ಚಿತ್ರ: ಕಾಲೇಜ್ ಕಲಾವಿದ
ನಿರ್ದೇಶನ: ಸಂಜಯ್ ಮಳವಳ್ಳಿ
ನಿರ್ಮಾಪಕ: ತರುಣ್ ಶರ್ಮ
ತಾರಾಗಣ: ಆರವ್ ಸೂರ್ಯ, ಚೈತ್ರ, ರಮೇಶ್ ಭಟ್, ಹುಲಿ ಕಾರ್ತಿಕ್, ಇತರರು
ರೇಟಿಂಗ್: 3.5
ಕಾಲೇಜಿನಲ್ಲಿ ಓದುವ ಕಲಾವಿದನೊಬ್ಬನ ಲವ್ ಸ್ಟೋರಿ ಈ ವಾರ ತೆರೆಗೆ ಬಂದಿರುವ ಕಾಲೇಜ್ ಕಲಾವಿದ ಸಿನಿಮಾ.
ಚಿತ್ರದ ನಾಯಕ ಆರ್ಯ ಕಲಾವಿದ. ಅದ್ಭುತವಾಗಿ ಚಿತ್ರ ಬಿಡಿಸುವ ಅವನನ್ನು ಸಾರಿಕಾ ಇಷ್ಟಪಡುತ್ತಾಳೆ. ಇವರ ಗೆಳೆತನ ಪ್ರೇಮಕ್ಕೆ ತಿರುಗುತ್ತದೆ. ಇವರಿಬ್ಬರು ಒಂದಾಗುತ್ತಾರೆ ಎನ್ನುವಾಗ ಬೇರ್ಪಡುವ ಸನ್ನಿವೇಶ ಬರುತ್ತದೆ. ಯಾಕೆ ಹೀಗಾಗುತ್ತದೆ ಎನ್ನುವುದಕ್ಕೆ ಚಿತ್ರವನ್ನು ನೋಡಬೇಕು.
ಇಂದಿನ ಕಾಲಘಟ್ಟಕ್ಕೆ ಹೊಂದುವಂತೆ ಪ್ರೇಮ ಕಥೆಯನ್ನು ನಿರ್ದೇಶಕರು ಹೆಣೆದಿದ್ದಾರೆ. ಚಿತ್ರದಲ್ಲಿ ಡ್ಯಾನ್ಸ್ ಫೈಟ್ ಇದ್ದು ನೋಡುಗರಿಗೆ ಖುಷಿ ನೀಡುತ್ತದೆ.
ನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಆರವ್ ಫುಲ್ ಮಾರ್ಕ್ಸ್ ಪಡೆಯುತ್ತಾರೆ. ನಾಯಕಿ ಚೈತ್ರ ಮುಗ್ಧ ಹುಡುಗಿಯಾಗಿ ಗಮನ ಸೆಳೆಯುತ್ತಾರೆ. ನಾಯಕಿಯ ತಂದೆಯ ಪಾತ್ರದಲ್ಲಿ ನಟಿಸಿರುವ ರಮೇಶ್ ಭಟ್ ತಮ್ಮ ಅದ್ಭುತ ಅಭಿನಯದ ಮೂಲಕ ಗಮನ ಸೆಳೆಯುತ್ತಾರೆ. ನಾಯಕಿಯ ತಾಯಿಯ ಪಾತ್ರಕ್ಕೆ ಹರಿಣಿ ಜೀವ ತುಂಬಿದ್ದಾರೆ. ಹುಲಿ ಕಾರ್ತಿಕ್ ತಮ್ಮ ಹಾಸ್ಯದ ಮೂಲಕ ಕಚಗುಳಿ ಇಡುತ್ತಾರೆ.
ಸೂರಜ್ ಜೋಯಿಸ್ ಸಂಗೀತ ಚೆನ್ನಾಗಿದೆ. ಛಾಯಾಗ್ರಹಣ ಗಮನ ಸೆಳೆಯುತ್ತದೆ. ಕಾಲೇಜು ಹುಡುಗರು ಅಲ್ಲದೆ ಮನೆಮಂದಿ ಈ ಚಿತ್ರವನ್ನು ನೋಡಬಹುದು.

Be the first to comment