ಈ ಹಿಂದೆ ಮುಕ್ತಿ ಚಿತ್ರ ಆ್ಯಕ್ಷನ್ ಕಟ್ ಹೇಳಿದ್ದ ಕೆ.ಶಂಕರ್ ಚಿತ್ರ ಕಥೆ ರಚಿಸಿ ನಿರ್ದೇಶನ ಮಾಡಿರುವ 2ನೇ ಚಿತ್ರ ತ್ರಿಪುರ ಈಗಾಗಲೇ ಬೆಂಗಳೂರು, ಮಂಗಳೂರು, ಮೈಸೂರು, ನಂದಿಬೆಟ್ಟ ಮುಂತಾದ ಕಡೆಗಳಲ್ಲಿ ಚಿತ್ರಿಕರಣ ನಡೆಸಲಾಗಿರುವ ಈ ಚಿತ್ರ ಶೂಟಿಂಗ್ ಹಾಗೂ ಪೋಸ್ಟ್ ಪ್ರೋಡಕ್ಷನ್ ಕೆಲಸಗಳೆಲ್ಲ ಮುಗಿದಿದ್ದು ಪ್ರಥಮ ಪ್ರತಿಕೂಡ ಸಿದ್ದವಾಗಿದ್ದು ಇದೀಗ ಸೆನ್ಸಾರ್ ಹಂತದಲ್ಲಿದೆ. ಸಸ್ಪೆನ್ಸ್, ಥ್ರಿಲರ್ ಹಾಗೂ ಕಾಮಿಡಿ ಜೊತೆಗೆ ಪ್ರೇಮ ಕಥನಾಕವನ್ನು ಒಳಗೊಂಡಿರುವ ಈ ಚಿತ್ರದಲ್ಲಿ 2 ಹಾಡುಗಳಿದ್ದು, ಒಂದು ಹೆಣ್ಣಿನ ಹಿಂದೆ ಬಿದ್ದವರ ಕಥೆ ಏನಾಗುತ್ತದೆ ಎಂದು ಹೇಳಲಾಗಿದೆ. ತ್ರಿಪುರ ಎಂಬ ಸುಂದರಿ ಹೆಣ್ಣಿನ ಸುತ್ತು ನಡೆಯುವ ಈ ಕಥೆಯಲ್ಲಿ ಐದು ನಿಮಿಷಗಳ ಹಿಸ್ಟಾರೀಕಲ್ ಕಥೆ ಕೂಡ ಇದೆ. ಈಗಿನ ಯುವಕರು, ವಿದ್ಯಾರ್ಥಿಗಳು ಹಾಗೂ ಎಲ್ಲಾ ವಯೋಮಾನದವರಿಗೂ ಇಷ್ಟವಾಗುವಂತ ಚಿತ್ರವಾಗಿದೆ.
ಶ್ರೀ ಅಂಕುರ ಕ್ರಿಯೇಷನ್ಸ್ ಲಾಂಛನದಲ್ಲಿ ಎಲ್.ಮಂಜುನಾಥ್ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಗೌರಿವೆಂಕಟೇಶ್ ಛಾಯಗ್ರಹಣ, ಡಿ.ಆರ್.ಹೇಮಂತ್ ಕುಮಾರ್ ಸಂಗೀತ, ಕೆ.ಶಂಕರ್ ಸಂಭಾಷಣೆ ಮತ್ತು ಸಾಹಿತ್ಯ, ಹರಿಕೃಷ್ಣ ನೃತ್ಯ ನಿರ್ದೇಶನ, ರಾಜಶೇಖರೆಡ್ಡಿ ಸಂಕಲನವಿದೆ. ಅಶ್ವಿನಿಗೌಡ, ಶ್ರೀಧರ್, ಧರ್ಮ, ಟೆನ್ನಿಸ್ ಕೃಷ್ಣ, ಲಕ್ಷ್ಮಣ್ ರಾವ್, ಕಿಲ್ಲರ್ ವೆಂಕಟೇಶ್, ರಮಾನಂದ್, ಸುಂದರಶ್ರೀ, ಡಿಂಗ್ರಿ ನಾಗರಾಜ್, ಬೇಬಿಆದ್ಯ, ಪವಿತ್ರ, ಮಂಜುನಾಥ್ ಇನ್ನು ಮುಂತಾದವರು ತಾರಬಳಗವಿದೆ.





Be the first to comment