ಮುಂದಿನ ಬದಲಾವಣೆ `ಜೋಡೆತ್ತು’!

ಮುಂದಿನ ಬದಲಾವಣೆ `ಜೋಡೆತ್ತು’
ದರ್ಶನ್ ಮತ್ತು ಯಶ್ ಮಂಡ್ಯ ಅಖಾಡಕ್ಕೆ ಕಾಲಿಟ್ಟು, ‘ಜೋಡೆತ್ತುಗಳು’ ಎಂದು ವರ್ಲ್ಡ್ ಫೇಮಸ್ ಆದಾಗಲೇ ಇವರಿಬ್ಬರ ಅಭಿಮಾನಿಗಳಲ್ಲಿ ದರ್ಶನ್&ಯಶ್ ಇಬ್ಬರನ್ನೂ ಒಂದೇ ಚಿತ್ರದಲ್ಲಿ ನೋಡುವ ಕನಸು ಚಿಗಿರೊಡೆದಿತ್ತು. ಈಗ ಆ ಕನಸು ಸಾಕಾರವಾಗುವ ಸಾಧ್ಯತೆ ಇನ್ನಷ್ಟು ಹೆಚ್ಚಿದೆ. ಸ್ವತಃ ರಾಕಿ ಭಾಯ್ ದರ್ಶನ್ ಜೊತೆ ನಟಿಸುವ ಇಂಗಿತವನ್ನು ವ್ಯಕ್ತ ಪಡಿಸಿದ್ದಾರೆ.
ಚುನಾವಣೆ ಬಳಿಕ ಮೊದಲ ಸಲ ಮಂಡ್ಯಗೆ ಆಗಮಿಸಿದ್ದ ನಟ ರಾಕಿಂಗ್ ಸ್ಟಾರ್ ಯಶ್ ಮಾತನಾಡಿದ್ದು, ಈ ಸಂದರ್ಭದಲ್ಲಿ ಕೇಳಲಾದ ದರ್ಶನ್ ಜತೆಗೆ ಸಿನಿಮಾ ಮಾಡುವ ಆಲೋಚನೆ ಇದೆಯೇ ಎಂಬ ಪ್ರಶ್ನೆಗೆ ಉತ್ತರಿಸಿರುವ ಯಶ್, “ಒಳ್ಳೆಯ ಕಥೆ ಸಿಕ್ಕಿದರೆ ಖಂಡಿತ ಮಾಡುತ್ತೇನೆ, ದರ್ಶನ್ ಅವರು ನನಗಿಂತ ಹಿರಿಯ ನಟ. ಅವರೊಬ್ಬ ದೊಡ್ಡ ಸ್ಟಾರ್. ಒಳ್ಳೆಯ ಕಥೆ ಸಿಕ್ಕಿದರೆ ಖಂಡಿತ ಅವರ ಜತೆಗೆ ಸಿನಿಮಾ ಮಾಡುತ್ತೇನೆ. ಚುನಾವಣಾ ಪ್ರಚಾರ ಸಂದರ್ಭದಲ್ಲಿ ದರ್ಶನ್ ಪ್ರೀತಿಯಿಂದ ಜೋಡೆತ್ತು ಎಂದು ಹೇಳಿದ್ದರು. ಆ ಮಾತು ತುಂಬಾ ಜನಪ್ರಿಯವಾಯಿತು. ಈಗ ಇದೇ ಟೈಟಲ್ ರಿಜಿಸ್ಟರ್ ಆಗಿದೆ. ನಾನೇನು ಆ ಸಿನಿಮಾದಲ್ಲಿ ನಾನೇನು ನಟಿಸುತ್ತಿಲ್ಲ’ ಎಂದಿದ್ದಾರೆ.
ಆದರೆ, `ಜೋಡೆತ್ತು’ ಟೈಟಲ್ ರಿಜಿಸ್ಟ್ರ್ ಯಾವ ಬ್ಯಾನರ್  ಅಡಿಯಲ್ಲಿ ಎಂಬುದು ಇನ್ನೂ ನಿಗೂಢವಾಗಿದೆ. ಜೊತೆಗೆ, ಆ ಟೈಟಲ್ ಅನ್ನು ಸ್ಯಾಂಡಲ್ವು‍ಡ್ನಿ ಹೆಸರಾಂತ ನಿರ್ಮಾಪಕರೊಬ್ಬರು ಹೆಚ್ಚಿನ ಮೊತ್ತಕ್ಕೆ ಖರೀದಿಸಿ, ದರ್ಶನ್&ಯಶ್ ಅವರನ್ನು ತಲೆಯಲ್ಲಿಟ್ಟುಕೊಂಡು ಚಿತ್ರದ ಪ್ರೀಪ್ರೊಡಕ್ಷನ್ ಕೆಲಸ ಆರಂಭ ಮಾಡಿದ್ದಾರೆ ಎಂಬ ಮಾತೂ ಹರಿದಾಡುತ್ತಿದೆ. ಒಟ್ಟಿನಲ್ಲಿ ಸುಮಲತಾರಿಗಾಗಿ ಒಂದಾದ ಜೊಡೆತ್ತುಗಳು ಬೆಳ್ಳಿತೆರೆಯ ಮೇಲು ಜೋಡೆತ್ತುಗಳಾಗಿ ಮಿಂಚುತ್ತಾರಾ ಕಾದುನೋಡಬೇಕು.

-www.bcinemas.in

This Article Has 2 Comments
  1. Pingback: DevOps outsourcing

  2. Pingback: Plumbing Giant Polkton NC

Leave a Reply

Your email address will not be published. Required fields are marked *

Translate »
error: Content is protected !!