ಕೆಜಿಎಫ್ ಚಿತ್ರದ್ ಬಿಚಿಡುಗಡೆಯಾಗಿ ಗ್ರಾಂಡ್ ಓಪನಿಂಗ್ ಪಡೆದುಕೊಂಡಿದೆ, ಯಶ್ ಸೇರಿದಂತೆ ಅಭಿಮಾನಿಗಳ ಸಿಕ್ಕಾಪಟ್ಟೆ ಖುಷಿಯಲ್ಲಿದ್ದಾರೆ, ಚಿತ್ರ ಹೊಸ ಹೊಸ ದಾಖಲೆ ಬರೆಯುತ್ತಿದೆ ಆದರೆ ರಾಕಿಂಗ್ ಸ್ಟಾರ್ ಯಶ್ ಗೆ ಮಾತ್ರ ಮನದಲ್ಲಿ ಒಂದು ನೋವು, ಗಾಡ್ ಫಾದರ್ ಆಗಿದ್ದ ಅಂಬಿಯನ್ನು ಮಿಸ್ ಮಾಡಿಕೊಂಡು ಯಶ್ ಟ್ವೀಟ್ ಮಾಡಿದ್ದಾರೆ
ಇಂದು ಅಂಬರೀಶ್ ಅವರ ಮೊದಲ ತಿಂಗಳ ಪುಣ್ಯ ತಿಥಿಯನ್ನ ಕುಟುಂಬದವರು ನೆರವೇರಿಸಿದ್ದಾರೆ.. ಈ ಹಿಂದೆ ರೆಬಲ್ ಸ್ಟಾರ್ ಅಂಬರೀಶ್ ಅವರು ಕೆಜಿಎಫ್ ಸಿನಿಮಾ ಪ್ರೆಸ್ ಮೀಟ್ ಒಂದರಲ್ಲಿ ಪಾಲ್ಗೊಂಡು ಇಡೀ ಚಿತ್ರತಂಡಕ್ಕೆ ಶುಭಾಶಯ ಕೋರಿದ್ರು.. ಅಂಬಿ ಅವರು ಇಂದು ನಮ್ಮೊಂದಿಗೆ ಇದ್ದಿದ್ರೆ ಇಷ್ಟರಲ್ಲಾಗಲೇ ಕೆಜಿಎಫ್ ವೀಕ್ಷಿಸಿ ಬರುತ್ತಿದ್ರು.. ಹೀಗಾಗೆ ಯಶ್ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ‘ಮಿಸ್ ಯು ಅಣ್ಣ‘ ಎನ್ನುತ್ತ ಈ ಸಂದರ್ಭದಲ್ಲಿ ಅಂಬರೀಶ್ ಅವರನ್ನ ತುಂಬಾ ಮಿಸ್ ಮಾಡಿಕೊಳ್ಳುತ್ತಿರುವುದಾಗಿ ಹೇಳಿದ್ದಾರೆ.
ಇನ್ನು ‘ಕೆಜಿಎಫ್’ ಸಿನಿಮಾದ ಟೈಟಲ್ ಕಾರ್ಡ್ ಶುರು ಆಗುವುದು ನಟ ಅಂಬರೀಶ್ ಅವರ ಫೋಟೋದ ಮೂಲಕ. ಅವರಿಗೆ ಶ್ರದ್ಧಾಂಜಲಿ ಅರ್ಪಿಸುವ ಮೂಲಕ ಚಿತ್ರತಂಡ ಅವರನ್ನ ನೆನೆದಿದೆ. ಇನ್ನು ಈ ಸಿನಿಮಾದ ಟ್ರೇಲರ್ ಅನ್ನು ಅಂಬರೀಶ್ ಅವರೇ ಬಿಡುಗಡೆ ಮಾಡಿದ್ದರು. ಆದರೆ, ಸಿನಿಮಾ ಬಿಡುಗಡೆಗೆ ಮೊದಲೇ ಅವರು ಎಲ್ಲರನ್ನ ಅಗಲಿದರು.
ಒಂದು ಕಡೆ ‘ಕೆಜಿಎಫ್’ ಸಿನಿಮಾ ಬಿಡುಗಡೆಯಾದರೆ, ಇನ್ನೊಂದು ಕಡೆ ಅಂಬರೀಶ್ ಅವರ ಒಂದು ತಿಂಗಳ ಪುಣ್ಯ ತಿಥಿ ಕೂಡ ಇಂದೇ ಇದೆ. ಯಶ್ ಈ ದಿನ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಅಂಬರೀಶ್ ಅವರ ಫೋಟೋ ಹಾಕಿ ‘ಮಿಸ್ ಯು ಅಣ್ಣ’ ಎಂದು ಬರೆದುಕೊಂಡಿದ್ದಾರೆ.





Pingback: Buy Sex Toys Online