‘ಶಾಖಾಹಾರಿ’ ಚಿತ್ರದ ಫಸ್ಟ್ಲುಕ್ ಬಿಡುಗಡೆಯಾಗಿದ್ದು ಬಾಣಸಿಗನಾಗಿ ಕಾಣಿಸಿಕೊಂಡಿರುವ ನಾಯಕ ರಂಗಾಯಣ ರಘು ಅವರ ಲುಕ್ ಗಮನ ಸೆಳೆಯುತ್ತಿದೆ.
ಫಸ್ಟ್ಲುಕ್ ನಲ್ಲಿ ಎಸ್.ಐ ಪಾತ್ರದಲ್ಲಿ ಕಾಣಿಸಿಕೊಂಡಿರುವ ಗೋಪಾಲಕೃಷ್ಣ ದೇಶಪಾಂಡೆ ಅಪರಾಧಿಗಾಗಿ ಹುಡುಕುತ್ತಿದ್ದಾರೆ ಎಂದು ಮೇಲ್ನೋಟಕ್ಕೆ ಗೋಚರಿಸುತ್ತಿದೆ. ಹಾಸ್ಯ ಪಾತ್ರಗಳಿಗೆ ಸೀಮಿತವಾಗಿದ್ದ ರಂಗಾಯಣ ರಘು ಈಗ ಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ‘ಬಾನ ದಾರಿಯಲ್ಲಿ’ ಚಿತ್ರದಲ್ಲಿ ಭಾವುಕ ಪಾತ್ರ ಮಾಡಿದ್ದ ರಘು ‘ಶಾಖಾಹಾರಿ’ ಚಿತ್ರದಲ್ಲಿ ಬೇರೆಯದೇ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ.
‘ಕೀಳಂಬಿ ಮೀಡಿಯಾ ಲ್ಯಾಬ್’ ಮೂಲಕ ರಾಜೇಶ್ ಕೀಳಂಬಿ ಹಾಗೂ ರಂಜಿನಿ ಪ್ರಸನ್ನ ಜೊತೆಗೂಡಿ ನಿರ್ಮಿಸಿರುವ ಚಿತ್ರಕ್ಕೆ ಸಂದೀಪ್ ಸುಂಕದ್ ಆಕ್ಷನ್-ಕಟ್ ಹೇಳಿದ್ದಾರೆ.
‘ತೀರ್ಥಹಳ್ಳಿಯ ಊರೊಂದರಲ್ಲಿ ನಡೆಯುವ ನಿಗೂಢ ಘಟನೆಯ ಸುತ್ತ ಸಾಗುವ ಕಥೆ ಇದಾಗಿದೆ. ಗೋಪಾಲಕೃಷ್ಣ ದೇಶಪಾಂಡೆ ಮತ್ತು ಸುಜಯ್ ಶಾಸ್ತ್ರಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಉಳಿದಂತೆ ಹರಿಣಿ, ಪ್ರತಿಮಾ ನಾಯಕ್ ಚಿತ್ರದಲ್ಲಿದ್ದಾರೆ. ಶೀಘ್ರದಲ್ಲಿಯೇ ಚಿತ್ರ ತೆರೆಗೆ ಬರಲಿದೆ’ ಎಂದು ನಿರ್ದೇಶಕ ಸಂದೀಪ್ ಹೇಳಿದ್ದಾರೆ.
ವಿಶ್ವಜಿತ್ ರಾವ್ ಛಾಯಾಗ್ರಹಣ, ಶಶಾಂಕ್ ನಾರಾಯಣ ಸಂಕಲನ, ಮಯೂರ್ ಅಂಬೆಕಲ್ಲು ಸಂಗೀತ ಚಿತ್ರಕ್ಕಿದೆ.
—–

Be the first to comment