‘ಥಗ್ ಲೈಫ್ ‘ಚಿತ್ರ ಕರ್ನಾಟಕದಲ್ಲಿ ರಿಲೀಸ್ ಆಗದ ಕಾರಣ ಸುಮಾರು 30 ಕೋಟಿ ರೂಪಾಯಿಯಷ್ಟು ನಷ್ಟ ಉಂಟಾಗಿರಬಹುದು ಎಂದು ಊಹಿಸಲಾಗಿದೆ.
‘ಕನ್ನಡ ಹುಟ್ಟಿದ್ದು ತಮಿಳಿನಿಂದ’ ಎಂದ ಕಮಲ್ ಹಾಸನ್ ಹೇಳಿಕೆ ಸಾಕಷ್ಟು ವಿವಾದವನ್ನು ಸೃಷ್ಟಿ ಮಾಡಿತು. ಅವರು ಕ್ಷಮೆ ಕೇಳಬೇಕು ಎಂದು ಸಿನಿಮಾ ರಿಲೀಸ್ಗೆ ಕರ್ನಾಟಕದಲ್ಲಿ ಅವಕಾಶ ನೀಡಲಿಲ್ಲ. ಜೂನ್ 5ರಂದು ‘ಥಗ್ ಲೈಫ್ ಸಿನಿಮಾ ರಿಲೀಸ್ ಆಯಿತು. ಈ ಚಿತ್ರ ಈವರೆಗೆ ಕರ್ನಾಟಕದಲ್ಲಿ ಬಿಡುಗಡೆ ಕಂಡಿಲ್ಲ.
ತಮಿಳು ಸಿನಿಮಾಗಳಿಗೆ ಬೆಂಗಳೂರಲ್ಲಿ ಒಳ್ಳೆಯ ಮಾರುಕಟ್ಟೆ ಇದೆ. ಈ ಮೊದಲು ಅನೇಕ ತಮಿಳು ಚಿತ್ರಗಳು ಕರ್ನಾಟಕದಿಂದ ಒಳ್ಳೆಯ ಕಲೆಕ್ಷನ್ ಮಾಡಿದ ಉದಾಹರಣೆ ಇದೆ. ಕರ್ನಾಟಕದಲ್ಲಿ ‘ಥಗ್ ಲೈಫ್ ‘ಚಿತ್ರ ರಿಲೀಸ್ ಆಗಿದ್ದರೆ ಸಿನಿಮಾ ಕಲೆಕ್ಷನ್ ಸ್ವಲ್ಪ ಚೇತರಿಕೆ ಕಾಣುತ್ತಿತ್ತೇನೋ. ಆದರೆ ಹಾಗಾಗಿಲ್ಲ.
ಕಮಲ್ ಹಾಸನ್ ಸಿನಿಮಾ ರಿಲೀಸ್ ಮಾಡಲು ಕೋರ್ಟ್ ಮೆಟ್ಟಿಲೇರಿದ್ದರು. ಸುಪ್ರೀಂಕೋರ್ಟ್ ಸಿನಿಮಾ ರಿಲೀಸ್ ಮಾಡಲು ಗ್ರೀನ್ ಸಿಗ್ನಲ್ ನೀಡಿ ಯಾವುದೇ ಕಾನೂನು ಸುವ್ಯವಸ್ಥೆಗೆ ಅಡಚಣೆ ಉಂಟಾಗದಂತೆ ಸರ್ಕಾರ ಸೂಕ್ತ ಭದ್ರತೆ ಒದಗಿಸುವಂತೆ ಸೂಚಿಸಿದೆ.
‘ಥಗ್ ಲೈಫ್’ ಸಿನಿಮಾಗೆ ಕಮಲ್ ಹಾಸನ್ ನಿರ್ಮಾಣ ಇದೆ. ಮಣಿರತ್ನ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಕಮಲ್ ಹಾಸನ್, ತ್ರಿಷಾ, ಅಭಿರಾಮಿ, ಸಿಂಬು ಮೊದಲಾದವರು ನಟಿಸಿದ್ದಾರೆ.
—-





Be the first to comment