ಚಿತ್ರ: ಎಲ್ಟು ಮುತ್ತಾ
ನಿರ್ದೇಶನ: ರಾ ಸೂರ್ಯ
ನಿರ್ಮಾಣ: ಸತ್ಯ ಶ್ರೀನಿವಾಸನ್
ಕಲಾವಿದರು: ಶೌರ್ಯ ಪ್ರತಾಪ್, ರಾ ಸೂರ್ಯ, ಪ್ರಿಯಾಂಕಾ ಮಳಲಿ ಮೊದಲಾದವರು.
ಇದು ಇಬ್ಬರು ಮುಗ್ದ ಹುಡುಗರ ಸ್ನೇಹದಿಂದ ಶುರುವಾಗುವ ಕಥೆ. ಆದರೆ ಬೆಳೆದು ಯುವಕರಾದ ಒಂದು ಹಂತದಲ್ಲಿ ಪವಾಡದ ಶಂಖವೊಂದರ ಪ್ರವೇಶವಾಗಿ ಪರಸ್ಪರ ಶಂಕೆ ಮೂಡುವಂತೆ ಮಾಡುತ್ತದೆ. ಹಳ್ಳಿಯಲ್ಲಿ ಬೆಳೆದು ನಿಂತ ಇಬ್ಬರು ಮುಗ್ದರು ಅಪಾರಾಧ ಲೋಕದಲ್ಲಿ ಹೇಗೆ ಪಾಲು ಪಡೆಯುತ್ತಾರೆ ಎನ್ನುವುದನ್ನು ಎಲ್ಟು ಮುತ್ತದಲ್ಲಿ ತೋರಿಸಲಾಗಿದೆ.
ಇದು ಕೊಡಗಿನ ನೆಲಜಿ ಎನ್ನುವಲ್ಲಿ ನಡೆಯುವ ಕಥೆ. ಎಲ್ಟು ಮತ್ತು ಮುತ್ತಾ ಎನ್ನುವುದು ಇಬ್ಬರು ಬಾಲ್ಯ ಸ್ನೇಹಿತರ ಹೆಸರು. ಎಲ್ಟು ಬೆಳೆದು ದೊಡ್ಡವನಾಗಿ ಹೂ ಮಾರಾಟ ನಡೆಸುತ್ತಾನೆ. ಮುತ್ತ ದೊಡ್ಡವನಾಗಿ ಸಾವಿನ ಮನೆಯಲ್ಲಿ ಡೊಳ್ಳು ಬಾರಿಸುತ್ತಾನೆ. ಈ ಹೂವು ಮತ್ತು ಡೊಳ್ಳಿನ ಜೋಡಿ ಗಂಡ ಹೆಂಡಿರ ಹಾಗೆ ಸದಾ ಜಗಳವಾಡುತ್ತಲೇ ಸ್ನೇಹ ಕಾಪಾಡಿಕೊಂಡಿರುತ್ತಾರೆ. ಆದರೆ ಇವರ ಮಧ್ಯೆಯೇ ಸಾವಿನಾಟ ಶುರುವಾಗುತ್ತದೆ. ಅದಕ್ಕೆ ಪವಾಡದ ಶಂಖವೂ ಕಾರಣವಾಗುತ್ತದೆ. ಏನಿದರ ಮರ್ಮ ಎನ್ನುವುದರ ಅನಾವರಣವೇ ಎಲ್ಟುಮುತ್ತಾ.
ಎಲ್ಟು ಹೂವು ಮಾರಾಟ ಮಾಡುತ್ತಾನೆ. ಹೂವು ಬಾಡುವುದರೊಳಗೆ ಯಾರದ್ದಾದರೂ ಮುಡಿ ಸೇರಿಸಲು ಪ್ರಯತ್ನಿಸುತ್ತಾನೆ. ಆಂಟಿಯರಿಗೆ ಹೂವು ಮುಡಿಸಿ ಖುಷಿ ಪಡೆಯುವುದು ಅವನ ವೈಯಕ್ತಿಕ ವಿಚಾರ. ಎಲ್ಟು ಮಾತಾಡಲು ಬಾಯಿ ತೆಗೆದಾಗಲೆಲ್ಲ “ಬರೀ ಓಳು..” ಎಂದು ಮೊಬೈಲ್ ಫೋನ್ ರಿಂಗಾಗುವುದು ಕಾಕಾತಾಳೀಯ. ಮುತ್ತನ ವಿಚಾರಕ್ಕೆ ಬಂದರೆ.. ಬರೆದಿರುವುದೇ ಒಳಿತು! ತಾನಾಯಿತು ಚಂಬುಳ ಎನ್ನುವ ತನ್ನ ಡೊಳ್ಳಾಯಿತು ಎಂದು ಬಾಳುವವನು. ಆದರೆ ತಂಟೆಗೆ ಬಂದವರ ಸೊಂಟ ಮುರಿಯಲು ಹಿಂದೆ ಮುಂದೆ ನೋಡುವುದಿಲ್ಲ. ಇಂಥ ಮುತ್ತನಿಗೆ ಹಲವರ ಮನೆಯಲ್ಲಿ ಉಳಿದ ಎಂಜಲೇ ಊಟ. ಎಂಜಲು ಉಂಡರೂ ಮುತ್ತಿನಂಥ ಮನಸಿನ ಯುವಕ. ಇವನ ಮನಕೊಂದು ಆಸೆಯಾಗಿ ಶಂಖದ ಪ್ರವೇಶವಾಗುತ್ತದೆ. ಆಸರೆಯಾಗಿ ವಿಧವೆಯೋರ್ವಳ ಎಂಟ್ರಿಯಾಗುತ್ತದೆ. ಶಂಖದ ಸಹವಾಸ ಸ್ನೇಹದೊಳಗೆ ಶಂಕೆ ಸೃಷ್ಟಿಸುತ್ತದೆ. ಮುಂದೇನಾಯಿತು ಎನ್ನುವುದನ್ನು ಪರದೆಯ ಮೇಲೆ ನೋಡಿದರೇನೇ ಚೆನ್ನ.
ಎಲ್ಟುವಾಗಿ ಸ್ವತಃ ನಿರ್ದೇಶಕ ರಾ ಸೂರ್ಯ ನಟಿಸಿದ್ದಾರೆ. ಮತ್ತೊಂದು ಪ್ರಮುಖ ಪಾತ್ರವಾದ ಮುತ್ತನಾಗಿ ಶೌರ್ಯ ಪ್ರತಾಪ್ ನಟಿಸಿದ್ದಾರೆ. ಮರಣದ ಡೊಳ್ಳು ಬಡಿಯುವ ತಂಡದ ವ್ಯವಸ್ಥಾಪಕನಾಗಿ ತುಳು ರಂಗಭೂಮಿನಟ ನವೀನ್ ಡಿ ಪಡೀಲ್ ನಗಿಸಿದ್ದಾರೆ. ಮುತ್ತನ ಪ್ರೇಯಸಿಯಾಗಿ ಪ್ರಿಯಾಂಕಾ ಮಳಲಿ ಅಭಿನಯಿಸಿದ್ದಾರೆ. ಯಮುನಾ ಶ್ರೀನಿಧಿ ಮತ್ತು ಕಾಕ್ರೋಚ್ ಸುಧಿ ಕೂಡ ಕಡಿಮೆ ದೃಶ್ಯಗಳಲ್ಲೇ ಗಮನ ಸೆಳೆಯುವ ನಟನೆ ನೀಡಿದ್ದಾರೆ.
ಇದು ಸಾಮಾನ್ಯ ಚಿತ್ರವಲ್ಲ. ಇಲ್ಲಿ ಕೊಡಗು ಇದೆ. ಮಳೆಯ ಮುಗಿಲಿನ ವಾತಾವರಣ ಇದೆ. ನವಿಲಿನ ಕುಣಿತಕ್ಕಿಂತಲೂ ಸರ್ಪದೊಂದಿಗಿನ ಕಾದಾಟವಿದೆ.
ಹಳ್ಳಿಗಾಡಿನ ಮುಳ್ಳು ಪರಿಸರವನ್ನು ಕೂಡ ಛಾಯಾಗ್ರಾಹಕರು ಆಕರ್ಷಕವಾಗಿ ತೋರಿಸಿದ್ದಾರೆ. ಪ್ರಸನ್ನ ಕೇಶವ ಹಿನ್ನೆಲೆ ಸಂಗೀತ ಅದಕ್ಕೆ ಇನ್ನಷ್ಟು ಶಕ್ತಿ ನೀಡಿದೆ. ಈ ಎಲ್ಲ ಕಾರಣಗಳಿಂದಾಗಿ ಸಿನಿಮಾ ಪ್ರೇಕ್ಷಕರನ್ನು ಸೆಳೆಯುವಂತೆ ಮೂಡಿಬಂದಿದೆ.





Pingback: how to order androxal cheap store
Pingback: purchase enclomiphene price london
Pingback: purchase xifaxan buy san francisco
Pingback: overnight buy staxyn
Pingback: order dutasteride cheap drugs
Pingback: get fildena cheap discount
Pingback: kamagra kanada