ಸೆ.28ರಂದು ‘ಬಿಗ್ ಬಾಸ್’ ಮನೆಗೆ ಹೋಗುತ್ತಿರುವ 5 ಸ್ಫರ್ಧಿಗಳನ್ನು ಅಧಿಕೃತವಾಗಿ ‘ರಾಜ ರಾಣಿ’ ಗ್ರಾಂಡ್ ಫಿನಾಲೆಯಲ್ಲಿ ಘೋಷಿಸಲಾಗುತ್ತದೆ.
ಬಿಗ್ ಬಾಸ್’ ಕಾರ್ಯಕ್ರಮದ 11ನೇ ಅವತರಣಿಕೆಯು ಇದೇ ಸೆಪ್ಟೆಂಬರ್ 29ರಂದು ಸಂಜೆ 6ಕ್ಕೆ ಪ್ರಾರಂಭವಾಗಲಿದೆ. ಈ ಬಾರಿ ಒಂದು ದಿನ ಮುಂಚೆಯೇ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವ 5 ಸ್ಪರ್ಧಿಗಳ ಹೆಸರುಗಳು ಹೊರ ಬೀಳಲಿವೆ.
ಈ ಕುರಿತು ಮಾತನಾಡುವ ಕಲರ್ಸ್ ಕನ್ನಡದ ಬ್ಯುಸಿನೆಸ್ ಹೆಡ್ ಪ್ರಶಾಂತ್ ನಾಯಕ್, ‘ಈ ಬಾರಿ ಕಾರ್ಯಕ್ರಮಕ್ಕೂ ಮೊದಲೇ ಕೆಲ ಸ್ಪರ್ಧಿಗಳ ಹೆಸರುಗಳನ್ನು ‘ರಾಜ ರಾಣಿ’ ಗ್ರಾಂಡ್ ಫಿನಾಲೆಯಲ್ಲಿ ಘೋಷಿಸಲಾಗುತ್ತದೆ. ಇದು ಈ ವರ್ಷ ಹೊಸತು’ ಎಂದರು.
ಸಾಮಾನ್ಯವಾಗಿ ‘ಬಿಗ್ ಬಾಸ್’ ಕಾರ್ಯಕ್ರಮದ ದಿನ ಸ್ಪರ್ಧಿಗಳ ಹೆಸರುಗಳನ್ನು ಘೋಷಿಸಲಾಗುತ್ತದೆ. ಪ್ರತಿಯೊಬ್ಬ ಸ್ಪರ್ಧಿಯನ್ನು ಸುದೀಪ್ ವೇದಿಕೆಗೆ ಕರೆದು ಆ ನಂತರ ಮನೆಗೆ ಕಳುಹಿಸುತ್ತಿದ್ದರು. ಇದೇ ಮೊದಲ ಬಾರಿಗೆ ಒಂದು ದಿನ ಮೊದಲೇ 5ಸ್ಪರ್ಧಿಗಳ ಹೆಸರುಗಳನ್ನು ಮೊದಲೇ ಘೋಷಿಸಲಾಗುತ್ತಿದೆ. ಮಿಕ್ಕ ಸ್ಪರ್ಧಿಗಳ ಹೆಸರುಗಳನ್ನು ಸೆ. 29ರಂದು ಕಾರ್ಯಕ್ರಮದಲ್ಲಿ ಪರಿಚಯಿಸಲಾಗುತ್ತದೆ.
‘ಬಿಗ್ ಬಾಸ್’ ಕಾರ್ಯಕ್ರಮದ 11ನೇ ಅವತರಣಿಕೆಯು ಈ ಬಾರಿ ಸ್ವರ್ಗ ಮತ್ತು ನರಕ ಎಂಬ ಪರಿಕಲ್ಪನೆಯೊಂದಿಗೆ ಪ್ರಸಾರವಾಗಲಿದೆ.
Be the first to comment