ಜೂನಿಯರ್

ಜುಲೈ 18ರಂದು ‘ಜೂನಿಯರ್’ ಬಿಡುಗಡೆ

ಜಿ ಜನಾರ್ದನ ರೆಡ್ಡಿ ಅವರ ಪುತ್ರ ಕಿರೀಟಿ ಬಹುನಿರೀಕ್ಷಿತ ಚಿತ್ರ ‘ಜೂನಿಯರ್ ‘ ಜುಲೈ 18 ರಂದು ಬಿಡುಗಡೆಯಾಗಲು ಸಜ್ಜಾಗಿದೆ.

ಚಿತ್ರತಂಡ ಟೀಸರ್ ಬಿಡುಗಡೆ ಮಾಡಿದ್ದು, ಇದು ಮಾಸ್ ಮತ್ತು ಕ್ಲಾಸ್ ಅಂಶಗಳನ್ನು ಸಂಯೋಜನೆಯಿದೆ.  ಶಕ್ತಿಯುತ ಸಂಭಾಷಣೆ,  ಆ್ಯಕ್ಷನ್ ಸನ್ನಿವೇಶಗಳು ಮತ್ತು  ನೃತ್ಯದ ಮೂಲಕ ಕಿರೀಟಿ  ಅವರ ಅಭಿನಯ ಭರವಸೆ ಮೂಡಿಸುವಂತಿದೆ.

ಚಿತ್ರದಲ್ಲಿ ಕ್ರೇಜಿ ಸ್ಟಾರ್ ರವಿಚಂದ್ರನ್, ಜೆನಿಲಿಯಾ ದೇಶಮುಖ್  ಮತ್ತು ಶ್ರೀಲೀಲಾ ನಾಯಕಿಯಾಗಿ ನಟಿಸಿದ್ದಾರೆ. ಚಿತ್ರಕ್ಕೆ ಮಾಯಾಬಜಾರ್ ಖ್ಯಾತಿಯ ರಾಧಾಕೃಷ್ಣ ರೆಡ್ಡಿ ಆ್ಯಕ್ಷನ್ ಕಟ್ ಹೇಳಿದ್ದಾರೆ. ಪೀಟರ್ ಹೆನ್ ಅವರ ಸಾಹಸ ಸಂಯೋಜನೆಯಿದೆ.

ಚಿತ್ರಕ್ಕೆ ದೇವಿ ಶ್ರೀ ಪ್ರಸಾದ್ ಅವರ ಸಂಗೀತ ಸಂಯೋಜನೆ, ಸೆಂಥಿಲ್ ಕುಮಾರ್ ಅವರ ಛಾಯಾಗ್ರಹಣ ಮತ್ತು ನಿರಂಜನ್ ದೇವರಮನೆ  ಸಂಕಲನವಿದೆ. ಸಾಯಿ ಕೊರ್ರಪತಿ ಅವರ ವಾರಾಹಿ ಚಲನ ಚಿತ್ರಂ ಚಿತ್ರನಿರ್ಮಿಸಿದೆ. ಜೂನಿಯರ್ ಕನ್ನಡ, ತೆಲುಗು, ತಮಿಳು, ಹಿಂದಿ ಮತ್ತು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

ಮೂರು ವರ್ಷಗಳ ನಿರ್ಮಾಣದ ನಂತರ ‘ಜೂನಿಯರ್ ‘ ಚಿತ್ರ ಜುಲೈ 18 ರಂದು ಯುವ ರಾಜ್‌ಕುಮಾರ್ ನಟನೆಯ ‘ಎಕ್ಕ’ ಚಿತ್ರದ ಜೊತೆಗೆ ಬಿಡುಗಡೆಯಾಗಲಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!