ದರ್ಶನ್ ಅಭಿಮಾನಿಗಳಿಂದ ಹಲ್ಲೆ ನಡೆದಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ನಟ ಪ್ರಥಮ್, ಸ್ವತಃ ನಟ ದರ್ಶನ್ ಬಂದು ಹೇಳಿಕೆ ನೀಡುವವರೆಗೂ ಒಂದು ತೊಟ್ಟು ನೀರೂ ಕುಡಿಯುವುದಿಲ್ಲ ಎಂದು ಉಪವಾಸ ಸತ್ಯಾಗ್ರಹ ನಡೆಸಿದ್ದಾರೆ.
ತಮ್ಮ ಮೇಲೆ ಹಲ್ಲೆಗೆ ಮುಂದಾಗಿದ್ದರೆ ಪ್ರಥಮ್ ಏಕೆ ಪೊಲೀಸ್ ದೂರು ನೀಡಲಿಲ್ಲ ಎಂದು ದರ್ಶನ್ ಅವರ ಫ್ಯಾನ್ ಪೇಜ್ D Company Fans Association ಪ್ರಶ್ನೆ ಮಾಡಿತ್ತು. ಈ ಬೆನ್ನಲ್ಲೇ ಪ್ರಥಮ್ ಅವರು ದರ್ಶನ್ ಅಭಿಮಾನಿಗಳ ವಿರುದ್ಧ ತಿರುಗಿ ಬಿದ್ದಿದ್ದು, ಹಲ್ಲೆ ವಿಚಾರವಾಗಿ ಪೊಲೀಸರಿಗೆ ದೂರು ನೀಡಿದ್ದಾರೆ.
ಬೆಂಗಳೂರು ಗ್ರಾಮಂತರ ಎಸ್ಪಿ ಕಚೇರಿ ಎದುರು ಪ್ರಥಮ್ ಅವರು ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. ಪ್ರಥಮ್ ಗೆ ಕನ್ನಡಿಗರ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಪ್ರಕಾಶ್ ಸಾಥ್ ನೀಡಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಪ್ರಥಮ್, ‘ಚಿತ್ರರಂಗದ ಒಳಿತಿಗಾಗಿ, ಟ್ರೋಲ್ ವಿರುದ್ಧ ಹೋರಾಡಲು ಆಮರಣಾಂತ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದೇನೆ. ದರ್ಶನ್ ಸರ್ ಬಂದು ಇಲ್ಲಿ ಹೇಳಿಕೆ ನೀಡಬೇಕು. ಇನ್ನೊಂದು ಸಲ ಪ್ರಥಮ್ ಸಹವಾಸಕ್ಕೆ ನಮ್ಮ ಫ್ಯಾನ್ಸ್ ಬರಲ್ಲ ಅಂತ ಅವರು ಹೇಳಬೇಕು’ ಎಂದಿದ್ದಾರೆ.
‘ ಪ್ರಥಮ್ ಸತ್ತರೆ ಸಾಯ್ತಾನೆ ಎಂದರೆ ಸಾಯಲಿ ಬಿಡಿ. ಯಾರು ಏನೂ ಮಾಡೋಕೆ ಆಗಲ್ಲ. ನಾನು ಒಬ್ಬ ಸಾಯೋದರಿಂದ ಚಿತ್ರರಂಗಕ್ಕೆ ಒಳ್ಳೆಯದು ಆಗುತ್ತದೆ ಎಂದರೆ ಆಗಲಿ ಬಿಡಿ’ ಎಂದಿದ್ದಾರೆ.
‘ದರ್ಶನ್ ಮಾಡಿಸಿದ್ದೀರಿ ಅಂತ ನಾನು ಹೇಳಲ್ಲ. ನಿಮ್ಮ ಜೊತೆ ಬ್ಯಾರಕ್ನಲ್ಲಿ ಇದ್ದವರು ಇದರಲ್ಲಿ ಭಾಗಿ ಆಗಿದ್ದಾರೆ ಎಂದರೆ ನೀವು ಎಲ್ಲವನ್ನೂ ನೋಡಿಕೊಂಡು ಮಜಾ ತೆಗೆದುಕೊಳ್ಳುವುದಲ್ಲ. ನಿಮ್ಮ ಬ್ಯಾರಕ್ನಲ್ಲಿ ಇದ್ದವರು ನನಗೆ ವೆಪನ್ ತೋರಿಸಿದ್ದಾರೆ ಎಂದರೆ ನೀವು ಬಂದು ಉತ್ತರ ನೀಡಬೇಕು’ ಎಂದು ಕಿಡಿಕಾರಿದ್ದಾರೆ.
‘ ಕೆಲವು ಫೇಕ್ ಸೋಶಿಯಲ್ ಮೀಡಿಯಾ ಪೇಜ್ಗಳು ಇವೆ. ಡಿ ಡುಬಾಕ್ ನನ್ ಮಕ್ಕಳದ್ದು. 150-200 ಪೇಜ್ಗಳಲ್ಲಿ ಟ್ರೋಲ್ ಮಾಡಿಸುತ್ತಾ ಇದ್ದೀರಿ. ಅಷ್ಟೂ ಪೇಜ್ಗಳು ಡಿಲೀಟ್ ಆಗಬೇಕು’ ಎಂದು ಪ್ರಥಮ್ ಬೇಡಿಕೆ ಇಟ್ಟಿದ್ದಾರೆ.
—-





Pingback: ordering androxal generic pharmacy usa
Pingback: cheap generic enclomiphene canada
Pingback: order xifaxan generic sale
Pingback: how to order staxyn generic in us
Pingback: where to buy dutasteride online
Pingback: buying fildena generic online canada
Pingback: kamagra s doručením v sobotu