ವಿಶ್ವದ ಅತಿದೊಡ್ಡ ಪ್ರಶಸ್ತಿ ಪ್ರದಾನ ಸಮಾರಂಭವಾದ ಆಸ್ಕರ್ ಪ್ರಶಸ್ತಿಗಳ 2025 ರ ಮತದಾನ ಸಮಿತಿಯಲ್ಲಿ ಭಾರತವನ್ನು ಪ್ರತಿನಿಧಿಸಲು ಕಮಲ್ ಹಾಸನ್ ಆಯ್ಕೆಯಾಗಿದ್ದಾರೆ.
ಆಸ್ಕರ್ ಪ್ರಶಸ್ತಿಗಳ 534 ಸದಸ್ಯರ ಸಮಿತಿ ಯಾವ ಚಿತ್ರ ಪ್ರಶಸ್ತಿಗೆ ಅರ್ಹವಾಗಿದೆ ಎಂಬುದನ್ನು ನಿರ್ಧರಿಸಿ ಅಂತಿಮ ಪಟ್ಟಿಯಲ್ಲಿ ಭಾಗವಹಿಸುವ ಚಿತ್ರಗಳಿಗೆ ಮತ ಚಲಾಯಿಸುತ್ತದೆ. ಆ ಸದಸ್ಯರ ಗುಂಪಿನಲ್ಲಿ ಕಮಲ್ ಹಾಸನ್ ಸ್ಥಾನ ಪಡೆದಿದ್ದಾರೆ.
ಕಮಲ್ ಹಾಸನ್ ಬಾಲನಟನಾಗಿ ಸಿನಿರಂಗಕ್ಕೆ ಪಾದಾರ್ಪಣೆ ಮಾಡಿ ಭಾರತೀಯ ಸಿನಿಮಾ ರಂಗದ ಬೆಳವಣಿಗೆಗೆ ಅಪಾರ ಕೊಡುಗೆ ನೀಡಿದ್ದಾರೆ. ನಿರ್ಮಾಪಕ, ನೃತ್ಯ ಸಂಯೋಜಕ, ನಿರ್ದೇಶಕ, ಗಾಯಕ, ಗೀತರಚನೆಕಾರರಾಗಿ ಕೊಡುಗೆ ನೀಡಿದ್ದಾರೆ. ಭಾರತದಲ್ಲಿ ಹೊಸ ಚಲನಚಿತ್ರ ತಂತ್ರಜ್ಞಾನಗಳನ್ನು ಪರಿಚಯಿಸಿ ಉಳಗ (ವಿಶ್ವ) ನಾಯಕ ಎಂದೇ ಖ್ಯಾತಿ ಪಡೆದಿದ್ದಾರೆ.
ಈ ವರ್ಷದ ಪಟ್ಟಿಯಲ್ಲಿ ಭಾರತದಿಂದ ಬಾಲಿವುಡ್ ನಟ ಆಯುಷ್ಮಾನ್ ಖುರಾನಾ, ನಿರ್ದೇಶಕಿ ಪಾಯಲ್ ಕಪಾಡಿಯಾ, ಸಾಕ್ಷ್ಯಚಿತ್ರ ನಿರ್ದೇಶಕಿ ಸ್ಮೃತಿ ಮುಂದ್ರಾ, ಪ್ರಸಿದ್ಧ ಫ್ಯಾಷನ್ ಡಿಸೈನರ್ ಮ್ಯಾಕ್ಸಿಮಾ ಬಸು, ಛಾಯಾಗ್ರಾಹಕ ರಣಬೀರ್ ದಾಸ್ ಅವರನ್ನು ಆಯ್ಕೆ ಮಾಡಲಾಗಿದೆ.
2026 ರ ಆಸ್ಕರ್ ಪ್ರಶಸ್ತಿಗಳು ಮಾರ್ಚ್ 15 ರಂದು ಅಮೆರಿಕದ ಲಾಸ್ ಏಂಜಲೀಸ್ನಲ್ಲಿ ನಡೆಯಲಿವೆ. ಪ್ರಶಸ್ತಿಗೆ ನಾಮನಿರ್ದೇಶನಗೊಂಡ ಚಿತ್ರಗಳಿಗೆ ಮತದಾನ ಜನವರಿ 12, 2026 ರಿಂದ ಜನವರಿ 16, 2026 ರವರೆಗೆ ನಡೆಯಲಿದೆ. ಜನವರಿ 22 ರಂದು ನಾಮನಿರ್ದೇಶಿತರ ಅಂತಿಮ ಪಟ್ಟಿಯನ್ನು ಬಿಡುಗಡೆ ಮಾಡಲಾಗುವುದು.
—–





Be the first to comment