ದಿಯಾ ಚಿತ್ರದ ನಟ ಪೃಥ್ವಿ ಅಂಬಾರ್ ಅವರು ತುಳು ಸಿನಿಮಾ ನಿರ್ದೇಶನಕ್ಕೆ ಮುಂದಾಗಿದ್ದಾರೆ.
ತುಳು ಸಿನಿಮಾ ಮೂಲಕವೇ ನಾನು ನಟನೆಯನ್ನು ಆರಂಭಿಸಿದೆ. ಅಲ್ಲಿಯೇ ನನ್ನ ನಿರ್ದೇಶನದ ಪಯಣವನ್ನು ಆರಂಭಿಸಬೇಕು ಎನಿಸಿತು. ಚಿತ್ರ ಕನ್ನಡಕ್ಕೂ ಡಬ್ ಆಗಿ ಬಿಡುಗಡೆಯಾಗಲಿದೆ. ನಿರ್ದೇಶನದೊಂದಿಗೆ ನಾನು ಚಿತ್ರದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದೇನೆ. ಇಡೀ ಚಿತ್ರವನ್ನು ಮಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಿತ್ರೀಕರಿಸಲಾಗುವುದು. ಆ ಪ್ರದೇಶದ ಸಾರವನ್ನು ಸೆರೆಹಿಡಿಯಲಾಗುತ್ತದೆ ಎಂದು ಪೃಥ್ವಿ ಅಂಬಾರ್ ಹೇಳಿದ್ದಾರೆ.
ನಟಿಸುವ ಅವಕಾಶ ಆಕಸ್ಮಿಕವಾಗಿ ಸಿಕ್ಕಿತು. ಆದರೆ ನಿರ್ದೇಶನ ಮಾಡಬೇಕೆನ್ನುವುದು ಮಾತ್ರ ನನ್ನ ಮನಸ್ಸಿನಲ್ಲಿತ್ತು. ನನ್ನ ಚೊಚ್ಚಲ ನಿರ್ದೇಶನದ ಚಿತ್ರದ ಬಗೆಗಿನ ಹೆಚ್ಚಿನ ಮಾಹಿತಿಗಳನ್ನು ಶೀಘ್ರದಲ್ಲೇ ಬಹಿರಂಗಪಡಿಸುತ್ತೇನೆ. ಚಿತ್ರ ಫೆಬ್ರುವರಿಯಲ್ಲಿ ಸೆಟ್ಟೇರಲಿದೆ ಎಂದು ಅವರು ಹೇಳಿದ್ದಾರೆ. ಚಿತ್ರವು ಪ್ರಿ-ಪ್ರೊಡಕ್ಷನ್ ಹಂತದಲ್ಲಿದ್ದು, ಪೃಥ್ವಿ ಅಂಬಾರ್ ಸಿನಿಮಾತಂಡ ಕಟ್ಟುತ್ತಿದ್ದಾರೆ.
ಲೈಫ್ಈಸ್ ಬ್ಯೂಟಿಫುಲ್ ಮತ್ತು ಭುವನಂ ಗಗನಂ ಸಿನಿಮಾಗಳ ಬಿಡುಗಡೆಗೆ ಎದುರು ನೋಡುತ್ತಿರುವ ಪೃಥ್ವಿ ಅಂಬಾರ್ ಚೌಕಿದಾರ್ ಮತ್ತು ನಾಗತಿಹಳ್ಳಿ ಚಂದ್ರಶೇಖರ್ ಅವರ ಮುಂಬರುವ ಯೋಜನೆಯ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದಾರೆ.
Be the first to comment