ಕನ್ನಡ ಕೋಗಿಲೆ ರಿಯಾಲಿಟಿ ಶೋ ಮೂಲಕ ಗುರುತಿಸಿಕೊಂಡ ಅಖಿಲಾ ಪಜಿಮಣ್ಣು ವಿಚ್ಛೇದನಕ್ಕಾಗಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ.
ಅಖಿಲಾ ಪಜಿಮಣ್ಣು ವಿವಾಹ 3 ವರ್ಷಗಳ ಹಿಂದೆ ಅಮೆರಿಕ ನಿವಾಸಿ ಧನಂಜಯ್ ಶರ್ಮ ಜೊತೆ ನೆರವೇರಿತ್ತು. ಆದರೆ ಅವರ ಸಂಸಾರದಲ್ಲಿ ಸಾಮರಸ್ಯ ಮಾಯವಾಗಿ ಧನಂಜಯ್ ಶರ್ಮಾ ಮತ್ತು ಅಖಿಲಾ ಪಜಿಮಣ್ಣು ಬೇರಾಗಲು ನಿರ್ಧರಿಸಿದ್ದಾರೆ.
ಅಖಿಲಾ ಮತ್ತು ಧನಂಜಯ್ ಶರ್ಮಾ ಪರಸ್ಪರ ಒಪ್ಪಿ ಜೂನ್ 12 ರಂದು ಪುತ್ತೂರು ಕೋರ್ಟ್ನಲ್ಲಿ ವಕೀಲ ಮಹೇಶ್ ಕಜೆ ಮೂಲಕ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಅಖಿಲಾ ಮತ್ತು ಧನಂಜಯ್ ಶರ್ಮಾ ನಡುವೆ ಮಧ್ಯಸ್ಥಿಕೆಗೆ ಕಳೆದ ಆರು ತಿಂಗಳಿಂದ ಕೋರ್ಟ್ ಅವಕಾಶ ನೀಡಿತ್ತು. ಬುಧವಾರ ದಂಪತಿ ನ್ಯಾಯಾಲಯಕ್ಕೆ ಹಾಜರಾಗಿ ಹೇಳಿಕೆ ನೀಡಿದ್ದಾರೆ. ಮ್ಯೂಚುಯಲ್ ಡಿವೋರ್ಸ್ ಪಡೆಯಲು ಇಬ್ಬರೂ ಒಪ್ಪಿಗೆ ಸೂಚಿಸಿದ್ದಾರೆ.
ನ್ಯಾಯಾಲಯದಲ್ಲಿ ದಂಪತಿಯ ವಿಚ್ಛೇದನ ಅರ್ಜಿಯ ವಿಚಾರಣೆ ಮುಗಿದಿದೆ. ನ್ಯಾಯಾಲಯ ಶುಕ್ರವಾರಕ್ಕೆ (ಜೂನ್ 19) ತೀರ್ಪು ಕಾಯ್ದಿರಿಸಿದೆ. ಅಖಿಲಾ ಪಜಿಮಣ್ಣು ಹಾಗೂ ಧನಂಜಯ್ ಶರ್ಮಾ ಇಬ್ಬರದ್ದೂ ಅರೇಂಜ್ಡ್ ಮ್ಯಾರೇಜ್. ಎರಡು ಕುಟುಂಬಗಳ ಸಮ್ಮುಖದಲ್ಲಿ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿತ್ತು.
ಅಖಿಲಾ ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲೂಕಿನವರು. ಕಿರುತೆರೆ ಹಾಗೂ ಸೋಶಿಯಲ್ ಮೀಡಿಯಾ ಮೂಲಕ ಖ್ಯಾತಿ ಗಳಿಸಿದ್ದಾರೆ. ಗಾಯನದ ಮೂಲಕ ಅವರು ಜನಮನ ಗೆದ್ದಿದ್ದಾರೆ. ಅಖಿಲಾ ಪಜಿಮಣ್ಣು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿರುವುದು ಅಚ್ಚರಿ ಮೂಡಿಸಿದೆ.
—





Be the first to comment