ಇತ್ತೀಚೆಗಷ್ಟೇ ಮದುವೆ ಆಗಿರುವ ಕಿರುತೆರೆ ನಟಿ ವೈಷ್ಣವಿ ಗೌಡ ಅವರು ತಮ್ಮ ವಿರುದ್ಧದ ಟ್ರೋಲಿಗೆ ದಿಟ್ಟ ಉತ್ತರ ನೀಡಿದ್ದಾರೆ.
ಉತ್ತರ ಭಾರತದ ಅನುಕೂಲ ಮಿಶ್ರಾ ಅವರನ್ನು ಮದುವೆ ಆಗಿರುವ ವೈಷ್ಣವಿ ಗೌಡ ಹನಿಮೂನ್ ಗೆ ತೆರಳಿದಾಗ ಹಾಕಿದ ವಿಡಿಯೋ ಟ್ರೋಲಿಗೆ ಕಾರಣ ಆಗಿತ್ತು. ವಿಡಿಯೋದಲ್ಲಿ ವೈಷ್ಣವಿ ಗೌಡ ತಾಳಿ ಹಾಕಿರಲಿಲ್ಲ. ಹಲವರು ನಿಮಗೆ ಮದುವೆ ಏಕೆ ಬೇಕಿತ್ತು ಎಂದು ಕೇಳಿದ್ದರು.
ಈ ಬಗ್ಗೆ ತಮ್ಮ ಯೂಟ್ಯೂಬ್ ವಿಡಿಯೋದಲ್ಲಿ ಪ್ರತಿಕ್ರಿಯೆ ನೀಡಿರುವ ವೈಷ್ಣವಿ ಗೌಡ, ನಮ್ಮ ಮನೆಯವರ ಪದ್ಧತಿಯಲ್ಲಿ ತಾಳಿ ಇಲ್ಲ. ಅವರು ತಾಳಿ ಅನುಸರಿಸುವುದಿಲ್ಲ. ನಮ್ಮ ಅತ್ತೆ ಕೂಡ ತಾಳಿ ಹಾಕುವುದಿಲ್ಲ. ಮದುವೆ ಆಗಿದೆ ಎಂದು ಗೊತ್ತಾಗಲು ಮೂಗು ಚುಚ್ಚಿಸಿರಬೇಕು. ಕೈಯಲ್ಲಿ ಗಾಜಿನ ಬಳೆ ಇರಬೇಕು. ಕಾಲುಂಗುರ ಹಾಕಬೇಕು. ಒಂದು ದಾರ ಕಟ್ಟಿಕೊಳ್ಳಬೇಕು. ನಮ್ಮ ಶಾಸ್ತ್ರ, ಸಂಪ್ರದಾಯದ ಬಗ್ಗೆ ನನಗೆ ಗೌರವ ಇದೆ. ತಾಳಿ ಹಾಕುವುದಿಲ್ಲ ಎಂದ ಮಾತ್ರಕ್ಕೆ ಗೌರವ ಇಲ್ಲ ಎಂದಲ್ಲ. ಅವರ ಸಂಪ್ರದಾಯದಲ್ಲಿ ತಾಳಿ ಇಲ್ಲದ ಕಾರಣ ನಾನು ತಾಳಿ ಹಾಕಿಕೊಂಡಿಲ್ಲ ಎಂದು ಹೇಳಿದ್ದಾರೆ.
ಸೆಲೆಬ್ರೇಟಿಗಳು ತಾಳಿ ಹಾಕದ ವಿಚಾರಕ್ಕೆ ಈ ಹಿಂದೆಯೂ ಟ್ರೋಲ್ ಆಗಿದ್ದರು. ವೈಷ್ಣವಿ ಗೌಡ ಇದಕ್ಕೆ ತಕ್ಕ ಉತ್ತರ ನೀಡಿದ್ದಾರೆ.
__





Be the first to comment