ಇಂದು ಹೊಸಬರ ಸಿನಿಮಾಗಳು ತೆರೆಗೆ ಬಂದಿದ್ದು, ತಮ್ಮ ಅದೃಷ್ಟ ಪರೀಕ್ಷೆಗೆ ಇಳಿಯುತ್ತಿದ್ದಾರೆ.
‘ರಣಹದ್ದು’:
ಪ್ರಸನ್ನ ಕುಮಾರ್ ನಿರ್ದೇಶಿಸಿರುವ ಈ ಚಿತ್ರದಲ್ಲಿ ಶಶಾಂಕ್ ಹಾಗೂ ಸೂರಜ್ ನಟಿಸಿದ್ದಾರೆ. ಇಬ್ಬರೂ ಪ್ರಸನ್ನ ಕುಮಾರ್ ಅವರ ಪುತ್ರರು. ಒಬ್ಬ ಮಗ ನಾಯಕನಾಗಿ, ಮತ್ತೊಬ್ಬ ಮಗ ಖಳನಾಯಕನಾಗಿ ಈ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ್ದಾರೆ. ಹಣವಿಲ್ಲದ ಮನುಷ್ಯರನ್ನು ಸಮಾಜ ಹೇಗೆ ನೋಡುತ್ತದೆ ಎಂಬುವುದು ಚಿತ್ರದ ಕಥಾಹಂದರ.
‘ದ ಸೂಟ್’:
ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಸುಜಯ್ ಆರ್ಯ ಅಭಿನಯಿಸಿದ್ದಾರೆ. ಎಸ್.ಭಗತ್ ರಾಜ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಇದು ಇವರ ಮೊದಲ ನಿರ್ದೇಶನದ ಸಿನಿಮಾ ಆಗಿದೆ.
ಮೂಲತಃ ಉದ್ಯಮಿಯಾಗಿರುವ ಸುಜಯ್ ಆರ್ಯ ಈ ಹಿಂದೆ ರಾಮನಾಥ್ ಋಗ್ವೇದಿ ನಿರ್ದೇಶನದ ‘ಅಧಿಕಾರ’ ಚಿತ್ರದಲ್ಲಿ ನಟಿಸಿದ್ದರು. ಭ ಕಮಲ್, ಸುಜಯ್, ಮಂಜುನಾಥ್ ಪಾಟೀಲ್, ದೀಪ್ತಿ ಕಾಪ್ಸೆ, ಕುಸುಮ ರಾಮಯ್ಯ, ವಿ.ನಾಗೇಂದ್ರ ಪ್ರಸಾದ್, ಗಡ್ಡ ವಿಜಿ, ಉಮೇಶ್ ಬಣಕಾರ್ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.
‘ಸ್ವಿಚ್ ಕೇಸ್’:
‘ಅಗ್ನಿಸಾಕ್ಷಿ’ ಧಾರಾವಾಹಿಯ ನಟ ವಿಜಯ್ಸೂರ್ಯ ಸ್ಯಾಂಡಲ್ವುಡ್ನಲ್ಲಿ ಮತ್ತೊಮ್ಮೆ ಅಗ್ನಿಪರೀಕ್ಷೆಗಿಳಿದಿದ್ದಾರೆ. ಅವರು ನಾಯಕನಾಗಿ ನಟಿಸಿರುವ ‘ಸ್ವಿಚ್ ಕೇಸ್’ ಚಿತ್ರ ಮೇ.17ಕ್ಕೆ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಕೊಂಡಾಣ ಫಿಲ್ಮ್ಸ್ ನಿರ್ಮಾಣದ ‘ಸ್ವಿಚ್ ಕೇಸ್‘ ಚಿತ್ರವನ್ನು ಚೇತನ್ ಶೆಟ್ಟಿ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.
ರೀ-ರಿಲೀಸ್:
ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ‘A’ ಸಿನಿಮಾ ರೀ-ರಿಲೀಸ್ ಆಗುತ್ತಿದೆ. ಉಪೇಂದ್ರ ಅವರು ನಿರ್ದೇಶನದೊಂದಿಗೆ ನಾಯಕನಾಗಿ ನಟಿಸಿದ್ದ ಈ ಚಿತ್ರದ ನಾಯಕಿಯಾಗಿ ಚಾಂದಿನಿ ಅಭಿನಯಿಸಿದ್ದರು. ಸಿನಿಮಾ ವಿಭಿನ್ನ ಕಥಾ ಹಂದರ, ಮೇಕಿಂಗ್ ಶೈಲಿಯಿಂದ ನೋಡುಗರನ್ನು ಆಕರ್ಷಿಸಿತ್ತು.

ಸಾಹಸ ಸಿಂಹ ವಿಷ್ಣುವರ್ಧನ್ ಅಭಿನಯದ ‘ಕೃಷ್ಣ ನೀ ಬೇಗನೆ ಬಾರೋ’ ಚಿತ್ರ ಕೂಡ ರೀ-ರಿಲೀಸ್ ಆಗುತ್ತಿದೆ. ಡೈರೆಕ್ಟರ್ ಭಾರ್ಗವ್ ಈ ಚಿತ್ರವನ್ನ ಡೈರೆಕ್ಷನ್ ಮಾಡಿದ್ದಾರೆ. ಭವ್ಯ ಮತ್ತು ಕಿಮ್ ಯಶ್ಪಾಲ್ ಈ ಚಿತ್ರದಲ್ಲಿ ನಟಿಸಿದ್ದಾರೆ. ಚಿತ್ರವನ್ನುಮುನಿರಾಜು ರಿಲೀಸ್ ಮಾಡುತ್ತಿದ್ದಾರೆ.

—–





Be the first to comment