂಡರು.  ಮೊನಾಲಿಸಾ ನಟನೆಯಲ್ಲಿ ಯಾವ ರೀತಿಯಲ್ಲಿ ಕಮಾಲ್ ಮಾಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

——

Be the first to comment

Leave a Reply

Your email address will not be published. Required fields are marked *

Translate »
error: Content is protected !!