ಜುಲೈ 26ಕ್ಕೆ ‘ರಾಜಾಹುಲಿ’ ಸಿನಿಮಾ ರಿ ರಿಲೀಸ್

ಜುಲೈ 26 ಕ್ಕೆ ‘ರಾಕಿಂಗ್ ಸ್ಟಾರ್’ ಯಶ್ ಅಭಿನಯದ ‘ರಾಜಾಹುಲಿ’ ಸಿನಿಮಾ ರಿ ರಿಲೀಸ್ ಆಗುತ್ತಿದೆ.

ಸಿನಿಮಾದಲ್ಲಿ ಯಶ್, ಮೇಘನಾ ರಾಜ್, ಚಿಕ್ಕಣ್ಣ, ವಸಿಷ್ಟ ಸಿಂಹ  ನಟಿಸಿದ್ದರು. 2013 ರ ನವೆಂಬರ್ 1 ರಂದು ರಾಜಾಹುಲಿ ಸಿನಿಮಾ ರಿಲೀಸ್ ಆಗಿತ್ತು. ಮಂಡ್ಯದ ಹಳ್ಳಿ ಸೊಗಡಿನ ಭಾಷೆಯ ಸಿನಿಮಾ ಕಮಾಲ್ ಮಾಡಿತ್ತು.

ಕೆಜಿಎಫ್-2 ಸಿನಿಮಾದ ಬಳಿಕ ನಟ ಯಶ್ ಚಿತ್ರದ ಬಗ್ಗೆ ಅಭಿಮಾನಿಗಳಲ್ಲಿ ಕ್ಯುರಿಯಾಸಿಟಿ ಇದೆ. ಯಶ್ ಮುಂದಿನ ಸಿನಿಮಾ ಯಾವಾಗ ಬರುತ್ತದೆ ಎಂದು ಕಾದು ಕುಳಿತಿದಿದ್ದಾರೆ.  ಇಡೀ ಜಗತ್ತೇ ಯಶ್ ಸಿನಿಮಾ ಎದುರು ನೋಡುತ್ತಿದೆ.

‘ರಾಮಾಯಣ’  ಸಿನಿಮಾದ ರಾವಣನ ಪಾತ್ರದಲ್ಲಿ ಯಶ್ ನಟಿಸುತ್ತಿದ್ದಾರೆ. ಸಿನಿಮಾವನ್ನು ನಿತೇಶ್ ತಿವಾರಿ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾಕ್ಕೆ ಮಧು ಮಂಟೇನಾ ಮತ್ತು ಅಲ್ಲು ಅರವಿಂದ್ ಬಂಡವಾಳ ಹೂಡುತ್ತಿದ್ದಾರೆ. ಈ ಸಿನಿಮಾಕ್ಕೆ ಯಶ್ ಸಹ ಬಂಡವಾಳ ಹೂಡಿದ್ದಾರೆ ಎನ್ನಲಾಗುತ್ತಿದೆ. ರಣ್​ಬೀರ್ ಕಪೂರ್, ಸಾಯಿ ಪಲ್ಲವಿ, ಯಶ್ ಜೊತೆಗೆ ಇನ್ನೂ ಕೆಲವು ಜನಪ್ರಿಯ ನಟರು ಸಿನಿಮಾದಲ್ಲಿ ನಟಿಸಲಿದ್ದಾರೆ. ಸಿನಿಮಾದ ಚಿತ್ರೀಕರಣ ಈಗಾಗಲೇ ಚಾಲ್ತಿಯಲ್ಲಿದ್ದು, ಸಿನಿಮಾ 2025 ರಲ್ಲಿ ತೆರೆಗೆ ಬರಲಿದೆ.

‘ರಾಮಾಯಣ’ ಸಿನಿಮಾದ ಜೊತೆಗೆ ಯಶ್  ‘ಟಾಕ್ಸಿಕ್’ ಸಿನಿಮಾದ ಚಿತ್ರೀಕರಣದಲ್ಲಿಯೂ ಬ್ಯುಸಿಯಾಗಿದ್ದಾರೆ.  ಸಿನಿಮಾ 2025 ರಲ್ಲಿ ತೆರೆಗೆ ಬರಲಿದೆ.

—–

Be the first to comment

Leave a Reply

Your email address will not be published. Required fields are marked *

Translate »
error: Content is protected !!