ಚಿತ್ರ: ದೂರ ತೀರ ಯಾನ
ನಿರ್ದೇಶನ: ಮಂಸೋರೆ
ನಿರ್ಮಾಪಕ: ಆರ್ ದೇವರಾಜ್
ತಾರಾ ಬಳಗ: ವಿಜಯ್ ಕೃಷ್ಣ, ಪ್ರಿಯಾಂಕಾ ಕುಮಾರ್, ಶರತ್ ಲೋಹಿತಾಶ್ವ, ಸುಧಾರಾಣಿ ಮುಂತಾದವರು
ರೇಟಿಂಗ್: 3.5
ಪರಸ್ಪರ ಪ್ರೀತಿಸಿದ ಪ್ರೇಮಿಗಳು ಇನ್ನು ಮುಂದೆ ಒಟ್ಟಿಗೆ ಬದುಕಲು ಸಾಧ್ಯವಿಲ್ಲ ಎಂದಾಗ ಖುಷಿಯಿಂದಲೇ ಸಂಬಂಧವನ್ನು ಹೇಗೆ ಮುರಿದುಕೊಳ್ಳಬಹುದು ಎಂದು ಹೇಳುವ ಸಿನಿಮಾ ಈ ವಾರ ತೆರೆಗೆ ಬಂದಿರುವ ‘ ದೂರ ತೀರ ಯಾನ ‘.
ಈ ಸಿನಿಮಾ ಪ್ರೀತಿಗಾಗಿ ಹೋರಾಡುವ, ತ್ಯಾಗದ ಕಥೆಯಲ್ಲ. ಇಲ್ಲಿ ನಿರ್ದೇಶಕರು ಹೊಸ ಆಯಾಮವನ್ನು ಲವ್ ಸ್ಟೋರಿಗೆ ನೀಡುವ ಯತ್ನ ಮಾಡಿದ್ದಾರೆ. ಇದನ್ನು ಶ್ಲಾಘಿಸಬೇಕಿದೆ.
ಚಿತ್ರದ ನಾಯಕ ಆಕಾಶ್ ಹಾಗೂ ನಾಯಕಿ ಭೂಮಿ ಐದಾರು ವರ್ಷಗಳಿಂದ ಪ್ರೀತಿಸುತ್ತಿರುತ್ತಾರೆ. ಆದರೆ ಇವರ ನಡುವೆ ಜಗಳಗಳು ನಡೆಯುತ್ತವೆ. ಇದರಿಂದ ಅವರಿಬ್ಬರೂ ಒಂದು ವಾರಗಳ ಕಾಲ ಪ್ರವಾಸ ಹೊರಟು ತಮ್ಮನ್ನು ಅರ್ಥಮಾಡಿಕೊಳ್ಳಲು ಯತ್ನಿಸುತ್ತಾರೆ. ನಾಯಕ ಹಾಗೂ ನಾಯಕಿ ಪ್ರವಾಸದಿಂದ ತಮ್ಮ ಪ್ರೀತಿಯನ್ನು ಉಳಿಸಿಕೊಳ್ಳುತ್ತಾರಾ? ಬೇರೆ ಆಗುತ್ತಾರೆಯೇ ಎನ್ನುವುದಕ್ಕೆ ಚಿತ್ರವನ್ನು ನೋಡಬೇಕಿದೆ.
ಚಿತ್ರದ ನಾಯಕ ವಿಜಯ್ ಕೃಷ್ಣ ಉತ್ತಮವಾಗಿ ನಟಿಸಿದ್ದಾರೆ. ನಾಯಕಿ ಪಾತ್ರದಲ್ಲಿ ಪ್ರಿಯಾಂಕಾ ಕುಮಾರ್ ಓಕೆ ಅನಿಸುತ್ತಾರೆ. ಸಿನಿಮಾದಲ್ಲಿ ಶರತ್ ಲೋಹಿತಾಶ್ವ ಅವರು ಹೊಸ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಶೃತಿ ಹರಿಹರನ್, ಸುಧಾರಾಣಿ ಸಿನಿಮಾಗೆ ಜೀವ ತುಂಬುವ ಯತ್ನ ಮಾಡಿದ್ದಾರೆ.
ಶೇಖರ್ ಚಂದ್ರ ಅವರು ಬೆಂಗಳೂರಿನಿಂದ ಆರಂಭವಾಗುವ ಕಥೆಗೆ ಮಂಗಳೂರು, ಉಡುಪಿ, ಗೋಕರ್ಣ, ಗೋವಾ ಹೀಗೆ ಕರಾವಳಿಯ ಸುಂದರ ತಾಣಗಳನ್ನು ಉತ್ತಮವಾಗಿ ಚಿತ್ರಿಸಿದ್ದಾರೆ. ಕಾರ್ತಿಕ್, ಬಕ್ಕೇಶ್ ಹಿನ್ನೆಲೆ ಸಂಗೀತ ಮನಸ್ಸಿಗೆ ಖುಷಿ ನೀಡುತ್ತದೆ.
ಮನೆಮಂದಿ ಎಲ್ಲರೂ ಒಟ್ಟಾಗಿ ಕುಳಿತು ನೋಡುವ ಚಿತ್ರವಾಗಿ ದೂರ ತೀರ ಯಾನ ಮೂಡಿ ಬಂದಿದೆ.






Be the first to comment