ಎಡಗೈಯೇ ಅಪಘಾತಕ್ಕೆ ಕಾರಣ

Movie Review: ಅಪಘಾತಕ್ಕೆ ಕಾರಣವಾಗುವ ‘ಎಡಗೈ’

ಚಿತ್ರ: ಎಡಗೈಯೇ ಅಪಘಾತಕ್ಕೆ ಕಾರಣ
ನಿರ್ದೇಶಕ: ಸಮರ್ಥ ಕಡಕೋಳ
ನಿರ್ಮಾಣ: ಗುರುದತ್ ಗಾಣಿಗ, ರವಿಚಂದ್ರ, ರಾಜೇಶ್ ಕೀಳಂಬಿ
ತಾರಾಗಣ: ದಿಗಂತ್, ಅನೂಪ್ ಭಂಡಾರಿ, ಧನು ಹರ್ಷ, ನಿಧಿ ಸುಬ್ಬಯ್ಯ, ಇತರರು
ರೇಟಿಂಗ್: 3.5

ಎಡಚರಿಗೆ ಜೀವನದಲ್ಲಿ ಎದುರಾಗುವ ಸಮಸ್ಯೆಗಳ ಬಗ್ಗೆ ಗಮನ ಸೆಳೆಯುವ ಸಿನಿಮಾ ಈ ವಾರ ಬಿಡುಗಡೆ ಆಗಿರುವ ‘ ಎಡಗೈಯೇ ಅಪಘಾತಕ್ಕೆ ಕಾರಣ ‘.

ಎಡಗೈ ಬಳಸುವ ನಾಯಕ ಲೋಹಿತ್ ಸಾಮಾನ್ಯ ಜನರಿಗಿಂತ ಹೆಚ್ಚಿನ ಸಮಸ್ಯೆಯನ್ನು ಎದುರಿಸುತ್ತಾನೆ. ತನ್ನ ಗೆಳತಿಯನ್ನು ಭೇಟಿ ಮಾಡಲು ಫ್ಲ್ಯಾಟಿಗೆ ಬಂದಾಗ ಅಲ್ಲಿ ಅವಳ ಸಾವು ಆಗುತ್ತದೆ. ಅನಂತರ ಸರಣಿ ಸಾವುಗಳು ನಡೆಯುತ್ತವೆ. ಇದಕ್ಕೆ ಕಾರಣ ಏನು ಎನ್ನುವುದಕ್ಕೆ ತಿಳಿಯಲು ಚಿತ್ರವನ್ನು ನೋಡಬೇಕಾಗಿದೆ.

ಇದೊಂದು ಡಾರ್ಕ್ ಕಾಮಿಡಿ ಚಿತ್ರ. ನಿರ್ದೇಶಕರು ಸಂಭಾಷಣೆ ಹಾಗೂ ಚಿತ್ರಕಥೆಯ ಮೂಲಕ ಮನರಂಜನಾತ್ಮಕವಾಗಿ ಪ್ರೇಕ್ಷಕರಿಗೆ ಸಿನಿಮಾವನ್ನು ತಲುಪಿಸುವ ಯತ್ನವನ್ನು ಮಾಡಿದ್ದಾರೆ.

ನಾಯಕ ನಟನಾಗಿ ನಟಿಸಿರುವ ದಿಗಂತ್ ಇಡೀ ಚಿತ್ರವನ್ನು ತಮ್ಮ ಹೆಗಲ ಮೇಲೆ ಹೊತ್ತುಕೊಂಡು ಹೋಗಿದ್ದಾರೆ. ಸಮಸ್ಯೆಯಲ್ಲಿ ಸಿಕ್ಕಿ ಒದ್ದಾಡುವ ಅವರ ಅಭಿನಯ ಪ್ರೇಕ್ಷಕರಿಗೆ ಮನರಂಜನೆ ನೀಡುತ್ತದೆ. ನಿಧಿ ಸುಬ್ಬಯ್ಯ ಪಾತ್ರ ಸಿನಿಮಾದಲ್ಲಿ ಪ್ರಮುಖ ತಿರುವಿಗೆ ಕಾರಣವಾಗುತ್ತದೆ. ನಾಯಕಿಯಾಗಿ ನಟಿಸಿರುವ ಧನು ಹರ್ಷ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸುವ ಯತ್ನ ಮಾಡಿದ್ದಾರೆ.

ಕೆಲವೊಮ್ಮೆ ಚಿತ್ರ ಲಾಜಿಕ್ ಇಲ್ಲದೆ ಇರುವ ಕಾರಣ ಪ್ರೇಕ್ಷಕರನ್ನು ಗೊಂದಲಕ್ಕೆ ದೂಡಬಹುದು. ಆದರೂ ಸಸ್ಪೆನ್ಸ್, ಥ್ರಿಲ್ಲರ್, ಮರ್ಡರ್ ಮಿಸ್ಟರಿ ಸಿನಿಮಾ ಇಷ್ಟಪಡುವವರಿಗೆ ಈ ಚಿತ್ರ ಖುಷಿ ನೀಡುತ್ತದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!