ಕಿರಣ್ ರಾಜ್, ಭವ್ಯಾ ಗೌಡ, ನಮ್ರತಾ ಗೌಡ ನಟಿಸಿರುವ ‘ಕರ್ಣ’ ಧಾರಾವಾಹಿಗೆ ಟಿಆರ್ಪಿಯಲ್ಲಿ ಮೊದಲ ಸ್ಥಾನ ಸಿಕ್ಕಿದೆ.
‘ಕರ್ಣ’ ಧಾರಾವಾಹಿಗೆ ಬರೋಬ್ಬರಿ 11 ಟಿವಿಆರ್ ಸಿಕ್ಕಿದೆ. ಈ ಮೊದಲು ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ 13.5 ಟಿವಿಆರ್ ಪಡೆದು ದಾಖಲೆ ಬರೆದಿತ್ತು. ನಂತರದ ಸ್ಥಾನದಲ್ಲಿ ‘ಜೊತೆ ಜೊತೆಯಲಿ’ ಧಾರಾವಾಹಿ (11.8 ಟಿವಿಆರ್) ಹಾಗೂ ‘ನಾಗಿಣಿ 2’ (11.2 ಟಿವಿಆರ್) ಧಾರಾವಾಹಿಗಳು ಇವೆ.
‘ಕರ್ಣನ ದಾರಿಯಲ್ಲಿ ಸಾವಿರ ಅಡೆತಡೆಗಳು ಎದುರಾದರೂ ಅವನು ಗುರಿ ತಪ್ಪಲಿಲ್ಲ. ಕರ್ಣ ಬರುವುದು ತಡವಾದರೂ ನೀವು ಅವನಿಗಾಗಿ ಕಾಯುವುದನ್ನು ನಿಲ್ಲಿಸಲಿಲ್ಲ. ಸವಾಲುಗಳನ್ನೆಲ್ಲಾ ಬದಿಗೊತ್ತಿ ಹೊತ್ತು ಮೀರಿ ಬಂದ ಮನೆ ಮಗನಿಗೆ ಕೈ ತುತ್ತು ನೀಡಿ ಉಪಚರಿಸಿದ್ದೀರಿ. ಹುಟ್ಟಿನಿಂದಲೂ ಪ್ರೀತಿ ಕಾಣದ ಕರ್ಣನನ್ನ ಅಪ್ಪಿ ಮುದ್ದಾಡಿದ್ದೀರಿ. ಕನ್ನಡಿಗರ ಈ ಪ್ರೀತಿ ಇಂದು ಕರ್ಣನನ್ನು ಎಲ್ಲರಿಗಿಂತ ಎತ್ತರದಲ್ಲಿ ನಿಲ್ಲಿಸಿದೆ. ನಿಮ್ಮ ಬೆಂಬಲಕ್ಕೆ ಸದಾ ಋಣಿಯಾಗಿರುತ್ತೇವೆ’ ಎಂದು ಜೀ ಕನ್ನಡ ವಾಹಿನಿ ಪೋಸ್ಟ್ ಮಾಡಿದೆ.
ಕಿರಣ್ ರಾಜ್, ನಮ್ರತಾ ಹಾಗೂ ಭವ್ಯಾ ಈ ಮೂವರಿಗೂ ಒಳ್ಳೆಯ ಮಾರುಕಟ್ಟೆ ಇದೆ. ‘ಕರ್ಣ’ ಧಾರಾವಾಹಿಯಲ್ಲಿ ಕಿರಣ್ ರಾಜ್ ಪ್ರಸೂತಿ ವೈದ್ಯ, ಭವ್ಯಾ ಗೌಡ ವೈದ್ಯಕೀಯ ವಿದ್ಯಾರ್ಥಿನಿ, ನಮ್ರತಾ ಭವ್ಯಾ ಸಹೋದರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
—–





Be the first to comment