‘ಜಾವಾ’ ಚಿತ್ರದಲ್ಲಿ ಹಿಂದೆಂದೂ ಕಾಣದ ಡೇರಿಂಗ್ ಹಾಗೂ ಬೋಲ್ಡ್ ಅವತಾರದಲ್ಲಿ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಕಾಣಿಸಿಕೊಳ್ಳುತ್ತಿದ್ದಾರೆ.
ರಾಗಿಣಿ ದ್ವಿವೇದಿ ‘ಜಾವಾ’ ದಲ್ಲಿ ರಾಜ್ ವರ್ಧನ್ ಜೊತೆಗೆ ನಾಯಕಿಯಾಗಿ ನಟಿಸುತ್ತಿದ್ದಾರೆ. ಇದು ಬಾರ್ನ್ ಸ್ವಾಲೋ ಕಂಪನಿ ಬ್ಯಾನರ್ ಅಡಿಯಲ್ಲಿ ರಾಜ್ ವರ್ಧನ್ ಅವರ ಚೊಚ್ಚಲ ನಿರ್ಮಾಣದ ಚಿತ್ರವಾಗಿದೆ.
ಜಾವಾದಲ್ಲಿ ರಾಗಿಣಿ ದ್ವಿವೇದಿ ಈ ಹಿಂದೆ ನೋಡಿಲ್ಲದ ಬೋಲ್ಡ್ ಅವತಾರದಲ್ಲಿ ಆಕೆ ಕಾಣಿಸಿಕೊಂಡಿದ್ದಾರೆ. ಪ್ರತಿ ಫ್ರೇಮ್‌ನಲ್ಲಿಯೂ ಕಮಾಂಡಿಂಗ್ ಮಾಡುವ ದಿಟ್ಟ ಮಹಿಳಾ ನಾಯಕಿಯಾಗಿದ್ದಾರೆ. ರಾಗಿಣಿ ಕೇವಲ ಈ ಚಿತ್ರದಲ್ಲಿ ನಟಿಸುತ್ತಿಲ್ಲ. ಅವರು R Queen ಆಗಿ ಹೊರಹೊಮ್ಮಲಿದ್ದಾರೆ. ರಾಗಿಣಿ ಜನ್ಮದಿನದಂದೂ ಬಿಡುಗಡೆಯಾದ ಫಸ್ಟ್ ಲುಕ್ ಫೋಸ್ಟರ್ ನಲ್ಲಿ ಅವರಲ್ಲಿ ಇರುವ ಶಕ್ತಿ ಏನೆಂಬುದು ತೋರಿಸಿದೆ ಎಂದು ನಿರ್ದೇಶಕ ದೇವಾ ತಿಳಿಸಿದ್ದಾರೆ.
ದೇವಾ ಚಕ್ರವರ್ತಿ ನಿರ್ದೇಶನದ ಜಾವಾ ಕನ್ನಡ, ತೆಲುಗು ಮತ್ತು ತಮಿಳಿನಲ್ಲಿ ನಿರ್ಮಾಣವಾಗುತ್ತಿದೆ. ‘ಜಾವಾ’ ಪ್ರಿ-ಪ್ರೊಡಕ್ಷನ್ ಹಂತದಲ್ಲಿದ್ದು, ಜುಲೈ ಅಂತ್ಯದ ವೇಳೆಗೆ ಶೂಟಿಂಗ್ ಆರಂಭವಾಗಲಿದೆ. ‘ಜಾವಾ’ ಚಿತ್ರ ಉತ್ತಮ ಕಥಾಹಂದರದೊಂದಿಗೆ ಮಾಸ್ ಪ್ರಿಯರನ್ನು ಸೆಳೆಯುವ ನಿರೀಕ್ಷೆಯಿದೆ.

Be the first to comment