ಹಿಟ್ ಚಿತ್ರ ನೀಡಿದ ವೀರ ಸಮರ್ಥ

ಸಂಗೀತ ನಿರ್ದೇಶಕ ವೀರ ಸಮರ್ಥ ಅವರು 15 ವರ್ಷಗಳ ಬಳಿಕ “ಒಂದು ಸರಳ ಪ್ರೇಮ ಕತೆ” ಚಿತ್ರ ಹಿಟ್ ಆಗುವ ಮೂಲಕ ಮೊದಲ ಬಾರಿಗೆ ಯಶಸ್ಸು ಕಂಡಿದ್ದಾರೆ.

ಕಾರಂಜಿ ಚಿತ್ರದಿಂದ ಸಂಗೀತ ಸಂಯೋಜನೆ ಮಾಡಿದ ವೀರ ಸಮರ್ಥ ಅವರಿಗೆ ಕಳೆದ 15 ವರ್ಷಗಳಲ್ಲಿ ಯಾವುದೇ ಚಿತ್ರ ಯಶಸ್ಸು ನೀಡಲಿಲ್ಲ. 45 ಚಿತ್ರಗಳಿಗೆ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ಪ್ರತಿಭೆ ಇದ್ದರೂ ಚಿತ್ರ ಹಿಟ್ ಆಗದ ಕಾರಣ ಅವರು ಕರೆ ಮರೆಯಲ್ಲಿ ಉಳಿಯಬೇಕಾದ ಪ್ರಸಂಗ ಬಂದಿತ್ತು. ಆದರೆ ಒಂದು ಸರಳ ಪ್ರೇಮಕಥೆ 25 ದಿನಗಳ ಯಶಸ್ವಿ ಪ್ರದರ್ಶನ ಕಂಡು ವೀರ ಸಮರ್ಥ ಅವರಿಗೆ ಯಶಸ್ಸು ನೋಡುವಂತೆ ಮಾಡಿದೆ.

ಈ ಬಗ್ಗೆ ಮಾತನಾಡಿರುವ ವೀರ ಸಮರ್ಥ ಅವರು, 15 ವರ್ಷಗಳಲ್ಲಿ ಮೊದಲ ಬಾರಿಗೆ ಯಶಸ್ಸನ್ನು ಕಂಡಿದ್ದೇನೆ. ಒಂದು ಸರಳ ಪ್ರೇಮ ಕಥೆಯ ಚಿತ್ರವನ್ನು ಜನರು ಮೆಚ್ಚಿದ್ದಾರೆ. ಈ ಚಿತ್ರಕ್ಕೆ ರಾಜ್ಯ ಪ್ರಶಸ್ತಿ ಸಿಗಬೇಕು ಎಂದು ಜನರು ಹೇಳುತ್ತಿದ್ದಾರೆ ಎಂದಿದ್ದಾರೆ.

ಈ ಚಿತ್ರದಲ್ಲಿ ಮಾಡಿರುವ ಪ್ರಯೋಗ ಹಾಗೂ ವೈವಿಧ್ಯತೆ ಯಾವುದೇ ಚಿತ್ರಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ಆಗಿಲ್ಲ. ಮೆಲೋಡಿ, ಸೂಫಿ, ದಾಸರ ಪದ, ತತ್ವ ಪದ, ಗಜಲ್ ಹೀಗೆ ಹಲವು ವೆರೈಟಿಗಳು ಈ ಚಿತ್ರದಲ್ಲಿದೆ. ನಿರ್ದೇಶಕ ಸುನಿ ಅವರಿಗೆ ಧನ್ಯವಾದ ಹೇಳಬೇಕು ಎಂದು ಅವರು ಹೇಳಿದ್ದಾರೆ.

ಸಿಂಪಲ್ ಸುನಿ ಅವರು ಸಂಗೀತ ಸಂಯೋಜನೆ ಮಾಡಿಕೊಡಬೇಕು ಎಂದು ಹೇಳಿದಾಗ ನನಗೆ ಆತಂಕ ಆಯಿತು. ಅವರು ಯಶಸ್ವಿ ನಿರ್ದೇಶಕರು. ನಾನು ಚಿತ್ರಕ್ಕೆ ನ್ಯಾಯ ಸಲ್ಲಿಸಬಹುದೇ ಎನ್ನುವ ಆತಂಕ ಇತ್ತು. ಅವರು ಮ್ಯೂಸಿಕಲ್ ಸಿನಿಮಾ ಮಾಡಬೇಕು ಎಂದು ಹೇಳಿದಾಗ ನನಗೆ ಆಶ್ಚರ್ಯವಾಯಿತು. ನನಗೆ ಪರಿಪೂರ್ಣ ಕ್ಲಾಸಿಕಲ್ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಬೇಕೆಂದು ಬಹಳ ವರ್ಷಗಳಿಂದ ಆಸೆ ಇತ್ತು. ಒಂದು ಸರಳ ಪ್ರೇಮ ಕಥೆಯಲ್ಲಿ ಸಾಕಷ್ಟು ಪ್ರಯೋಗಗಳಾಗಿವೆ. ಹೊಸ ದನಿಯನ್ನು ನಾವು ಸೃಷ್ಟಿ ಮಾಡಿದ್ದೇವೆ ಎಂದು ವೀರ ಸಮರ್ಥ ಅವರು ಹೇಳಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!