ಶಿಲ್ಪಾ ಶೆಟ್ಟಿ

ಶಿಲ್ಪಾ ಶೆಟ್ಟಿ ದಂಪತಿ ವಿರುದ್ಧ ದೂರು

ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಮತ್ತು ಅವರ ಪತಿ, ಉದ್ಯಮಿ ರಾಜ್ ಕುಂದ್ರಾ ವಿರುದ್ಧ 60 ಕೋಟಿ ರೂಪಾಯಿ ವಂಚಿಸಿದ ಆರೋಪ ಮೇಲೆ ಕೇಸು ದಾಖಲಾಗಿದೆ.

ಮುಂಬೈ ಮೂಲದ ಉದ್ಯಮಿಯೊಬ್ಬರು ವಂಚನೆ ದೂರು ದಾಖಲು ಮಾಡಿದ್ದಾರೆ. ಬೆಸ್ಟ್ ಡೀಲ್ ಟಿವಿ ಪ್ರೈವೇಟ್ ಲಿಮಿಟೆಡ್‌ಗಾಗಿ ಸಾಲ ಮತ್ತು ಹೂಡಿಕೆ ಒಪ್ಪಂದಕ್ಕೆ ಸಂಬಂಧಿಸಿ ವಂಚನೆ ಮಾಡಲಾಗಿದೆ ಎನ್ನಲಾಗಿದೆ.

ಉದ್ಯಮಿ ದೀಪಕ್ ಕೊಠಾರಿ ಅವರು 2015-2023ರ ಮಧ್ಯೆ ವ್ಯವಹಾರ ವಿಸ್ತರಣೆಗಾಗಿ 60.48 ಕೋಟಿ ರೂಪಾಯಿಗಳನ್ನು ನೀಡಿದ್ದರು. ಆದರೆ ಶಿಲ್ಪಾ ಶೆಟ್ಟಿ ದಂಪತಿ ಅದನ್ನು ವೈಯಕ್ತಿಕ ವೆಚ್ಚಗಳಿಗೆ ಖರ್ಚು ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಸೆಲೆಬ್ರಿಟಿ ದಂಪತಿ 2015-2023ರ ಅವಧಿಯಲ್ಲಿ ಯೋಜಿತ ಪಿತೂರಿ ನಡೆಸಿದ್ದಾರೆ ಎಂದು ಉದ್ಯಮಿ ಆರೋಪಿಸಿದ್ದಾರೆ. ವ್ಯಾಪಾರ ಉದ್ದೇಶಗಳಿಗಾಗಿ ಹಣವನ್ನು ತೆಗೆದುಕೊಂಡು ವೈಯಕ್ತಿಕ ವೆಚ್ಚಗಳಿಗಾಗಿ ಬಳಸಿಕೊಂಡಿದ್ದಾರೆ ಎಂದು ದೂರಿದ್ದಾರೆ.

2015 ರಲ್ಲಿ ರಾಜೇಶ್ ಆರ್ಯ ಎಂಬ ಏಜೆಂಟ್ ಮೂಲಕ ಶಿಲ್ಪಾ ಶೆಟ್ಟಿ-ರಾಜ್ ಕುಂದ್ರ ಅವರ ಪರಿಚಯವಾಯಿತು. ಆ ಸಮಯದಲ್ಲಿ, ದಂಪತಿ ಆನ್‌ಲೈನ್ ಶಾಪಿಂಗ್ ಪ್ಲಾಟ್ ಫಾರ್ಮ್ ಬೆಸ್ಟ್ ಡೀಲ್ ಟಿವಿಯ ನಿರ್ದೇಶಕರಾಗಿದ್ದರು. ಶಿಲ್ಪಾ ಶೆಟ್ಟಿ ಆಗ ಕಂಪನಿಯಲ್ಲಿ ಶೇಕಡಾ 87 ಕ್ಕೂ ಹೆಚ್ಚು ಷೇರುಗಳನ್ನು ಹೊಂದಿದ್ದರು ಎಂದು ಹೇಳಲಾಗಿದೆ.

ಆರಂಭದಲ್ಲಿ ಜುಹು ಪೊಲೀಸ್ ಠಾಣೆಯಲ್ಲಿ ನಕಲಿ ಮತ್ತು ವಂಚನೆಗಾಗಿ ಪ್ರಕರಣ ದಾಖಲಾಗಿತ್ತು.ನಂತರ ಮೊತ್ತವು 10 ಕೋಟಿ ರೂ.ಗಳನ್ನು ಮೀರಿದ್ದರಿಂದ ಆರ್ಥಿಕ ಅಪರಾಧಗಳ ವಿಭಾಗಕ್ಕೆ ಹಸ್ತಾಂತರಿಸಿ ಈಗ ಪ್ರಕರಣದ ತನಿಖೆ ನಡೆಸಲಾಗುತ್ತಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!