ಸೀರಿಯಲ್ ನಟಿಗೆ ಚಾಕು ಇರಿತ

ಕಿರುತೆರೆ ನಟಿ ಹಾಗೂ ಖಾಸಗಿ ವಾಹಿನಿಯ ನಿರೂಪಕಿಗೆ ಗಂಡ ಚಾಕು ಇರಿದ ಘಟನೆ ನಡೆದಿದೆ.

ಬೆಂಗಳೂರಿನ ಹನುಮಂತ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮುನೇಶ್ವರ ಲೇಔಟ್ ನಲ್ಲಿ ಘಟನೆ ನಡೆದಿದೆ.  ಮಂಜುಳ @ಶೃತಿ ಚಾಕು ಇರಿತಕ್ಕೋಳಗಾದ ಕಿರುತೆರೆ ನಟಿಯಾಗಿದ್ದು,  ಅಮೃತಧಾರೆ ಸೇರಿದಂತೆ ಹಲವು ಸೀರಿಯಲ್ ಗಳಲ್ಲಿ ನಟಿಸಿದ್ದಾರೆ. ಘಟನೆ ಸಂಬಂಧ ಆರೋಪಿಯನ್ನು ಬಂಧಿಸಲಾಗಿದೆ.

ಅಮರೇಶ್ ಎಂಬಾತನನ್ನು ಮಂಜುಳ ಪ್ರೀತಿಸಿ ಮದುವೆಯಾಗಿದ್ದರು.  ಹನುಮಂತ ನಗರದಲ್ಲಿ ಲೀಸ್ ಗೆ ಮನೆ ಪಡೆದು ವಾಸವಿದ್ದ ದಂಪತಿ ನಡುವೆ ಹೊಂದಾಣಿಕೆ ಇರಲಿಲ್ಲ. ಹೀಗಾಗಿ ಮಂಜುಳ ಗಂಡನಿಂದ ದೂರವಾಗಿ ಅಣ್ಣನ ಮನೆಯಲ್ಲಿದ್ದರು.  ಕಳೆದ ಏಪ್ರಿಲ್ ನಲ್ಲಿ ಇಬ್ಬರ ನಡುವೆ ಲೀಸ್ ಹಣಕ್ಕಾಗಿ  ಜಗಳ ನಡೆದಿತ್ತು.

ಈ ಬಗ್ಗೆ ಹನುಮಂತ ನಗರ ಪೊಲೀಸ್ ಠಾಣೆಯಲ್ಲಿ ಮಂಜುಳ ದೂರು  ನೀಡಿದ್ದರು. ಬಳಿಕ  ರಾಜಿ ಆಗಿ ಒಂದಾಗಿದ್ದರು. ಆದರೆ ಇಬ್ಬರು ಒಂದಾದ ಮಾರನೇ ದಿನವೇ ಅಮರೇಶ್ ಹೆಂಡತಿಗೆ ಚಾಕು ಇರಿದಿದ್ದಾನೆ. ಪೆಪ್ಪರ್ ಸ್ಪ್ರೇ ಹೊಡೆದು ಸಿನಿಮಾ ಸ್ಟೈಲ್ ನಲ್ಲಿ ತಲೆ ಕೂದಲು ಹಿಡಿದು  ತಲೆ ಗೋಡೆಗೆ  ಗುದ್ದಿ ಕೊಲೆಗೆ ಯತ್ನ ಮಾಡಲಾಗಿದೆ. ಘಟನೆ ಸಂಬಂಧ ಹನುಮಂತ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ವಿಕ್ಟೋರಿಯಾ ಆಸ್ಪತ್ರೆಯಲ್ಲಿ  ಮಂಜುಳ  ಚಿಕಿತ್ಸೆ ಪಡೆಯುತ್ತಿದ್ದಾರೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!