ಹಾಸ್ಯನಟ ಮಲ್ಲೇಶ್ ಇನ್ನಿಲ್ಲ.

 

‘ವಠಾರ’ ಧಾರಾವಾಹಿ ಮೂಲಕ ಕನ್ನಡ ಕಿರುತೆರೆಗೆ ಕಾಲಿಟ್ಟ ನಟ ವಠಾರ ಮಲ್ಲೇಶ್ ಇಂದು ಬೆಳ್ಳಿಗ್ಗೆ ವಿಧಿವಶವಾಗಿದ್ದಾರೆ. ಧಾರಾವಾಹಿಗಳಲ್ಲಿ ಹಾಸ್ಯ ನಟನಾಗಿ ಪ್ರಖ್ಯಾತಿ ಪಡೆದಿದ್ದ ನಟ ಮಲ್ಲೇಶ್ ಅನಂತರ ಸಾಕಷ್ಟು ಚಿತ್ರಗಳಲ್ಲಿಯೂ ಹಾಸ್ಯ ನಟನಾಗಿ ಅಭಿನಯ ಮಾಡಿದ್ದರು. ಚಿಕ್ಕ ವಯಸ್ಸಿನಿಂದಲೇ ಮರುವಿನ ಕಾಯಿಲೆಯನ್ನು ಹೊಂದಿದ್ದ ಮಲ್ಲೇಶ್ ಅವರನ್ನು ತನ್ನತ್ತ ಕರೆದುಕೊಳ್ಳುವುದನ್ನು ಮಾತ್ರ ವಿಧಿ ಮರೆಯಲಿಲ್ಲ. ಕನ್ನಡ ಅಭಿಮಾನಿಗಳಿಗೆ ಹಾಗೂ ಚಿತ್ರರಂಗಕ್ಕೆ ಪರಿಚಯವಿದ್ದ ಮಲ್ಲೇಶ್ ನಡೆದು ಬಂದ ಹಾದಿ ತುಂಬ ಕಠಿಣವಾದದ್ದು.42 ವರ್ಷ ವಯಸ್ಸಾಗಿದ್ದ ಮಲ್ಲೇಶ್ ಸುಮಾರು ವರ್ಷಗಳಿಂದ ಖಾಯಿಲೆಯಿಂದ ಬಳಲುತ್ತಿದ್ದ ಮಲ್ಲೇಶ್ ಕಳೆದ ಇಪ್ಪತ್ತು ದಿನಗಳ ಹಿಂದೆ ಕಿಡ್ನಿ ವೈಫಲ್ಯ ಕಾರಣದಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು.

ಅಭಿನಯದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದ ಮಲ್ಲೇಶ್ 250ಕ್ಕೂ ಹೆಚ್ಚು ನಾಟಕದಲ್ಲಿ ಅಭಿನಯ ಮಾಡಿದ್ದಾರೆ. ‘ದಾನಶೂರ ವೀರ ಕರ್ಣ’ ನಾಟಕದಲ್ಲಿ ಏಳು ಪಾತ್ರಗಳಲ್ಲಿ ಮಲ್ಲೇಶ್ ಅವರೊಬ್ಬರೇ ಅಭಿನಯಿಸಿದ್ದರು. ಹೆಚ್ಚು ಹಾಸ್ಯ ಪಾತ್ರಗಳಲ್ಲಿ ಕಾಣಿಸಿಕೊಂಡ ಮಲ್ಲೇಶ್ ಪಾರ್ವತಿ ಪರಮೇಶ್ವರ’, ‘ಪ್ರಿಯದರ್ಶಿನಿ’, ‘ಪಾಂಡುರಂಗ ವಿಠಲ’, ‘ಅಮೃತವರ್ಷಿಣಿ’ ಸೇರಿದಂತೆ ಮಲ್ಲೇಶ್‌ ಸುಮಾರು 60ಕ್ಕೂ ಅಧಿಕ ಧಾರಾವಾಹಿಗಳಿಗೆ ಬಣ್ಣಹಚ್ಚಿದ್ದಾರೆ.
157 ಚಿತ್ರಗಳಲ್ಲಿ ಅಭಿನಯ ನಟ ಮೋಹನ್‌ ಜುನೇಜಾ ಅವರಿಂದ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟ ಮಲ್ಲೇಶ್ ‘ಸುಂಟರಗಾಳಿ’, ‘ದತ್ತ’, ‘ಅಭಯ್’, ‘ಅಜಯ್’, ‘ಚಾರ್‌ಮಿನಾರ್’, ‘ಚಡ್ಡಿದೋಸ್ತ್’ ಮುಂತಾದ ಸುಮಾರು 157ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಹಾಸ್ಯ ಕಲಾವಿದನಾಗಿ ಅಭಿನಯ ಮಾಡಿದ್ದಾರೆ.

This Article Has 1 Comment
  1. Pingback: plumbing company Speed NC

Leave a Reply

Your email address will not be published. Required fields are marked *

Translate »
error: Content is protected !!