Aade Nam God Review : ಇದು ಆಡನ್ನು ಗಾಡ್ ಮಾಡುವ ಕಥೆ!

ಚಿತ್ರ: ಆಡೇ ನಮ್ God

ನಿರ್ದೇಶನ: ಪಿ ಎಚ್ ವಿಶ್ವನಾಥ್
ನಿರ್ಮಾಣ: ಪ್ರೊ. ಬಿ ಬಸವರಾಜ್, ರೇಣುಕಾ ಬಸವರಾಜ್
ತಾರಾಗಣ: ನಟರಾಜ್, ಮಂಜುನಾಥ್ ಜಂಬೆ, ಅಜಿತ್ ಬೊಪ್ಪನಹಳ್ಳಿ, ಸಾರಿಕಾ ರಾವ್ ಇತರರು

ರೇಟಿಂಗ್: 3.5/5

ಮಾತು ಬಾರದ ಆಡನ್ನು ದೇವರನ್ನಾಗಿ ಮಾಡಿ, ಮನುಷ್ಯನ ಎಲ್ಲಾ ದುಃಖಗಳಿಗೆ ಇದೇ ಪರಿಹಾರ ಎಂದು ಜನರನ್ನ ಮೋಸಗೊಳಿಸುವ ಕುರಿತ ಕಥೆ ಆಡೇ ನಮ್ god.

ಚಿತ್ರ ನಾಲ್ಕು ಯುವಕರ ಸುತ್ತ ಸುತ್ತುತ್ತದೆ. ಬ್ರೋಕರ್, ವ್ಯಾನ್ ಡ್ರೈವರ್, ಕ್ಷೌರಿಕ, ಹೋಟೆಲ್ ನಡೆಸುವ ನಾಲ್ಕು ಯುವಕರು ದೇವಸ್ಥಾನಕ್ಕೆ ಹೋದಾಗ ಆಡೊಂದು ಸಿಗುತ್ತದೆ. ಅದನ್ನು ತಮ್ಮ ಜೊತೆ ಕರೆದುಕೊಂಡು ಬರುತ್ತಾರೆ. ಬಳಿಕ ಕೆಲವೊಂದು ಘಟನೆಗಳು ನಡೆಯುತ್ತದೆ. ಆಡಿಗೆ ಸೂಪರ್ ಪವರ್ ಇರಬಹುದು ಎನ್ನುವ ಜನರ ನಂಬಿಕೆಯನ್ನು ಎನ್ಕ್ಯಾಶ್ ಮಾಡಿಕೊಂಡ ಯುವಕರು ದೇವಸ್ಥಾನವನ್ನು ಕಟ್ಟುತ್ತಾರೆ. ಅದರಿಂದ ಸಾಕಷ್ಟು ಹಣ ಮಾಡುತ್ತಾರೆ. ಆದರೆ ಈ ರೀತಿ ಮಾಡಿದ ಹಣ ಅವರಿಗೆ ಶಾಪವಾಗಬಹುದು ಎನ್ನುವುದು ಗೊತ್ತಿರುವುದಿಲ್ಲ. ಮುಂದೆ ಏನಾಗುತ್ತದೆ ಎನ್ನುವುದನ್ನು ಚಿತ್ರ ನೋಡಿ ತಿಳಿದುಕೊಳ್ಳಬೇಕು.

ನಿರ್ದೇಶಕರು ಗಂಭೀರವಾದ ವಿಷಯವನ್ನು ಲಘು ಹಾಸ್ಯದೊಂದಿಗೆ ಹೇಳುವ ಯತ್ನವನ್ನು ಮಾಡಿದ್ದಾರೆ. ಇಲ್ಲಿ ಪ್ರೇಕ್ಷಕರಿಗೆ ಸಂದೇಶವನ್ನು ನೀಡುವ ಯತ್ನವನ್ನು ಕೂಡ ಮಾಡಿದ್ದಾರೆ. ಚಿತ್ರವನ್ನು ಸ್ವಲ್ಪ ಚುರುಕಾಗಿ ಹೇಳಿದ್ದಲ್ಲಿ ಪ್ರೇಕ್ಷಕರಿಗೆ ನಿಮ್ಮ ಇನ್ನಷ್ಟು ತಟ್ಟುವಲ್ಲಿ ಯಶಸ್ವಿ ಆಗುತ್ತಿತ್ತು.

ಸಿನಿಮಾದಲ್ಲಿ ನಟಿಸಿರುವ ನಟರಾಜ್, ಮಂಜುನಾಥ್ ಜಂಬೆ, ಅಜಿತ್ ಬೊಪ್ಪನಹಳ್ಳಿ, ಅನುಪ್ ಶೂನ್ಯ ಅವರು ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಚಿತ್ರದಲ್ಲಿ ಬಿ ಸುರೇಶ್ ಅವರು ದೇವಮಾನವನಾಗಿ ಕಾಣಿಸಿಕೊಂಡಿದ್ದಾರೆ. ಅವರ ಪಾತ್ರ ಗಮನ ಸೆಳೆಯುತ್ತದೆ.

ಛಾಯಾಗ್ರಾಹಕ ಪಿಕೆಎಚ್ ದಾಸ್ ಅವರು ಚಿತ್ರವನ್ನು ಚೆನ್ನಾಗಿ ಕಟ್ಟಿಕೊಡುವ ಯತ್ನ ಮಾಡಿದ್ದಾರೆ. ಲವ್, ಆಕ್ಷನ್ ಹೊರಟಾದ ಚಿತ್ರವಾಗಿ ಈ ಸಿನಿಮಾ ಗಮನ ಸೆಳೆಯುತ್ತದೆ.
___

Be the first to comment

Leave a Reply

Your email address will not be published. Required fields are marked *

Translate »
error: Content is protected !!