ಅಯೋಧ್ಯೆಯಲ್ಲಿ ರಾಮ ಪ್ರಾಣ ಪ್ರತಿಷ್ಠಾಪನೆ ಐತಿಹಾಸಿಕ ಕ್ಷಣದಲ್ಲಿ ಭಕ್ತಿ ಪ್ರಧಾನ ಸಿನಿಮಾ ‘ಶ್ರೀ ರಾಮ್, ಜೈ ಹನುಮಾನ್’ ಪೋಸ್ಟರ್ ರಿಲೀಸ್ ಆಗಿದೆ.
ಸುರೇಶ್ ಆರ್ಟ್ಸ್ ತಮ್ಮ ಮುಂಬರುವ ಚಿತ್ರ “ಶ್ರೀ ರಾಮ್, ಜೈ ಹನುಮಾನ್” ಪೋಸ್ಟರ್ ನ್ನು ಬಹಿರಂಗಪಡಿಸಿದೆ. ಸಿನಿಮಾ ಕನ್ನಡ, ಹಿಂದಿ, ತಮಿಳು, ತೆಲುಗು, ಮಲಯಾಳಂ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ‘ಶ್ರೀ ರಾಮ್, ಜೈ ಹನುಮಾನ್’ ಚಿತ್ರವು ಪೂಜ್ಯ ರಾಮಾಯಣದ ಬಗ್ಗೆ ಹೊಸ ದೃಷ್ಟಿಕೋನವನ್ನು ನೀಡುವ ಗುರಿಯನ್ನು ಹೊಂದಿದೆ.
ರಾಮ ಮಂದಿರ ಉದ್ಘಾಟನೆಯ ಸಮಯಕ್ಕೆ (12.33) ಚಿತ್ರದ ಪೋಸ್ಟರ್ ಅನಾವರಣಗೊಂಡಿದೆ. ಸಿನಿಮಾದ ಪೋಸ್ಟರ್‌ಗೆ “An Untold Epic of RAMAYANA” ಎಂಬ ಅಡಿಬರಹವಿದೆ. ರಾಮಾಯಣದ ಕುರಿತು ಎಲ್ಲೂ ದಾಖಲಾಗದ ಕೆಲವು ವಿಷಯಗಳನ್ನು ಈ ಚಿತ್ರದ ಮೂಲಕ ಹೇಳಲಾಗುತ್ತಿದೆ ಎಂಬುದು ಈ ಸಿನಿಮಾದ ಮತ್ತೊಂದು ವಿಶೇಷ. ಸದ್ಯ ಹರಿಬಿಟ್ಟಿರುವ ಪೋಸ್ಟರ್ ಸಾಕಷ್ಟು ಕುತೂಹಲ ಕೆರಳಿಸಿದೆ.
ಚಿತ್ರಕ್ಕೆ ಯುವ ನಿರ್ದೇಶಕ ಅವಧೂತ ಆಕ್ಷನ್ ಕಟ್ ಹೇಳುತ್ತಿದ್ದಾರೆ. ನಿರ್ಮಾಪಕ ಕೆ ಎ.ಸುರೇಶ್ ಅದ್ಧೂರಿಯಾಗಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಸುರೇಶ್ ಆರ್ಟ್ಸ್ ಬ್ಯಾನರ್ ಅಡಿಯಲ್ಲಿ ಪ್ಯಾನ್ ಇಂಡಿಯಾ ಸಿನಿಮಾ ಮೂಡಿ ಬರುತ್ತಿದೆ.
ಕನ್ನಡ, ತಮಿಳು, ತೆಲುಗು, ಹಿಂದಿ ಹಾಗೂ ಮಲಯಾಳಂನ ಖ್ಯಾತ ನಟರ ದೊಡ್ಡ ತಾರಾಬಳಗ ಚಿತ್ರದಲ್ಲಿ ಇರಲಿದೆ. ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ಸಿನಿಮಾದ ಸ್ಟೋರಿ ಬೋರ್ಡ್ ಮತ್ತು ವಿಎಫ್‌ಎಕ್ಸ್ ಕೆಲಸಗಳು ನಡೆಯುತ್ತಿವೆ.
Be the first to comment