ಕಾವ್ಯ

ನಿರ್ಮಾಪಕರೇ ಗೊತ್ತಿಲ್ಲದೆ ನಟಿಸಿದ ನಾಯಕಿ ಕಾವ್ಯ!

ನಿರ್ಮಾಪಕರು ಯಾರು ಎನ್ನುವುದು ಗೊತ್ತಿಲ್ಲದೆ ಹೋದರೂ, ಕೊತ್ತಲವಾಡಿ ಚಿತ್ರದ ನಾಯಕಿ ಕಾವ್ಯ ಶೈವ ಅವರು ನಿರ್ದೇಶಕರ ಮಾತಿಗೆ ಒಪ್ಪಿಕೊಂಡು ಚಿತ್ರದಲ್ಲಿ ನಟಿಸಿದ ಬಗ್ಗೆ ಮಾಹಿತಿ ಹೊರ ಬಿದ್ದಿದೆ.

ಕೊತ್ತಲವಾಡಿ ಚಿತ್ರ ಆಗಸ್ಟ್ 1ರಂದು ಬಿಡುಗಡೆಯಾಗಲಿದೆ. ಈ ಹಿನ್ನೆಲೆಯಲ್ಲಿ ಚಿತ್ರದ ನಿರ್ಮಾಪಕಿ ಪುಷ್ಪಾ ಅರುಣ್ ಕುಮಾರ್ ಅವರು ಸಂದರ್ಶನದಲ್ಲಿ ಮಾತನಾಡಿದ್ದಾರೆ.

ಕಾವ್ಯ ಅವರಿಗೆ ಚಿತ್ರದ ನಿರ್ಮಾಪಕರು ಯಾರೆಂದು ಗೊತ್ತಿರಲಿಲ್ಲ. ನಿರ್ದೇಶಕರ ಮಾತನ್ನು ಒಪ್ಪಿಕೊಂಡು ನಟಿಸಲು ಮುಂದಾಗಿದ್ದರು. ಆಗ ಅವರಿಗೆ ಆತಂಕ ಇತ್ತು. ನಾನು ನಿರ್ಮಾಪಕಿ ಎಂದು ತಿಳಿದ ನಂತರ ಖುಷಿಯಾಗಿದ್ದಾರೆ ಎಂದು ಪುಷ್ಪಾ ಅರುಣ್ ಕುಮಾರ್ ಹೇಳಿದ್ದಾರೆ.

ನಾನು ಯಶ್ ತಾಯಿ ಎನ್ನುವ ಬದಲು ಡ್ರೈವರ್ ಹೆಂಡತಿ ಎಂದು ಗುರುತಿಸಿಕೊಳ್ಳಲು ಇಷ್ಟಪಡುತ್ತೇನೆ. ಸಿನಿಮಾ ರಂಗದಲ್ಲಿ ಏನಾದರೂ ಸಾಧನೆ ಮಾಡಬೇಕು ಎನ್ನುವ ಗುರಿಯಿದೆ. ನಮಗ ಯಶ್ ಸಹಾಯ ಮಾಡುತ್ತಾನೆ ಎನ್ನುವ ಮನೋಭಾವವನ್ನು ಇಟ್ಟುಕೊಂಡಿಲ್ಲ ಎಂದು ಹೇಳಿದ್ದಾರೆ.

ಕೊತ್ತಲವಾಡಿ ಚಿತ್ರದ ಮೂಲಕ ರಾಕಿಂಗ್ ಸ್ಟಾರ್ ಯಶ್ ಅವರ ತಾಯಿ ಪುಷ್ಪಾ ಅವರು ಕನ್ನಡ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಅವರು ತಮ್ಮ ಪಿಎ ಪ್ರೊಡಕ್ಷನ್ ನಡಿ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಚಿತ್ರದಲ್ಲಿ ಪೃಥ್ವಿ ಅಂಬರ್ ಅವರು ನಾಯಕನಾಗಿ ನಟಿಸುತ್ತಿದ್ದು ಕಾವ್ಯ ಶೈವ ನಾಯಕಿಯಾಗಿದ್ದಾರೆ. ಇವರ ಜೊತೆಗೆ ಗೋಪಾಲ ದೇಶಪಾಂಡೆ, ರಾಜೇಶ್ ನಟರಂಗ, ಮಾನಸಿ ಸುಧೀರ್, ಬಲ ರಾಜ್ವಾಡಿ ಇತರರು ನಟಿಸುತ್ತಿದ್ದಾರೆ.

ಚಿತ್ರದ ಕುರಿತುವ ಮಾತನಾಡಿರುವ ನಾಯಕಿ ಕಾವ್ಯ ಶೈವ, ನಿರ್ದೇಶಕ ಶ್ರೀ ರಾಜ್ ಅವರು ನನ್ನಿಂದ ನಟನೆ ಮಾಡಿಸಿದ್ದಾರೆ. ಚಿತ್ರಕ್ಕಾಗಿ ನಾನು ಯಾವುದೇ ವಿಶೇಷ ತರಬೇತಿಯನ್ನು ಪಡೆದಿಲ್ಲ ಎಂದು ಹೇಳಿದ್ದಾರೆ.

ಕೊತ್ತಲವಾಡಿ ಚಿತ್ರಕ್ಕೆ ಕಾರ್ತಿಕ್ ಎಸ್ ಛಾಯಾಗ್ರಹಣ, ರಾಮಿ ಸೆಟ್ಟಿ ಪವನ್ ಸಂಕಲನ, ರಘು ನಿಡುವಳ್ಳಿ ಸಂಭಾಷಣೆ, ವಿ ನಾಗೇಂದ್ರ ಪ್ರಸಾದ್, ಕಿನ್ನಾಳ ರಾಜ್, ಪ್ರಮೋದ್ ಮರವಂತೆ, ಗೌಸ್ ಪೀರ್ ಸಾಹಿತ್ಯ, ಅಭಿನಂದನ್ ಕಶ್ಯಪ್ ಹಿನ್ನೆಲೆ ಸಂಗೀತ ನೀಡಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!