ವಿನೋದ್ ಪ್ರಭಾಕರ್ ನಾಯಕ ನಟನಾಗಿ ಕಾಣಿಸಿಕೊಂಡಿರುವ ಫೈಟರ್ ಚಿತ್ರ 50 ದಿನಗಳನ್ನು ಪೂರೈಸಿದ್ದು, ಚಿತ್ರದ ನಿರ್ಮಾಪಕ ಸೋಮಶೇಖರ್ ಕೊಟ್ಟಿಗೇನಹಳ್ಳಿ ಅವರು ಸದ್ಯದಲ್ಲಿ ಬಿಗ್ ಅಪ್ಡೇಟ್ ನೀಡುವುದಾಗಿ ತಿಳಿಸಿದ್ದಾರೆ.
ಬಹುಕೋಟಿ ನಿರ್ಮಾಣದಲ್ಲಿ ಫೈಟರ್ ಚಿತ್ರ ನಿರ್ಮಾಣ ಆಗಿತ್ತು. ಚಿತ್ರವನ್ನು ಉಮೇಶ್ ಅವರು ನಿರ್ದೇಶನ ಮಾಡಿದ್ದರು. ಈಗ ಫೈಟರ್ ಚಿತ್ರ ಯಶಸ್ಸು ಕಂಡಿರುವ ಹಿನ್ನೆಲೆಯಲ್ಲಿ ನಿರ್ಮಾಪಕರು ಹೊಸ ಚಿತ್ರವನ್ನು ಘೋಷಿಸಲು ಸಿದ್ಧತೆ ನಡೆಸಿದ್ದಾರೆ.
ನಿರ್ಮಾಪಕರು ಕನ್ನಡದ ದೊಡ್ಡ ಸ್ಟಾರ್ ಚಿತ್ರವನ್ನು ಕೈಗೆತ್ತಿಕೊಳ್ಳಲು ಮುಂದಾಗಿದ್ದಾರೆ. ಸೋಮಶೇಖರ್ ಕೊಟ್ಟಿಗೆನಹಳ್ಳಿ ಅವರ ಮೂರನೇ ಪ್ರಾಜೆಕ್ಟ್ ಇದಾಗಿದ್ದು, ಈ ಬಗ್ಗೆ ಕೆಲವೇ ದಿನಗಳಲ್ಲಿ ಅಪ್ಡೇಟ್ ಹೊರ ಬೀಳಲಿದೆ ಎಂದು ತಿಳಿದು ಬಂದಿದೆ.
ಫೈಟರ್ ಚಿತ್ರದಲ್ಲಿ ವಿನೋದ್ ಪ್ರಭಾಕರ್ ಅವರು ರೈತನ ಮಗನಾಗಿ ಕಾಣಿಸಿಕೊಂಡಿದ್ದರು. ಪಾವನ ಗೌಡ ಮತ್ತು ಲೇಖಾ ಚಂದ್ರ ಅವರು ನಾಯಕಿಯರಾಗಿ ನಟಿಸಿದ್ದರು. ಹಿರಿಯ ನಟಿ ನಿರೋಷ ಅವರು ನಾಯಕನ ತಾಯಿ ಆಗಿ ಅಭಿನಯಿಸಿದ್ದರು. ಚಿತ್ರದಲ್ಲಿ ನಿಜವಾದ ಫೈಟರ್ ಅನ್ನ ಕೊಡುವ ರೈತ ಎನ್ನುವುದನ್ನು ತೋರಿಸಲಾಗಿತ್ತು.
ಫೈಟರ್ ಚಿತ್ರ ನಿರ್ಮಾಪಕ ಸೋಮಶೇಖರ ಕೊಟ್ಟಿಗೆನಹಳ್ಳಿ ಅವರ ಬ್ಯಾನರ್ ನಿಂದ ಹೊರಬಂದ ಎರಡನೇ ಚಿತ್ರ ಆಗಿತ್ತು.
____
Be the first to comment