ಪೂನಂ ಪಾಂಡೆ ವಿರುದ್ದ ಎಫ್.ಐ.ಆರ್.

ಬಾಲಿವುಡ್ ನಟಿ ಪೂನಂ ಪಾಂಡೆ ಮತ್ತು ಅವರ ಮೆನೇಜರ್ ವಿರುದ್ದ ಮುಂಬೈ ಪೊಲೀಸರು ಎಫ್.ಐ.ಆರ್ ದಾಖಲು ಮಾಡಿದ್ದಾರೆ.

ಅಲಿ ಕಾಶಿಪ್ ಎನ್ನುವ ವಕೀಲರು ನೀಡಿದ್ದ ದೂರಿನ ಮೇಲೆ ಸತ್ತ ನಾಟಕವಾಡಿದ ಪೂನಂ ಪಾಂಡೆ ಮತ್ತು ಅವರ ಮ್ಯಾನೇಜರ್ ಮೇಲೆ ಎಫ್.ಐ.ಆರ್ ದಾಖಲಾಗಿದೆ.

ಈ ಬೆನ್ನಲ್ಲೇ ಪೂನಂ ಪಾಂಡೆ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಮಹಾರಾಷ್ಟ್ರ ಶಾಸಕ ಸತ್ಯಜೀತ್ ತಾಂಬೆ ಮುಂಬೈ ಪೊಲೀಸರಿಗೆ ಸೂಚನೆ ಕೊಟ್ಟಿದ್ದಾರೆ.

ಗರ್ಭಕಂಠ ಕ್ಯಾನ್ಸರ್ ಕುರಿತಾಗಿ ಜಾಗೃತಿ ಮೂಡಿಸುವುದಕ್ಕಾಗಿ ಸತ್ತಿರುವುದಾಗಿ ಮ್ಯಾನೇಜರ್ ಮೂಲಕ ಸುದ್ದಿ ಮಾಡಿಸಿದ್ದ ಪೂನಂ ಪಾಂಡೆ ವಿರುದ್ಧ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ. ಗರ್ಭಕಂಠ ಕ್ಯಾನ್ಸರ್ ಕುರಿತಂತೆ ಜಾಗೃತಿ ಮೂಡಿಸುವುದಕ್ಕಾಗಿ ವಾಮಮಾರ್ಗ ಹಿಡಿದಿರುವ ಪೂನಂ ಪಾಂಡೆಯನ್ನು ಅರೆಸ್ಟ್ ಮಾಡಬೇಕು ಎಂದು ಅಭಿಮಾನಿಗಳು ಮತ್ತು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಸಾರ್ವಜನಿಕರು ಸೋಷಿಯಲ್ ಮೀಡಿಯಾದಲ್ಲಿ ‘ಬಾಯ್ಕಾಟ್‌ ಪೂನಂ ಪಾಂಡೆ’ ಟ್ರೆಂಡ್ ಶುರು ಮಾಡಿದ್ದಾರೆ.

ಸಾವಿನ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿದ ಪೂನಂ ಪಾಂಡೆಗೆ ಜೈಲು ಶಿಕ್ಷೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳು ಸುದ್ದಿಗಳನ್ನು ಹರಡಿದರೆ 3 ರಿಂದ 5 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಅಪರಾಧದ ಆರೋಪ ಹೊತ್ತಿರುವ ವ್ಯಕ್ತಿಯು 5 ರಿಂದ 10 ಲಕ್ಷದವರೆಗಿನ ದಂಡವನ್ನು ಪಾವತಿಸಬೇಕಾಗುತ್ತದೆ ಎಂದು ಕಾಯಿದೆ ಹೇಳುತ್ತದೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!