ಹಾಸ್ಯನಟ ಫಿಶ್‌ ವೆಂಕಟ್‌ ನಿಧನ

ತೆಲುಗು ಚಿತ್ರರಂಗದಲ್ಲಿ ಹಾಸ್ಯ ನಟನಾಗಿ ತಮ್ಮದೇ ಆದ ಛಾಪು ಮೂಡಿಸಿದ್ದ ಫಿಶ್ ವೆಂಕಟ್ ಅನಾರೋಗ್ಯದ ಕಾರಣದಿಂದ ಕೊನೆಯುಸಿರೆಳೆದಿದ್ದಾರೆ.

ಕೋಟ ಶ್ರೀನಿವಾಸ್ ರಾವ್ ನಿಧನದ ಬೆನ್ನಲ್ಲೇ ತೆಲುಗು ಚಿತ್ರರಂಗಕ್ಕೆ ಮತ್ತೊಂದು ಆಘಾತ ಎದುರಾಗಿದೆ. ಫಿಶ್ ವೆಂಕಟ್ ಅವರು ಅನಾರೋಗ್ಯದಿಂದ ಕಳೆದ ಕೆಲವು ಕಾಲದಿಂದ ಸಿನಿಮಾಗಳಿಂದ ದೂರ ಉಳಿದಿದ್ದರು. ಫಿಶ್ ವೆಂಕಟ್ ಅವರು ಎರಡೂ ಮೂತ್ರಪಿಂಡಗಳು ಹಾಳಾದ ಕಾರಣ ಡಯಾಲಿಸಿಸ್ ಚಿಕಿತ್ಸೆಗೆ ಒಳಗಾಗಿದ್ದರು. ಆರೋಗ್ಯದಲ್ಲಿ ಏರುಪೇರಾದ ಕಾರಣ ಆಸ್ಪತ್ರೆಗೆ ದಾಖಲಿಸಲಾಗಿತ್ತು.

2000ರಲ್ಲಿ ‘ಸಮ್ಮಕ್ಕ ಸಾರಕ್ಕʼ ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಫಿಶ್ ವೆಂಕಟ್ ನೂರಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಎಲ್ಲಾ ಸ್ಟಾರ್ ಹೀರೋಗಳೊಂದಿಗೆ ತೆರೆ ಹಂಚಿಕೊಂಡಿದ್ದರು.  ತಮ್ಮ ವಿಶಿಷ್ಟ ತೆಲಂಗಾಣ ಉಪಭಾಷೆ ಮತ್ತು   ಹಾಸ್ಯ ಸಮಯಪ್ರಜ್ಞೆಗೆ ಹೆಸರುವಾಸಿಯಾಗಿದ್ದರು.

ಹೈದರಾಬಾದ್‌ನಲ್ಲಿ ಜನಿಸಿದ ಅವರು 2000ರ ದಶಕದ ಆರಂಭದಲ್ಲಿ ʼಖುಷಿʼ ಚಿತ್ರದ ಮೂಲಕ ಉತ್ತಮ ಹೆಸರು ಮಾಡಿದ್ದರು. ಆದಿ, ಬನ್ನಿ, ಅದುರ್ಸ್, ಗಬ್ಬರ್ ಸಿಂಗ್ ಮತ್ತು ಡಿಜೆ ಟಿಲ್ಲು ಮುಂತಾದ ಹಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ.

ಹಾಸ್ಯ ಪಾತ್ರಗಳ ಜೊತೆಗೆ ಅವರು ವಿಲನ್ ಪಾತ್ರಗಳಲ್ಲಿನ ಅಭಿನಯದ ಮೂಲಕ  ಛಾಪು ಮೂಡಿಸಿದ್ದರು. ಇತ್ತೀಚಿನ ಚಿತ್ರಗಳಾದ ಸ್ಲಮ್ ಡಾಗ್ ಹಸ್ಬೆಂಡ್, ನರಕಾಸುರ ಮತ್ತು ಕಾಫಿ ವಿತ್ ಎ ಕಿಲ್ಲರ್‌ನಲ್ಲಿ ನಟಿಸಿದ್ದರು.

 

Be the first to comment

Leave a Reply

Your email address will not be published. Required fields are marked *

Translate »
error: Content is protected !!