ಜಂಗಲ್ ಮಂಗಲ್

Movie Review: ಕಾಡಿನಲ್ಲಿ ಪ್ರೇಮಿಗಳ ಪೇಚಾಟದ ಜಂಗಲ್ ಮಂಗಲ್

ಚಿತ್ರ: ಜಂಗಲ್ ಮಂಗಲ್
ನಿರ್ದೇಶನ: ರಕ್ಷಿತ್ ಕುಮಾರ್
ನಿರ್ಮಾಣ: ಪ್ರಜಿತ್ ಹೆಗಡೆ
ತಾರಾ ಬಳಗ: ಯಶ್ ಶೆಟ್ಟಿ, ಹರ್ಷಿತಾ ರಾಮಚಂದ್ರ, ಉಗ್ರಂ ಮಂಜು, ಬಲ ರಾಜವಾಡಿ, ದೀಪಕ್ ರೈ ಪಾಣಾಜೆ, ಇತರರು
ರೇಟಿಂಗ್: 3.5

ಪ್ರೇಮಿಗಳು ಕಾಡಿನಲ್ಲಿ ತಿರುಗಾಡಲು ಹೋದಾಗ ಅಲ್ಲಿ ನಡೆಯುವ ಕೊಲೆಯ ನಿಗೂಢ ಕಥೆಯ ಚಿತ್ರ ಈ ವಾರ ತೆರೆಗೆ ಬಂದಿರುವ ಜಂಗಲ್ ಮಂಗಲ್.

ಶಿಕ್ಷಕಿಯಾಗಿ ಕೆಲಸ ಮಾಡುವ ನಾಯಕಿಗೆ ಸ್ವಂತ ಉದ್ಯೋಗ ಮಾಡುವ ನಾಯಕನ ಮೇಲೆ ಪ್ರೀತಿ. ಲಕ್ಡೌನ್ ಸಂದರ್ಭದಲ್ಲಿ ಇವರಿಬ್ಬರು ಭೇಟಿಯಾಗಲು ಪರದಾಡುತ್ತಾರೆ. ನಾಯಕ ಹೇಗೋ ನಾಯಕಿಯನ್ನು ಕಾಡಿನೊಳಗೆ ಕರೆದುಕೊಂಡು ಹೋಗುವಾಗ ಮರಗಳ್ಳತನ ಮಾಡುವ ಗ್ಯಾಂಗ್ ನ ಕೈಗೆ ಸಿಲುಕಿಕೊಳ್ಳುತ್ತಾರೆ. ಒಬ್ಬ ವ್ಯಕ್ತಿ ನಾಯಕಿಯನ್ನು ಬಲಾತ್ಕಾರ ಮಾಡಲು ಮುಂದಾದಾಗ ಅವನು ಗುಂಡೇಟಿಗೆ ಸಾಯುತ್ತಾನೆ. ಅವನನ್ನು ಕೊಂದದ್ದು ಯಾರು? ಕಾಡಿನಲ್ಲಿ ಸಿಕ್ಕಿಕೊಂಡ ಪ್ರೇಮಿಗಳ ಪಾಡು ಏನಾಗುತ್ತದೆ ಇದನ್ನು ನೋಡಲು ಚಿತ್ರವನ್ನು ವೀಕ್ಷಿಸಬೇಕಿದೆ.

ನಿರ್ದೇಶಕರು ಚಿತ್ರವನ್ನು ರೋಚಕವಾಗಿ ತೆರೆಯ ಮುಂದೆ ತರುವ ಜೊತೆಗೆ ವಿಧಿಯ ಆಟದ ಮುಂದೆ ಏನೂ ಇಲ್ಲ ಎಂದು ಹೇಳುವ ಯತ್ನವನ್ನು ಮಾಡಿದ್ದಾರೆ. ನಾಯಕ ನಟ ಯಶ್ ಶೆಟ್ಟಿ ನೈಜವಾಗಿ ನಟಿಸಿದ್ದಾರೆ. ನಾಯಕಿ ಹರ್ಷಿತಾ ರಾಮಚಂದ್ರ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸುವ ಯತ್ನ ಮಾಡಿದ್ದಾರೆ. ಖಳನಾಯಕನ ಪಾತ್ರದಲ್ಲಿ ಉಗ್ರಂ ಮಂಜು ಆರ್ಭಟಿಸಿದ್ದಾರೆ. ನಾಯಕಿಯ ತಂದೆಯ ಪಾತ್ರಧಾರಿ ಬಾಲ ರಾಜವಾಡಿ ತಮ್ಮ ನಟನೆಯ ಮೂಲಕ ಗಮನ ಸೆಳೆದಿದ್ದಾರೆ.

ಚಿತ್ರದ ಛಾಯಾಗ್ರಹಣ ಹಾಗೂ ಹಿನ್ನೆಲೆ ಸಂಗೀತ ಗಮನ ಸೆಳೆಯುತ್ತದೆ. ಸಸ್ಪೆನ್ಸ್, ಥ್ರಿಲ್ಲರ್, ಮರ್ಡರ್ ಮಿಸ್ಟ್ರಿ ಕಥೆಗಳನ್ನು ಇಷ್ಟಪಡುವವರಿಗೆ ಈ ಚಿತ್ರ ಇಷ್ಟವಾಗುತ್ತದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!