ಗೋಪಿಲೋಲ

Gopilola Movie Review: ಗೋಪಿಲೋಲನ ಪ್ರೇಮ ಪ್ರಸಂಗ

ಚಿತ್ರ: ಗೋಪಿಲೋಲ
ನಿರ್ದೇಶನ: ಆರ್ ರವೀಂದ್ರ
ತಾರಾ ಬಳಗ: ಮಂಜುನಾಥ್ ಅರಸ್, ನಿಮಿಷ, ಎಸ್ ನಾರಾಯಣ್, ಸಪ್ತಗಿರಿ, ಆರಾಧ್ಯ ಶಿವಕುಮಾರ್, ಇತರರು
ರೇಟಿಂಗ್: 3.5

ನೈಸರ್ಗಿಕ ಕೃಷಿಯ ಜೊತೆಗೆ ಪ್ರೇಮ ಕಥೆಯನ್ನು ಹೊಂದಿದ ಚಿತ್ರ ಈ ವಾರ ತೆರೆಗೆ ಬಂದಿರುವ ಗೋಪಿಲೋಲ.

ಬೇಜವಾಬ್ದಾರಿ ನಾಯಕನನ್ನು ಪ್ರೀತಿಸುವ ನಾಯಕಿ ಅವನಿಂದ ಮೋಸಕ್ಕೆ ಒಳಗಾಗುತ್ತಾಳೆ. ಮುಂದೆ ಅವನೇ ಬೇಕೆಂದು ಹಠ ಹಿಡಿದು ಕೂರುತ್ತಾಳೆ. ಮುಂದೆ ಇಬ್ಬರ ನಡುವಿನ ಸಂಘರ್ಷ ಕೋರ್ಟ್ ಮೆಟ್ಟಿಲು ಏರಿದಾಗ ಕಥೆಗೆ ಹೊಸ ತಿರುವು ಬರುತ್ತದೆ. ಆಗ ಏನಾಗುತ್ತದೆ ಎನ್ನುವುದಕ್ಕೆ ಚಿತ್ರ ನೋಡುವುದು ಒಳ್ಳೆಯದು.

ಚಿತ್ರದಲ್ಲಿ ಅನಿರೀಕ್ಷಿತ ತಿರುವುಗಳಿವೆ. ಹಳ್ಳಿಯ ಹಿನ್ನೆಲೆಯಲ್ಲಿ ಸಾಗುವ ಕಥೆ ಸಂದೇಶವನ್ನು ನೀಡುವ ಯತ್ನ ಮಾಡಿದೆ. ಚಿತ್ರದಲ್ಲಿ.ಕಿರಿಯ ಕಲಾವಿದರ ಜೊತೆಗೆ ಹಿರಿಯ ಕಲಾವಿದರ ಸಂಗಮ ಆಗಿದೆ.

ನಾಯಕ ಪಾತ್ರದಲ್ಲಿ ನಟಿಸಿರುವ ಮಂಜುನಾಥ್ ಅರಸ್, ನಾಯಕಿ ನಟಿಸಿರುವ ನಿಮಿಷ ಕಥೆಗೆ ಪೂರಕವಾಗಿ ನಟಿಸಿದ್ದಾರೆ. ಎಸ್ ನಾರಾಯಣ್ ಅವರ ನಟನೆ ಗಮನ ಸೆಳೆಯುತ್ತದೆ.

ನಿರ್ದೇಶಕರು ಕಮರ್ಷಿಯಲ್ ಚಿತ್ರದಲ್ಲಿ ಸಂದೇಶ ನೀಡುವ ಪ್ರಯತ್ನ ಮಾಡುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!